ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಂಚನೆ ಕೇಸ್ : ಯಾವುದೇ ಕ್ಷಣದಲ್ಲಿ ಕಾರ್ತಿಕ್ ಗೌಡ ಬಂಧನ

By Mahesh
|
Google Oneindia Kannada News

ಬೆಂಗಳೂರು, ಸೆ.4: ನಟಿ ಮೈತ್ರಿಯಾ ಗೌಡ ಅವರಿಗೆ ವಂಚನೆ ಮಾಡಿರುವ ಆರೋಪ ಹೊತ್ತಿರುವ ರೈಲ್ವೆ ಸಚಿವ ಡಿ.ವಿ ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ ಗೌಡ ವಿರುದ್ಧ ಬಂಧನ ವಾರೆಂಟ್ ಜಾರಿಗೊಳಿಸಲಾಗಿದೆ. 8ನೇ ಎಸಿಎಂಎಂ ನ್ಯಾಯಾಲಯ ಕಾರ್ತಿಕ್ ಗೆ ಬಂಧನ ವಾರೆಂಟ್ ನೀಡಿದೆ ಎಂದು ಆರ್. ಟಿ ನಗರ ಪೊಲೀಸರು ಹೇಳಿದ್ದಾರೆ.

ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಪುತ್ರ ಕಾರ್ತಿಕ್ ಗೌಡ ವಿರುದ್ಧ ನಟಿ ಮೈತ್ರಿಯಾ ಗೌಡ ಅತ್ಯಾಚಾರ, ಅಪಹರಣ ಹಾಗೂ ವಂಚನೆ ಆರೋಪದಡಿ ಆರ್‌ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಆರ್.ಟಿ ನಗರ ಪೊಲೀಸರು ತನಿಖೆ ಕೈಗೊಂಡಿದ್ದು, ವಿಚಾರಣೆಗೆ ಹಾಜರಾಗುವಂತೆ ಕಾರ್ತಿಕ್‌ ಗೌಡ ಅವರಿಗೆ ಸೆಪ್ಟೆಂಬರ್ 1ರಂದು ನೋಟೀಸ್ ನೀಡಿದ್ದರು. ಸೆಪ್ಟೆಂಬರ್ 3ರೊಳಗೆ ವಿಚಾರಣೆಗೆ ಹಾಜರಾಗಬೇಕು ಎಂದು ತಿಳಿಸಿದ್ದರು.[ತಪ್ಪಿದ್ದರೆ ನನ್ನನ್ನು ಹ್ಯಾಂಗ್ ಮಾಡಿ: ಮೈತ್ರಿಯಾ]

ಆದರೆ ನಿನ್ನೆ ಸಂಜೆಯೊಳಗೆ ಕಾರ್ತಿಕ್ ವಿಚಾರಣೆಗೆ ಹಾಜರಾಗದ ಕಾರಣ ಪೊಲೀಸರು ಅವರ ಬಂಧನಕ್ಕೆ ವಾರೆಂಟ್ ನೀಡುವಂತೆ ಕೋರ್ಟಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಪೂರಕವಾಗಿ ಕೋರ್ಟ್ ಗುರುವಾರ ಬಂಧನ ವಾರೆಂಟ್ ಜಾರಿಗೊಳಿಸಿದೆ. ಕಾರ್ತಿಕ್ ವಿರುದ್ಧ ಐಪಿಸಿ ಸೆಕ್ಷನ್ 420 ಮತ್ತು 376ರ ಅಡಿಯಲ್ಲಿ ಕಾರ್ತಿಕ್ ವಿರುದ್ಧ ಕೇಸ್ ದಾಖಲಾಗಿದೆ. [ಮೈತ್ರಿಯಾ ಪ್ರಕರಣ: ಬಿಗ್ ಬಾಸ್ ಗಳಿಗೆ ಬಿಗ್ ಬಾಸ್]

ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ

ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ

ಜಾಮೀನು ಅರ್ಜಿ ವಿಚಾರಣೆ: ಆದರೆ, ಈ ಪ್ರಕರಣ ಸಂಬಂಧಿಸಿದಂತೆ ಕೇಂದ್ರ ಸಚಿವ ಡಿವಿಎಸ್ ಪುತ್ರ ಕಾತೀಕ್‌ಗೌಡ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಇಂದು ಮಧ್ಯಾಹ್ನ ನಡೆಯಲಿದೆ.

ಬೆಂಗಳೂರಿನ ಸೆಷನ್ಸ್ ಕೋರ್ಟ್‌ನಲ್ಲಿ ಗುರುವಾರ ಮಧ್ಯಾಹ್ನ ಕಾರ್ತಿಕ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಕೋರ್ಟ್‌ನ ಮುಂದಿನ ಆದೇಶದವರೆಗೂ ಕಾರ್ತಿಕ್‌ಗೌಡ ಪೊಲೀಸರ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಕಡಿಮೆ ಇದೆ.

ಅರ್ಜಿ ವಿಚಾರಣೆ ವೇಳೆ ಕಾರ್ತಿಕ್‌ಗೌಡಗೆ ಜಾಮೀನು ನೀಡಬಾರದು ಎಂದು ಪೊಲೀಸರು ಆಕ್ಷೇಪಣೆ ಸಲ್ಲಿಸಿ ಬಂಧನ ವಾರೆಂಟ್ ಪಡೆದುಕೊಂಡಿದ್ದಾರೆ. ಒಂದು ವೇಳೆ ಕಾರ್ತಿಕ್ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯಲ್ಲಿ ಕಾರ್ತಿಕ್ ಪರ ತೀರ್ಪು ಹೊರ ಬಂದರೆ ಬಂಧನ ವಾರೆಂಟ್ ರದ್ದಾಗಲಿದೆ.

ವೈದ್ಯಕೀಯ ಪರೀಕ್ಷೆ ವರದಿ ಏನು ಹೇಳುತ್ತದೆ?

ವೈದ್ಯಕೀಯ ಪರೀಕ್ಷೆ ವರದಿ ಏನು ಹೇಳುತ್ತದೆ?

ಮೈತ್ರಿಯಾ ಗೌಡ ಬಿನ್ ವೆಂಕಟೇಶ ಗೌಡ ಅವರ ಮೇಲೆ ಯಾವುದೇ ಅತ್ಯಾಚಾರ ನಡೆದಿಲ್ಲ. ಎರಡು ತಿಂಗಳ ಹಿಂದೆ ಅವರು ದೈಹಿಕ ಸಂಪರ್ಕಕ್ಕೆ ಒಳಪಟ್ಟಿದ್ದಾರೆ. ಅತ್ಯಾಚಾರ ನಡೆದಿರುವ ಬಗ್ಗೆ ಯಾವುದೇ ಕುರುಹು ಸಿಕ್ಕಿಲ್ಲ ಎಂದು ಡಾ. ಅಂಬೇಡ್ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ನೀಡಿದ ವರದಿಯಲ್ಲಿ ಹೇಳಲಾಗಿದೆ. [ವರದಿ ವಿವರ ಇಲ್ಲಿ ಓದಿ]

ಮೈತ್ರಿಯಾ ಹೇಳಿಕೆ ಮಾತ್ರ ದಾಖಲು

ಮೈತ್ರಿಯಾ ಹೇಳಿಕೆ ಮಾತ್ರ ದಾಖಲು

ಮೈತ್ರಿಯಾ ಗೌಡ ನಗರದ 8ನೇ ಎಸಿಎಂಎಂ ನ್ಯಾಯಾಲಯದಲ್ಲಿ ಸೋಮವಾರ ಮತ್ತೊಮ್ಮೆ ಹಾಜರಾಗಿ ಹೇಳಿಕೆ ದಾಖಲಿಸಿದ್ದರು. ಇದಲ್ಲದೆ ಮೈತ್ರಿಯಾರನ್ನು 10 ಗಂಟೆಗಳ ವಿಚಾರಣೆ ನಡೆಸಲಾಯಿತು. ಸುಸ್ತಾಗಿ ಮೈತ್ರಿಯಾ ಆಸ್ಪತ್ರೆ ಸೇರಿ ಬ್ರೇಕ್ ತೆಗೆದುಕೊಂಡು ಮತ್ತೊಮ್ಮೆ ವಿಚಾರಣೆ ಎದುರಿಸಿದರು. ಅದರೆ, ಕೇಸ್ ದಾಖಲಿಸಿಕೊಂಡ ದಿನದಿಂದಲೂ ಕಾರ್ತಿಕ್ ಗೌಡರಿಂದ ಅಧಿಕೃತ ಹೇಳಿಕೆಯನ್ನು ಪಡೆಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.[62 ಪುಟಗಳ ಹೇಳಿಕೆ ನೀಡಿದ ಮೈತ್ರಿಯಾ]

ವಂಚನೆ ಕೇಸ್ ಸುತ್ತಾ ತನಿಖೆ ಹೆಚ್ಚು

ವಂಚನೆ ಕೇಸ್ ಸುತ್ತಾ ತನಿಖೆ ಹೆಚ್ಚು

ವಂಚನೆ ಮತ್ತು ಅತ್ಯಾಚಾರ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ ಗೌಡ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ರೇಪ್ ಕೇಸ್ ನಲ್ಲಿ ಕಾರ್ತಿಕ್ ಆರೋಪಿಯಾಗಿದ್ದು, ಅಪರಾಧಿ ಎನ್ನಲು ವೈದ್ಯಕೀಯ ಪರೀಕ್ಷೆ ನಡೆಯಬೇಕಾಗುತ್ತದೆ. ಮೈತ್ರಿಯಾ ಹಾಗೂ ಕಾರ್ತಿಕ್ ವೈದ್ಯಕೀಯ ಪರೀಕ್ಷೆ ವರದಿ ಆಧಾರದ ಮೇಲೆ ಮುಂದಿನ ತನಿಖೆ ಕೈಗೊಳ್ಳಬಹುದಾಗಿದೆ. ವಂಚನೆ ಪ್ರಕರಣದಲ್ಲಿ ಕಾರ್ತಿಕ್ ವಶಕ್ಕೆ ಪಡೆಯಲು ಸದ್ಯಕ್ಕೆ ಪೊಲೀಸರ ಬಳಿ ಸಾಕಷ್ಟು ಸಾಕ್ಷ್ಯಗಳಿವೆ ಎನ್ನಲಾಗಿದೆ.

English summary
Karthik Gowda son of Union Railway Minister DV Sadananda Gowda fears Detention in a cheating case filed by actress Mythriya Gowda.RT Nagar Police has received arrest warrant against Karthik Gowda issued by 8th ACMM court today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X