ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಯೋಗದಿಂದ ಅನಂತ್, ಕಾರ್ನಾಡ್ ಚಿತ್ರಗಳಿಗೆ ಎತ್ತಂಗಡಿ?

By Srinath
|
Google Oneindia Kannada News

ಬೆಂಗಳೂರು, ಏಪ್ರಿಲ್ 8- ಕುಲಾಧಿಪತಿ ಡಾ. ಯುಆರ್ ಅನಂತಮೂರ್ತಿ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಸಂದರ್ಭದಲ್ಲಿ ಆಯೋಗವು ಮತ್ತೊಂದು ವಿಚಿತ್ರ ಸನ್ನಿವೇಶ ಎದುರಿಸುವಂತಾಗಿದೆ. ಏನಪ್ಪಾ ಅಂದರೆ ಜ್ಞಾನಪೀಠ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿಗಳಾದ ಅನಂತಮೂರ್ತಿ ಮತ್ತು ಗಿರೀಶ್ ಕಾರ್ನಾಡ್ ಇಬ್ಬರ ಭಾವಚಿತ್ರಗಳನ್ನೂ ಸಾರ್ವಜನಿಕ ಸ್ಥಳಗಳಿಂದ ತೆಗೆದುಹಾಕುವ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಿದೆ.

ಈ ಮಧ್ಯೆ, ಕುಲಾಧಿಪತಿಯಾಗಿದ್ದುಕೊಂಡು ಕಾಂಗ್ರೆಸ್ ಪರ ಪ್ರಚಾರದಲ್ಲಿ ತೊಡಗಿರುವ ಅನಂತ ಮೂರ್ತಿ ಮತ್ತು ಗಿರೀಶ್ ಕಾರ್ನಾಡ್ ಅವರ ಫೋಟೋಗಳನ್ನು ಶಂಕರಪುರಂನಲ್ಲಿರುವ ಕನ್ನಡದ ಕಟ್ಟೆ ಬಳಗ ಆವರಣದಲ್ಲಿ ಕಿಡಿಗೇಡಿಗಳು ಹರಿದುಹಾಕಿರುವ ಘಟನೆ ವರದಿಯಾಗಿದೆ.

ಇದೇ ವೇಳೆ ಪ್ರಮುಖ ಪ್ರತಿಪಕ್ಷವಾದ ಬಿಜೆಪಿಯು ಅನಂತಮೂರ್ತಿ ಮತ್ತು ಗಿರೀಶ್ ಕಾರ್ನಾಡ್ ಅವರ ಫೋಟೋಗಳನ್ನು ಮತದಾನ ಮುಗಿಯುವವರೆಗೂ (ಏಪ್ರಿಲ್ 17) ಸಾರ್ವಜನಿಕ ಸ್ಥಳಗಳಿಂದ ತೆಗೆದುಹಾಕಿಸುವಂತೆ ಚುನಾವಣಾ ಆಯೋಗಕ್ಕೆ ಮೊರೆಯಿಟ್ಟಿದೆ.

ec-may-remove-ananthamurthy-karnad-pictures-in-karnataka
ಅನಂತಮೂರ್ತಿ ಮತ್ತು ಗಿರೀಶ್ ಕಾರ್ನಾಡ್ ಇಬ್ಬರೂ ಬಹಿರಂಗವಾಗಿ ಕಾಂಗ್ರೆಸ್ ಪರ ಪ್ರಚಾರದಲ್ಲಿ ತೊಡಗಿರುವುದು ಆಯೋಗದ ಗಮನಕ್ಕೂ ಬಂದಿದೆ. ಹಾಗಾಗಿ ಆಯೋಗವು ಈಗ ಅನಿವಾರ್ಯವಾಗಿ ಕ್ರಮ ಕೈಗೊಳ್ಳಬೇಕಾಗಿದೆ. ಆಯೋಗದ ಶಿಷ್ಟಾಚಾರದ ಪ್ರಕಾರ ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ರೀತಿಯ ಪ್ರಚಾರ ಸಾಮಗ್ರಿಯನ್ನು ಸಾರ್ವಜನಿಕ ಸ್ಥಳದಲ್ಲಿ ಪ್ರದರ್ಶಿಸುವಂತಿಲ್ಲ.

ಅನಂತಮೂರ್ತಿ ಮತ್ತು ಗಿರೀಶ್ ಕಾರ್ನಾಡ್ ಇಬ್ಬರೂ ಬಹಿರಂಗವಾಗಿಯೇ ಕಾಂಗ್ರೆಸ್ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಮತ್ತು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಖಂಡಿಸಿ, ಅವರ ವಿರುದ್ಧ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ದೂರಿದೆ.

ಕರ್ನಾಟಕದಲ್ಲಿ ರಾಜ್ಯ ಸರಕಾರದ ಅಧೀನದಲ್ಲಿರುವ ಬಸ್ಸುಗಳು, ಬಸ್ ಸ್ಟಾಂಡುಗಳು, ಶಾಲೆಗಳು ಮತ್ತಿತರ ಆಯಕಟ್ಟಿನ ಸ್ಥಳಗಳಲ್ಲಿ ರಾಜ್ಯದ ಎಲ್ಲ ಎಂಟು ಜ್ಞಾನಪೀಠ ಪ್ರಶಸ್ತಿ ವಿಜೇತರ ಚಿತ್ರಗಳನ್ನು ಹಾಕಿದೆ. ಪಾರ್ಕು ಮತ್ತು ಪ್ರಮುಖ ಸ್ಥಳಗಳಲ್ಲಿ ಗೋಡೆಗಳ ಮೇಲೂ ಜ್ಞಾನಪೀಠ ಪ್ರಶಸ್ತಿ ವಿಜೇತರ ಚಿತ್ರಗಳನ್ನು ಬಿಡಿಸಲಾಗಿದೆ. ಇದರಿಂದ ಮತದಾರರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಹಾಗಾಗಿ ಇವುಗಳನ್ನು ಚುನಾವಣೆ ಮುಗಿಯುವವರೆಗೂ ಮರೆಮಾಚಬೇಕು ಎಂದು ಬಿಜೆಪಿಯು ಆಯೋಗದ ಗಮನ ಸೆಳೆದಿದೆ.

English summary
Lok Sabha Election 2014 - Election Commission may remove Ananthamurthy, Karnad pictures from public places, buses. Both Ananthamurthy and Girish Karnad are openly campaigning for the Congress and opposing the BJP's PM nominee Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X