ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಆಪ್ ನಿಂದ ಸಿಡಿದೆದ್ದವರ ಸಭೆ

|
Google Oneindia Kannada News

ಬೆಂಗಳೂರು, ಜೂ. 6 : ಲೋಕಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಸಾಧನೆಯಿಂದ ಅಸಮಾಧಾನಗೊಂಡು ಹೊರಬಂದಿರುವ ನಾಯಕರು ಹೊಸದೊಂದು ಪಕ್ಷವನ್ನು ಹುಟ್ಟುಹಾಕಲು ಚಿಂತನೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ನಡೆಯಲಿರುವ ನಾಯಕರ ಸಮಾವೇಶ ಇಂತಹ ಒಂದು ಆಲೋಚನೆಗೆ ವೇದಿಕೆಯಾಗುವ ಸಾಧ್ಯತೆ ಇದೆ.

ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಆಪ್ ಪಕ್ಷ ತೊರೆದಿರುವ ಅಶ್ವಿನಿ ಉಪಾಧ್ಯಾಯ, ಶಾಜಿಯಾ ಇಲ್ಮಿ, ಮಧು ಬಾಧುರಿ, ಅಶೋಕ್ ಅಗರ್ ವಾಲ್ ಮುಂತಾದ ನಾಯಕರು ಬೆಂಗಳೂರಿನಲ್ಲಿ ಮುಂದಿನ ಕಾರ್ಯಕ್ರಮಗಳ ಕುರಿತು ಚಿಂಥನ-ಮಂಥನ ಹಮ್ಮಿಕೊಂಡಿದ್ದಾರೆ.

Aam Admi Party

ಬೆಂಗಳೂರಿನಲ್ಲಿರುವ ಆರ್ಟ್ ಆಫ್ ಲೀವಿಂಗ್ ಸೆಂಟರ್ ನಲ್ಲಿ ಈ ಸಮಾವೇಶ ಜೂ.13ರಿಂದ 15ರವರೆಗೆ ನಡೆಯಲಿದೆ. ಮೂರು ದಿನಗಳ ಈ ಸಮಾವೇಶವನ್ನು ಆಪ್ ನಿಂದ ಹೊರಬಂದಿರುವ ಅಶ್ವಿನಿ ಉಪಾಧ್ಯಾಯ ಅವರು ಆಯೋಜಿಸಿದ್ದು, ಆಪ್ ತೊರೆದ ಎಲ್ಲಾ ಇತರ ನಾಯಕರಿಗೂ ಆಹ್ವಾನ ನೀಡಿದ್ದಾರೆ. [ಗಡ್ಕರಿ ಕೇಸ್ : ಕೇಜ್ರಿವಾಲ್ ಗೆ ಹೊಸ ಸಂಕಷ್ಟ]

ಸಮಾವೇಶದಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಆಮ್ ಆದ್ಮಿ ಪಕ್ಷಕ್ಕೂ ಸಹ ಕಳುಹಿಸಿ ಆತ್ಮಾವಲೋಕನ ಮಾಡಿಕೊಳ್ಳುವಂತೆ ಸಲಹೆ ನೀಡಲು ಮುಂದಾಗಿದ್ದಾರೆ. ಉಪಾಧ್ಯಾಯ ಅವರು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರನ್ನು ಭೇಟಿ ಮಾಡಿ, ಈ ಚಿಂತನ-ಮಂಥನದ ಕುರಿತಾಗಿ ಚರ್ಚೆ ನಡೆಸಿದ್ದಾರೆ. [ಆಪ್ ತೊರೆದ ಶಾಜಿಯಾ ಇಲ್ಮಿ]

ಎಎಪಿ ಹೈಜಾಕ್ ಆಗಿದೆ : ಅಶ್ವಿನಿ ಉಪಾಧ್ಯಾಯ ಅವರು ಆಮ್ ಆದ್ಮಿ ಪಕ್ಷ ನಾಲ್ವರಿಂದ ಹೈಜಾಕ್ ಆಗಿದೆ ಎಂದು ಆರೋಪಿಸಿದ್ದಾರೆ. ಅರವಿಂದ್ ಕೇಜ್ರಿವಾಲ್, ಯೋಗೇಂದ್ರ ಯಾದವ್, ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಅವರು ಪಕ್ಷವನ್ನು ಹೈಜಾಕ್ ಮಾಡಿದ್ದಾರೆ ಎಂದು ದೂರಿದ್ದಾರೆ.

ಬೆಂಗಳೂರಿನ ಈ ಸಮಾವೇಶದ ಬಳಿಕ ಎಲ್ಲಾ ನಾಯಕರು ಸಾಮಾಜಿಕ ಕಾರ್ಯಕರ್ತರೊಂದಿಗೆ ಸೇರಿ ನೂತನ ಪಕ್ಷವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಮೂರು ದಿನಗಳ ಈ ಸಮಾವೇಶ ಆಪ್ ನಿಂದ ಅಸಮಾಧಾನಗೊಂಡಿರುವ ನಾಯಕರ ಮುಂದಿನ ನಡೆಯನ್ನು ನಿರ್ಧರಿಸಲಿದೆ.

ಅಶ್ವಿನಿ ಉಪಾಧ್ಯಾಯ ಅವರು ಆಮ್ ಆದ್ಮಿ ಪಕ್ಷಕ್ಕೆ ಹೊಸ ವ್ಯಾಖ್ಯಾನ ನೀಡಿದ್ದು, ದೆಹಲಿಯಲ್ಲಿ ಎಎಪಿ ಎಂದರೆ ಕೆಎಪಿ (ಕೇಜ್ರಿವಾಲ್ ಆದ್ಮಿ ಪಕ್ಷ), ಉತ್ತರ ಪ್ರದೇಶದಲ್ಲಿ ಎಎಪಿ ಎಂದರೆ ಎಸ್ಎಪಿ (ಸಂಜಯ್ ಆದ್ಮಿ ಪಕ್ಷ), ಹರ್ಯಾಣದಲ್ಲಿ ಎಎಪಿ ಎಂದರೆ ವೈಎಪಿ (ಯೋಗೇಂದ್ರ ಯಾದವ್ ಪಕ್ಷ) ಎಂದು ವಿಶ್ಲೇಷಿಸಿದ್ದಾರೆ.

English summary
Arvind Kejriwal led Aam Aadmi Party (AAP) that is struggling to survive following its debacle in the recently concluded Lok Sabha elections is set for an another major embarrassment in the coming days. AAP dissenters may announce new political party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X