ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್ ಪ್ಲಸ್ ಮುಖ್ಯಸ್ಥ ಸ್ಥಾನಕ್ಕೆ ವಿವೇಕ್ ಗುಡ್ ಬೈ

By Mahesh
|
Google Oneindia Kannada News

ಬೆಂಗಳೂರು, ಏ.25:ಸರ್ಚ್ ಇಂಜಿನ್ ದಿಗ್ಗಜ ಗೂಗಲ್ ಸಂಸ್ಥೆಯ ಸಾಮಾಜಿಕ ಜಾಲ ತಾಣ ಗೂಗಲ್ ಪ್ಲಸ್ ನ ಮುಖ್ಯಸ್ಥ ವಿವೇಕ್ ಜಿ ಸಂಸ್ಥೆಯನ್ನು ತೊರೆದಿದ್ದಾರೆ. ಸುಮಾರು ಎಂಟು ವರ್ಷಗಳ ನಂತರ ಇಂಟರ್ನೆಟ್ ಕಂಪನಿಗೆ ವಿವೇಕ್ ಗುಡ್ ಬೈ ಹೇಳಿದ್ದಾರೆ.

ಭಾರತೀಯ ಮೂಲದ ವಿವೇಕ್ ಗುಂಡೊತ್ರಾ ಅವರು ಗೂಗಲ್ ಸಂಸ್ಥೆಯಲ್ಲಿ ಹಿರಿಯ ಉಪಾಧ್ಯಕ್ಷ(ಸಾಮಾಜಿಕ ಜಾಲ ತಾಣ ವಿಭಾಗ) ಸ್ಥಾನದಲ್ಲಿದ್ದರು. ಕಳೆವ ಮೂರು ವರ್ಷಗಳಿಂದ ಗೂಗಲ್ ಪ್ಲಸ್ ಸಾಮಾಜಿಕ ಜಾಲ ತಾಣದ ನಿರ್ವಹಣೆಯ ಹೊಣೆ ಹೊತ್ತಿದ್ದರು.

ಗೂಗಲ್ ನಂಥ ಸಂಸ್ಥೆ ಹಾಗೂ ಅಲ್ಲಿನ ಸಿಬ್ಬಂದಿಗಳ ಜತೆ ಕಾರ್ಯ ನಿರ್ವಹಿಸಿರುವುದು ನನ್ನ ಸೌಭಾಗ್ಯ. ಎಂಟು ವರ್ಷಗಳ ನಂತರ ಗೂಗಲ್ ಸಂಸ್ಥೆ ತೊರೆಯುತ್ತಿದ್ದೇನೆ ಎಂದು ವಿವೇಕ್ ಪ್ರತಿಕ್ರಿಯಿಸಿದ್ದಾರೆ. ಆದರೆ, ಹುದ್ದೆ ತೊರೆಯುತ್ತಿರುವ ಕಾರಣವನ್ನು ವಿವೇಕ್ ಹೊರಹಾಕಿಲ್ಲ.

Google+ chief Vivek Gundotra quits

ಗೂಗಲ್ ಸಂಸ್ಥೆ ಸಿಇಒ ಲಾರಿ ಪೇಜ್ ಅವರು ವಿವೇಕ್ ಅವರನ್ನು ಹೊಗಳಿ, ಗೂಗಲ್ ಪ್ಲಸ್ ಗಾಗಿ ಅವರ(vic) ದುಡಿಮೆ ಅನುಕರಣೀಯ. ಮೊಬೈಲ್ ಅಪ್ಲಿಕೇಷನ್ ಹಾಗೂ ಇನ್ನಿತರ ಡೆವಲಪಿಂಗ್ ಸಂಪರ್ಕ ಸಾಧನ ಅಭಿವೃದ್ಧಿ ಪಡಿಸುವಲ್ಲಿ ನಿಮ್ಮ ಪಾತ್ರ ಹಿರಿದಾಗಿದೆ. ಶೂನ್ಯದಿಂದ ಗೂಗಲ್ ಪ್ಲಸ್ ಕಟ್ಟಿ ಬೆಳೆಸಿದ್ದೀರಿ. ಗೂಗಲ್ ಪ್ಲಸ್ ಸಾಮಾಜಿಕ ಜಾಲತಾಣವಷ್ಟೇ ಆಗಿರದೇ ಸಾಮಾಜಿಕ ಪದರವನ್ನು ಸೃಷ್ಟಿ ಮಾಡಿ ಹಲವು ಸಂಸ್ಥೆಗಳಿಗೆ ನೆರವಾಗುವಂತೆ ಮಾಡಿದ ನಿಮ್ಮ ಸಾಧನೆ ನಮಗೆ ಮಾರ್ಗದರ್ಶಿ ಎಂದು ವಿವೇಕ್ ಅವರನ್ನು ಪೇಜ್ ಕೊಂಡಾಡಿದ್ದಾರೆ.

ಸುಮಾರು 500 ಮಿಲಿಯನ್ ಬಳಕೆದಾರರನ್ನು ಹೊಂದಿದ್ದರೂ ಗೂಗಲ್ ಪ್ಲಸ್ ಇನ್ನೂ ಮಾರುಕಟ್ಟೆಯಲ್ಲಿ ಮೇಲಕ್ಕೇರುವಲ್ಲಿ ಸಫಲತೆ ಕಂಡಿಲ್ಲ. ಫೇಸ್ ಬುಕ್ ಸದ್ಯಕ್ಕೆ 1.3 ಬಿಲಿಯನ್ ಬಳಕೆದಾರರೊಂದಿಗೆ ಮುನ್ನಡೆ ಕಾಯ್ದುಕೊಂಡಿದೆ. ಗೂಗಲ್ ಪ್ಲಸ್ ಮುಖ್ಯಸ್ಥರಾಗುವ ಮುನ್ನ ವಿವೇಕ್ ಅವರು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ನ ಮುಖ್ಯ ಅಪ್ಲಿಕೇಷನ್ ವಿನ್ಯಾಸ, ಅಭಿವೃದ್ಧಿಯಲ್ಲಿ ತೊಡಗಿದ್ದರು.[ಗೂಗಲ್‌ ಹಿಂದಿರುವ ಭಾರತೀಯ ಟೆಕ್ಕಿಗಳು]

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ಮದ್ರಾಸ್ ನ ಪದವೀಧರರಾಗಿರುವ ವಿವೇಕ್ ಅವರು ಮೈಕ್ರೋಸಾಫ್ಟ್ ನಲ್ಲಿ ಸುಮಾರು 15 ವರ್ಷಗಳ ಕಾಲ ದುಡಿದಿದ್ದಾರೆ. ವಿಂಡೋಸ್ ಲೈವ್ ಆನ್ ಲೈನ್ ಸರ್ವೀಸ್ ಇವರದ್ದೇ ಆವಿಷ್ಕಾರ. ವಿವೇ ಕ್ ಈಗ ಮತ್ತೊಮ್ಮೆ ಮೈಕ್ರೋಸಾಫ್ಟ್ ಸೇರುತ್ತಾರಾ? ಅಥವಾ ಫೇಸ್ ಬುಕ್ ತೆಕ್ಕೆಗೆ ಬೀಳುತ್ತಾರಾ? ಕಾದು ನೋಡಬೇಕಿದೆ.(ಪಿಟಿಐ)

English summary
Vivek Gundotra, chief of Google’s social networking venture Google+, is leaving the Internet company after nearly eight years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X