ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಚಾರ ನಿಯಮ ಪಾಲಿಸಿ, ಬಹುಮಾನ ಪಡೆಯಿರಿ

By Ashwath
|
Google Oneindia Kannada News

ಬೆಂಗಳೂರು,ಏ.26:ಬೈಕ್ ಹತ್ತಿ ರಸ್ತೆ ಮೇಲಿಳಿಯುವಾಗ ಹೆಲ್ಮೆಟ್ ಹಾಕಿರ್ತೀರಿ ತಾನೆ? ರೆಡ್ ಲೈಟ್ ಬಂದಾಗ ಸಿಗ್ನಲ್ ಜಂಪ್ ಮಾಡಲ್ಲ ತಾನೆ? ಭರ್ರನೆ ಓಡಿಸುವಾಗ ಕಿವಿಯಲ್ಲಿ ಮೊಬೈಲ್ ಇಟ್ಕೊಳ್ಳೊಲ್ಲ ತಾನೆ? ಕಾರು ಓಡಿಸುವಾಗ ಸೀಟ್ ಬೆಲ್ಟ್ ಹಾಕುವುದು ಮರೆಯುವುದಿಲ್ಲ ತಾನೆ? ಸಕಲ ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸ್ತೀರಿ ತಾನೆ? ಯಾರಿಗ್ಗೊತ್ತು ನಿಮಗೆ ಪೊಲೀಸರಿಂದ ಬಹುಮಾನ ಸಿಕ್ಕರೂ ಸಿಗಬಹುದು!

ಹೌದು.ಇಲ್ಲಿಯವರೆಗೆ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಂದ ದಂಡ ವಸೂಲಿ ಮಾಡುತ್ತಿದ್ದ ಸಂಚಾರ ಪೊಲೀಸರು ಇದೀಗ ನಿಯಮವನ್ನು ಪಾಲನೆ ಮಾಡಿದ ಸವಾರರಿಗೆ ವಿಶೇಷ ಬಹುಮಾನ ನೀಡಿ ಗೌರವಿಸುತ್ತಿದ್ದಾರೆ.

ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದ ಪಾದಚಾರಿ ಮಾರ್ಗ‌‌ದಲ್ಲಿ ಈ ಜರಗಿದ ಕಾರ್ಯ‌ಕ್ರಮದಲ್ಲಿ ಹೆಚ್ಚುವರಿ ಪೊಲೀಸ್‌ ಆಯುಕ್ತ(ಸಂಚಾರ) ಬಿ.ದಯಾನಂದ ಸಂಚಾರ ನಿಯಮ ಪಾಲನೆ ಮಾಡಿದ ಸವಾರರಿಗೆ 'ಉತ್ತಮ ರಸ್ತೆ ಬಳಕೆದಾರರು' ಪ್ರಶಸ್ತಿ ಪತ್ರವನ್ನು ನೀಡಿ ಪುರಸ್ಕರಿಸಿದ್ದಾರೆ.

ಜನರಿಗೆ ಸಂಚಾರ ನಿಯಮದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಬೆಂಗಳೂರು ಸಂಚಾರ ಪೊಲೀಸ್‌ ಮುಂದಾಗುತ್ತಿದ್ದು,ಪೌರ ಪ್ರಜ್ಞೆಗಾಗಿ ಮಕ್ಕಳ ಚಳುವಳಿ(ಸಿಎಂಸಿಎ) ಸಂಸ್ಥೆ ಸಹಯೋಗದೊಂದಿಗೆ 'ಪಾಸಿಟಿವ್‌‌ ಸ್ಟೋಕ್ಸ್‌‌‌‌' ಕಾರ್ಯ‌ಕ್ರಮವನ್ನು ಆಯೋಜಿಸುವ ಮೂಲಕ ಸವಾರ/ಚಾಲಕರನ್ನು ಗೌರವಿಸಿದೆ.

ಕಾರ್ಯಕ್ರಮದಲ್ಲಿ ಸಿಎಂಸಿಎ ನಿರ್ದೇಶಕ ಮಂಜುನಾಥ್‌ ಸದಾಶಿವ್‌‌, ಟೈಟಾನ್‌ ಕಂಪೆನಿಯ ಎಂಡಿ ಭಾಸ್ಕರ್‌ ಭಟ್‌‌ ಉಪಸ್ಥಿತರಿದ್ದರು.[ಬೆಂಗಳೂರಿಗರೆ ಹೆಲ್ಮೆಟ್ ಧರಿಸಿ, ಇಲ್ಲವೇ ದಂಡಕಟ್ಟಿ]

57 ಕೋಟಿ ರೂ.ದಂಡ ವಸೂಲು:

57 ಕೋಟಿ ರೂ.ದಂಡ ವಸೂಲು:


ಕಳೆದ ವರ್ಷ ಬೆಂಗಳೂರು ಸಂಚಾರ ಪೊಲೀಸರು ನಿಯಮ ಉಲ್ಲಂಘಿಸಿದ ಸವಾರರಿಂದ 57 ಕೋಟಿ ರೂ.ದಂಡ ವಸೂಲು ಮಾಡಿದ್ದು, 53 ಲಕ್ಷ ಪ್ರಕರಣವನ್ನು ದಾಖಲಿಸಿದ್ದಾರೆ. ಈ ಹಿನ್ನಲೆಯಲ್ಲಿ ಜನರಿಗೆ ಜಾಗೃತಿ ಮೂಡಿಸಲು ಈ ಸಂಘಟನೆಯ ಜೊತೆಗೆ ಈ ಕಾರ್ಯ‌ಕ್ರಮವನ್ನು ಆಯೋಜಿಸಿರುವುದಾಗಿ ಹೆಚ್ಚುವರಿ ಪೊಲೀಸ್‌ ಆಯುಕ್ತ ಬಿ.ದಯಾನಂದ ಹೇಳಿದ್ದಾರೆ.

ಪ್ರಶಸ್ತಿಗೆ ಆಯ್ಕೆ ಹೇಗೆ?

ಪ್ರಶಸ್ತಿಗೆ ಆಯ್ಕೆ ಹೇಗೆ?


ನಗರದ ಪ್ರಮುಖ ಸಿಗ್ನಲ್‌‌ಗಳಲ್ಲಿ ಅಳವಡಿಸಿದ ಸಿ.ಸಿ.ಕ್ಯಾಮೆರಾದಲ್ಲಿನ ದೃಶ್ಯಾವಳಿಯನ್ನು ಸಂಚಾರ ನಿರ್ವ‌ಹಣಾ ಕೇಂದ್ರದಲ್ಲಿ(ಟಿಎಂಸಿ) ಏ.5ರಿಂದ ಸಿಎಂಸಿಎ ಸ್ವಯಂಸೇವಕರು ವೀಕ್ಷಿಸುತ್ತಿದ್ದು, ನಿಯಮ ಪಾಲಿಸಿ ಉತ್ತಮ ನಡವಳಿಕೆ ತೋರುವ ಚಾಲಕ/ಸವಾರರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.

ಪ್ರಶಸ್ತಿಗೆ ಮಾನದಂಡ ಏನು ?

ಪ್ರಶಸ್ತಿಗೆ ಮಾನದಂಡ ಏನು ?


ಸಿಗ್ನಲ್‌ ಪಾಲನೆ, ವೇಗಮಿತಿ, ಹೆಲ್ಮೆಟ್‌ ಬಳಕೆ, ಸೀಟ್‌ ಬೆಲ್ಟ್‌‌‌ ಹಾಕಿಕೊಳ್ಳುವುದು, ಹ್ಯಾಂಡ್‌ ಸಿಗ್ನಲ್‌ ತೋರಿಸುವುದು ಸೇರಿದಂತೆ ಸಂಚಾರ ನಿಯಮವನ್ನು ಸರಿಯಾಗಿ ಪಾಲನೆ ಮಾಡುವ ಚಾಲಕ/ಸವಾರರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

 ವರ್ಷದಲ್ಲಿ ನಾಲ್ಕು ಬಾರಿ ಕಾರ್ಯ‌ಕ್ರಮ:

ವರ್ಷದಲ್ಲಿ ನಾಲ್ಕು ಬಾರಿ ಕಾರ್ಯ‌ಕ್ರಮ:


ಈ ಕಾರ್ಯ‌ಕ್ರಮವನ್ನು ಮೂರು ತಿಂಗಳಿಗೊಮ್ಮೆ ಸಂಘಟನೆ ಆಯೋಜಿಸುತ್ತಿದ್ದು,ಮೊದಲ ಕಾರ್ಯ‌ಕ್ರಮ ಏ.5ರಿಂದ ಆರಂಭವಾಗಿ ಏ.26ಕ್ಕೆ ಮುಕ್ತಾಯಗೊಂಡಿದೆ.

ಸಂಚಾರ ನಿಯಮ ಪಾಲಿಸಿ ಪ್ರಶಸ್ತಿ ಪಡೆದ ಚಾಲಕರು

ಸಂಚಾರ ನಿಯಮ ಪಾಲಿಸಿ ಪ್ರಶಸ್ತಿ ಪಡೆದ ಚಾಲಕರು

ಪ್ರಶಸ್ತಿ ಸ್ವೀಕರಿಸಿದ ವಾಹನ ಸವಾರ/ಚಾಲಕರೊಂದಿಗೆ ಕಾರ್ಯ‌ಕ್ರಮದಲ್ಲಿ ಭಾಗವಹಿಸಿದ ಅತಿಥಿಗಳು.

English summary
The Children's Movement for Civic Awareness (CMCA) and Bangalore Traffic Police held their maiden Positive Strokes Junction event at Arts & Crafts / MG Road Metro station sidewalk junction on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X