ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ ಪ್ರಧಾನಿಯಾದ ದಿನ ಉಚಿತ ಮೆಂತೆ ಪಕೋಡ!

By Prasad
|
Google Oneindia Kannada News

ಬೆಂಗಳೂರು, ಮೇ 9 : ಒಂದೇ ಒಂದು ಚುನಾವಣೆಯನ್ನೂ ಎದುರಿಸದೆ ಹತ್ತು ವರ್ಷಗಳ ಕಾಲ ದೇಶವನ್ನಾಳಿದ ಸಭ್ಯ ರಾಜಕಾರಣಿ, ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಮನಮೋಹನ ಸಿಂಗ್ ಅವರು ಮೇ 16ರಂದು ಫಲಿತಾಂಶ ಪ್ರಕಟವಾಗುವ ಮೊದಲೇ 7, ರೇಸ್ ಕೋರ್ಸ್ ರಸ್ತೆಯಲ್ಲಿರುವ ಅಧಿಕೃತ ನಿವಾಸವನ್ನು ಖಾಲಿ ಮಾಡುತ್ತಿದ್ದಾರೆ. ಆ ಮನೆಯನ್ನು ಫಲಿತಾಂಶದ ನಂತರ ಪ್ರವೇಶಿಸುವವರು ಯಾರು?

ಪ್ರಧಾನಿ ಸಿಂಗ್ ಖಾಲಿ ಮಾಡುತ್ತಿರುವ ಮನೆಯನ್ನು ಯಾರು ಪ್ರವೇಶಿಸುತ್ತಾರೋ ಬಲ್ಲವರು ಯಾರು? ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ? ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ? ಮೂರನೇ ರಂಗದ ಯಾರಾದರೂ ನಾಯಕ/ನಾಯಕಿ? ಅಥವಾ ಊಹೆ ಕೂಡ ಮಾಡಲಾಗದ ವ್ಯಕ್ತಿ ದೇಶವನ್ನಾಳುತ್ತಾರಾ?


ಊಹಾಪೋಹಗಳೇನೇ ಇರಲಿ, ಬಿಜೆಪಿ ನೇತೃತ್ವದ ಎನ್‌ಡಿಎ ಅತ್ಯಧಿಕ ಸೀಟುಗಳನ್ನು ಗೆಲ್ಲುವುದು ಗ್ಯಾರಂಟಿ ಎಂದು ಹಲವಾರು ಸಮೀಕ್ಷೆಗಳು ಹೇಳಿವೆ. ಸಮೀಕ್ಷೆಗಳು ಸುಳ್ಳಾದರೂ ಸುಳ್ಳಾಗಬಹುದು. ಆದರೆ, ಕೇಂದ್ರದಲ್ಲಿ ಬದಲಾವಣೆಯನ್ನು ಬಯಸುತ್ತಿರುವ ಶ್ರೀಸಾಮಾನ್ಯ ಕನಸು ಕಾಣುವುದನ್ನು ಸುಳ್ಳು ಮಾಡಲಾಗಲಿ, ಅಲ್ಲಗಳೆಯಲಾಗಲಿ ಸಾಧ್ಯವೆ? [ಮೋದಿ ಜೊತೆ ಅರ್ನಬ್ ಸಂದರ್ಶನ]

ಇಲ್ಲೊಬ್ಬ ಏನು ಮಾಡುತ್ತಿದ್ದಾನೋ ನೋಡಿ. ಮೇ 16ರಂದು ಫಲಿತಾಂಶ ಪ್ರಕಟವಾಗಿ, ಕಾಂಗ್ರೆಸ್ ಮಣ್ಣುಮುಕ್ಕಿ, ಬಿಜೆಪಿ ಜಯಭೇರಿ ಬಾರಿಸಿ, ನರೇಂದ್ರ ಮೋದಿ ಭಾರತದ ಪ್ರಧಾನಿಯಾಗುವುದು ಖಚಿತವಾದರೆ ಬಂದವರಿಗೆಲ್ಲ ಮೇಥಿ ಪಕೋಡಾ (ಮೆಂತೆ ಪಕೋಡಾ) ಪುಗಸಟ್ಟೆಯಾಗಿ ಹಂಚಿ ಸಂತಸ ಹಂಚಿಕೊಳ್ಳುವುದಾಗಿ ಪ್ರಕಟಿಸಿದ್ದಾನೆ. ಅಭಿಮಾನಿಗಳ ಆಸೆ, ಪ್ರೀತಿಗೆ ಎಣೆಯುಂಟೆ?

ಅಮೆರಿಕಾದ ನ್ಯೂಜೆರ್ಸಿಯ ಎಡಿಸನ್‌ನಲ್ಲಿ 'ಬಾಂಬೆ ಸ್ಪೈಸ್ II' ಹೋಟೆಲ್ ಇಟ್ಟುಕೊಂಡಿರುವ ಭೂಪನೊಬ್ಬ, ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾಗಿ ಆಯ್ಕೆಯಾದರೆ, ಮೇ 16ರಂದು ಮಧ್ಯಾಹ್ನ 12 ಗಂಟೆಯಿಂದ ಸಂಜೆ 5ರ ತನಕ ಮೆಂತೆ ಪಕೋಡಾವನ್ನು ಬಿಟ್ಟಿಯಾಗಿ ಹಂಚುವುದಾಗಿ ಘೋಷಿಸಿದ್ದಾನೆ. ರಾಹುಲ್ ಪ್ರಧಾನಿಯಾದರೆ ಹಾಗೆ, ಹೀಗೆ ಮಾಡುವುದಾಗಿ ಇನ್ನೂ ಯಾರೂ ಘೋಷಿಸಿದಂತಿಲ್ಲ.

ಇದನ್ನು ಹುಚ್ಚು ಅಂತೀರೋ, ಅಭಿಮಾನದ ಪರಮಾವಧಿ ಅಂತೀರೋ, ಆತ್ಮವಿಶ್ವಾಸ ಅಂತೀರೋ ಅಥವಾ ವಾಸ್ತವ ಅಂತೀರೋ ನಿಮಗೆ ಬಿಟ್ಟಿದ್ದು. ಆದರೆ, ನರೇಂದ್ರ ಮೋದಿ ಅವರು ಪ್ರಧಾನಿಯಾದರೆ ಅಮೆರಿಕಾದಲ್ಲಿ ಬಿಟ್ಟಿ ಪಕೋಡಾ ಸಿಗುವುದಂತೂ ಗ್ಯಾರಂಟಿ. ಬೇಕಿದ್ದರೆ ವಿಮಾನ ಟಿಕೆಟ್ ಈಗಲೇ ಬುಕ್ ಮಾಡಿಟ್ಟುಕೊಳ್ಳಿ.

ಮೋದಿ ಪ್ರಧಾನಿಯಾದರೆ ಭಾರತದಲ್ಲಿ ಎಷ್ಟು ಲಡ್ಡುಗಳು ಹಂಚಿಕೆಯಾಗುತ್ತವೋ, ಎಷ್ಟು ಪಟಾಕಿಗಳು ಸುಟ್ಟು ಭಸ್ಮವಾಗುತ್ತವೋ, ಎಷ್ಟು ಚಹಾ ಸಂತರ್ಪಣೆಯಾಗುತ್ತದೋ, ಯಾರ್ಯಾರು ದೇಶಬಿಟ್ಟು ಹೋಗುತ್ತಾರೋ, ದೇಶ ಬಿಟ್ಟು ಹೋದವರು ಯಾರ್ಯಾರು ವಾಪಸ್ ಭಾರತಕ್ಕೆ ಬರುತ್ತಾರೋ?

English summary
A person in New Jersey, USA has declared that on May 16th, on the day of vote counting in India, if Narendra Modi is elected as Prime Minister of India, he is going to distribute Methi Pakoda free to everyone. Do you call it height of fanaticism?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X