ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈ: ಬೆಂಗಳೂರಿನ ಪ್ರಯಾಣಿಕ ಹರ್ಷ ಪ್ರತಿಕ್ರಿಯೆ

By Mahesh
|
Google Oneindia Kannada News

ಚೆನ್ನೈ, ಮೇ.1: 'ಮೈ ಸುಡುವ ಬಿಸಿಲಿನಲ್ಲಿ ಯಾರು ಎಸಿ ಆಫ್ ಮಾಡಿದ್ದು ಎಂದುಕೊಳ್ಳುವಷ್ಟರಲ್ಲಿ ಬಾಂಬ್ ಸ್ಫೋಟದ ಸದ್ದು ಕೇಳಿಸಿತು. ನಾವಿದ್ದ್ ಬೋಗಿಯಿಂದ ಸ್ವಲ್ಪ ಮುಂದಿನ ಬೋಗಿಯಲ್ಲಿ ಸ್ಫೋಟವಾಗಿದೆ ಎಂದು ತಿಳಿದು ತಕ್ಷಣಕ್ಕೆ ಗಾಬರಿಯಾಯಿತು. ಆದರೆ, ಇಲ್ಲಿನ ಪೊಲೀಸರು, ರೈಲ್ವೆ ಸಿಬ್ಬಂದಿ ಭಯಭೀತಗೊಂಡಿದ್ದ ಪ್ರಯಾಣಿಕರಿಗೆ ಧೈರ್ಯ ಹೇಳಿದ ರೀತಿ ನಿಜಕ್ಕೂ ಶ್ಲಾಘನೀಯ...' ಹೀಗೆ ಬೆಂಗಳೂರು-ಗುವಹಾಟಿ ಎಕ್ಸ್ ಪ್ರೆಸ್ ನ ಪ್ರಯಾಣಿಕ ಶ್ರೀಹರ್ಷ ಸಾಲಿಮಠ ತಮ್ಮ ಅನುಭವವನ್ನು ಒನ್ ಇಂಡಿಯಾ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ನಮ್ಮ ಕುಟುಂಬವೆಲ್ಲ ದಾರ್ಜಲಿಂಗ್ ಪ್ರವಾಸ ಮಾಡುವ ಇಚ್ಛೆಯಿಂದ ಬೆಂಗಳೂರಿನಿಂದ ದಾರ್ಜಲಿಂಗ್ ಗೆ ಪ್ರಯಾಣ ಬೆಳೆಸಿದೆವು. ಒಟ್ಟು 9 ಜನ ಎಸಿ ಕೋಚ್ ಬುಕ್ ಮಾಡಿಕೊಂಡೆವು. ನಾವೆಲ್ಲ ಬಿ 5 ಎಸಿ ಕೋಚ್ ನಲ್ಲಿ ಪ್ರಯಾಣಿಸುತ್ತಿದ್ದೆವು. ಬೆಳಗ್ಗೆ 7.30ರ ಸುಮಾರಿಗೆ ಸ್ಲೀಪರ್ ಕೋಚ್ ನಲ್ಲಿ ಬ್ಲಾಸ್ಟ್ ಆಗಿದೆ. ಬೆಂಗಳೂರಿನಿಂದ ವಿಶಾಖ ಪಟ್ಟಣಂ ಗೆ ಹೊರಟಿದ್ದ ಗುಂಟೂರು ಮೂಲದ ಸ್ವಾತಿ ಎಂಬ ಯುವತಿ ಸೇರಿ 3 ಜನ ಸತ್ತಿದ್ದಾರೆ 13 ಜನ ತೀವ್ರವಾಗಿ ಗಾಯಗೊಂಡಿದ್ದಾರೆ.[ಹೆಲ್ಪ್ ಲೈನ್ ವಿವರ ಇಲ್ಲಿ ನೋಡಿ]

ಘಟನೆ ನಂತರ ಏನಾಯ್ತು?: ಎಲ್ಲಾ ಬೋಗಿಗಳನ್ನು ಖಾಲಿ ಮಾಡಿಸಲಾಯಿತು. ತಕ್ಷಣವೇ ಶ್ವಾನದಳ, ಬಾಂಬ್ ನಿಷ್ಕ್ತಿಯ ದಳ, ಕಮಾಂಡೋಗಳು ಸ್ಥಳಕ್ಕೆ ಆಗಮಿಸಿದರು. ಚೆನ್ನೈ ಎಸಿ ಬೋಗಿಯಿಂದ ನಿಲ್ದಾಣಕ್ಕೆ ಕಾಲಿಡುತ್ತಿದ್ದಂತೆ ಆಗುತ್ತಿದ್ದ ಶೆಖೆ ಅನುಭವದ ಜತೆಗೆ ಮುಂದೇನು ಎಂಬ ಆತಂಕವೂ ಎಲ್ಲರಲ್ಲಿ ಮನೆ ಮಾಡಿತ್ತು.. ಆದರೆ, ಆತಂಕವಾದ ವಾತಾವರಣ ತಿಳಿಗೊಂಡಿದ್ದು, ರೈಲು ಮತ್ತೊಮ್ಮೆ ಹೊರಡಲು ಸಿದ್ಧವಾಗಿದೆಮುಂದೆ ಓದಿ..[ಚಿತ್ರಕೃಪೆ: ಶ್ರೀಹರ್ಷ ಸಾಲಿಮಠ, ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ]

ಸಿಲಿಂಡರ್ ಸ್ಫೋಟದಂತೆ ಶಬ್ದ ಕೇಳಿಸಿತು

ಸಿಲಿಂಡರ್ ಸ್ಫೋಟದಂತೆ ಶಬ್ದ ಕೇಳಿಸಿತು

ಎಸಿ ಕೋಚ್ ನಲ್ಲಿದ್ದರೂ ಘಟನೆ ನಡೆದ ಸಮಯಕ್ಕೆ ನಿದ್ದೆ ಏನೂ ಮಾಡಿರಲಿಲ್ಲ. ಸ್ಫೋಟದ ಸದ್ದು ಸಿಲಿಂಡರ್ ಸ್ಫೋಟದಂತೆ ಕೇಳಿಸಿತು. ನಂತರ ಸ್ಲೀಪರ್ ಕೋಚ್ ನಲ್ಲಿ ಬಾಂಬ್ ಸ್ಫೋಟಗೊಂಡಿರುವುದು ಖಾತ್ರಿಯಾಯಿತು.
ಚಿತ್ರದಲ್ಲಿ: ಶ್ರೀಹರ್ಷ ಸಾಲಿಮಠ ಅವರ ಕುಟುಂಬ

ಚೆನ್ನೈ ನಿಲ್ದಾಣದ ಸ್ಫೋಟದ ನಂತರ ಚಿತ್ರ

ಚೆನ್ನೈ ನಿಲ್ದಾಣದ ಸ್ಫೋಟದ ನಂತರ ಚಿತ್ರ

ಸ್ಫೋಟದ ನಂತರ ಎಲ್ಲವೂ ಕ್ಷಣಾರ್ಧದಲ್ಲಿ ವ್ಯವಸ್ಥೆ ಮಾಡಿದರು. ಬೋಗಿಯಿಂದ ಜನರನ್ನು ಕೆಳಗಿಳಿಸಿ ಬೋಗಿಗಳನ್ನು ಪರೀಕ್ಷಿಸಿದರು.

ಶ್ರೀಹರ್ಷ ಸಾಲಿಮಠ ದಂಪತಿ

ಶ್ರೀಹರ್ಷ ಸಾಲಿಮಠ ದಂಪತಿ

ಶ್ರೀಹರ್ಷ ಸಾಲಿಮಠ ಹಾಗೂ ಪತ್ನಿ ಸಿಂಧು ಶ್ರೀಹರ್ಷ ದಂಪತಿ ಸೇರಿದಂತೆ 4 ಜನ ಮಕ್ಕಳು 5 ಜನ ದೊಡ್ಡವರು ದಾರ್ಜಲಿಂಗ್ ಪ್ರವಾಸ ನಿರತರಾಗಿದ್ದಾರೆ.

ದಾವಣಗೆರೆ ಮೂಲದ ಶ್ರೀಹರ್ಷ ಅವರು ಬೆಂಗಳೂರಿನ ಜಯನಗರದಲ್ಲಿರುವ PROEx ಕನ್ಸಲ್ಟೆನ್ಸಿ ಪೈ ಲಿ. ಸಂಸ್ಥೆ ಸಹಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಚೆನ್ನೈ ನಿಲ್ದಾಣದ ಸ್ಫೋಟದ ನಂತರ ಚಿತ್ರ

ಚೆನ್ನೈ ನಿಲ್ದಾಣದ ಸ್ಫೋಟದ ನಂತರ ಚಿತ್ರ

ಚೆನ್ನೈ ನಿಲ್ದಾಣದ ಸ್ಫೋಟದ ನಂತರ ಫ್ಲಾಟ್ ಫಾರಂ 9 ರ ಚಿತ್ರ

10 ನಿಮಿಷದಲ್ಲೇ ಕಾರ್ಯಾಚರಣೆ ಮಾಡಿದರು

10 ನಿಮಿಷದಲ್ಲೇ ಕಾರ್ಯಾಚರಣೆ ಮಾಡಿದರು

ನಮ್ಮ್ ಬ್ಯಾಗ್ ಗಳನ್ನು ಚೆಕ್ ಮಾಡಿದರು. ಘಟನೆ ನಡೆದ ಫ್ಲಾಟ್ ಫಾರಂ ಸುತ್ತಾ ಕಾವಲು ಹಾಕಿದರು. 10 ನಿಮಿಷದಲ್ಲೇ ಕಾರ್ಯಾಚರಣೆ ಮಾಡಿದರು.

ಚೆನ್ನೈ ನಿಲ್ದಾಣದ ಸ್ಫೋಟ ನಂತರ ತಪಾಸಣೆ

ಚೆನ್ನೈ ನಿಲ್ದಾಣದ ಸ್ಫೋಟ ನಂತರ ತಪಾಸಣೆ

ಪ್ರತಿಯೊಬ್ಬ ಪ್ರಯಾಣಿಕರ ಲಗ್ಗೇಜುಗಳನ್ನು ಪೊಲೀಸರು, ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ತಪಾಸಣೆ ಮಾಡಿದರು.

ಪ್ರಯಾಣಿಕರೆಲ್ಲರೂ ಧೈರ್ಯವಾಗಿದ್ದಾರೆ

ಪ್ರಯಾಣಿಕರೆಲ್ಲರೂ ಧೈರ್ಯವಾಗಿದ್ದಾರೆ

ಟಿಕೆಟ್ ತೆಗೆದುಕೊಂಡ ಎಲ್ಲರೂ ಧೈರ್ಯವಾಗಿ ಮುಂದೆ ಹೊರಟಿದ್ದಾರೆ. ಯಾರು ಹೆದರಿಕೊಂಡು ಹಿಂತಿರುಗುತ್ತಿಲ್ಲ. ಎಲ್ಲರಿಗೂ ನೀರು, ಬಿಸ್ಕೆಟ್ ನೀಡಿ ರೈಲ್ವೆ ಸಿಬ್ಬಂದಿ ಹಾಗೂ ಪೊಲೀಸರು ಧೈರ್ಯ ತುಂಬಿದ್ದಾರೆ. ನಾವೆಲ್ಲ ಚೆನ್ನೈ ಸೆಂಟ್ರಲ್ ಸ್ಟೇಷನ್ ನಲ್ಲೇ ಇದ್ದೇವೆ. 9 ಗಂಟೆ ಸುಮಾರಿಗೆ ಶಂಕಿತ ಆರೋಪಿ ಬಂಧನದ ಸುದ್ದಿ ಬಂತು.

English summary
Bangalore based Passenger Sriharsha Salimath spoke to Oneindia Kannada about the Twin bomb blasts at Chennai Central railway station. Salimath along with his family is travelling to Darjeeling through Guwahati-Bangalore Express He thanked police and commandos for necessary arrangements for the passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X