ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಫಲಿತಾಂಶ: ಅಂಗೈಯಲ್ಲಿ ತಾರೆಗಳ ಭವಿಷ್ಯ

By Rajendra
|
Google Oneindia Kannada News

ಸಿನಿಮಾನೇ ಬೇರೆ, ರಾಜಕೀಯವೇ ಬೇರೆ ಅಂತಾರೆ ಬಲ್ಲವರು. ಆದರೆ ಎರಡೂ ಕ್ಷೇತ್ರಗಳಿಗೂ ಒಂಥರಾ ನಂಟಿದೆ. ಇಲ್ಲೂ ನಟನೆ ಇರುತ್ತದೆ, ಅಲ್ಲೂ ಇರುತ್ತದೆ. ಒಂದರಲ್ಲಿ ಬಣ್ಣ ಹಚ್ಚಿದರೆ, ಇನ್ನೊಂದರಲ್ಲಿ ಬಣ್ಣವಿಲ್ಲದೇನೇ ಅಭಿನಯಿಸಬೇಕಾಗುತ್ತದೆ. ಇಲ್ಲೂ ಅಭಿಮಾನಿಗಳಿರುತ್ತಾರೆ ಅಲ್ಲೂ ಅಷ್ಟೇ. ಒಂದರಲ್ಲಿ ನಟನೆಯೇ ಜೀವನ, ಇನ್ನೊಂದರಲ್ಲಿ ಬದುಕೇ ನಟನೆ.

ಈ ಬಾರಿಯ ವಿಧಾನಸಭೆ ಚುನಾವಣೆಗೆ ಸಿನಿಮಾ, ಟಿವಿ ಹಾಗೂ ಈ ಕ್ಷೇತ್ರದಲ್ಲಿ ತೊಡಗಿಕೊಂಡಿರುವ 19 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಟ ಅಂಬರೀಶ್, ಉಮಾಶ್ರೀ, ಪೂಜಾಗಾಂಧಿ, ರವಿಕಿರಣ್, ಬಿಸಿ ಪಾಟೀಲ್ ಕಣದಲ್ಲಿರುವ ಜನಪ್ರಿಯ ತಾರೆಗಳು. ಇವರಲ್ಲಿ ಗೆಲುವು ಯಾರಿಗೆ, ಸೋಲು ಯಾರಿಗೆ?

ಸಿನಿಮಾ ಮಂದಿ ಇಲ್ಲಿ ಅಪ್ಪಟ ರಾಜಕಾರಣಿಯಂತೆ ತಮ್ಮ ಪಾತ್ರ ಬದಲಾಯಿಸಿದ್ದಾರೆ. ಅಭಿಮಾನಿಗಳ ಪಾತ್ರವೂ ಅಷ್ಟೇ ಮತದಾರನಾಗಿ ಬದಲಾಗಿದೆ. ಚಿತ್ರರಂಗದಲ್ಲಿ ಬೆಂಬಲಿಸಿದವರನ್ನು ಇಲ್ಲೂ ಬೆಂಬಲಿಸಬೇಕು ಎಂದೇನು ಇಲ್ಲ. ಮತದಾರನ ಒಲವು ಎತ್ತ?

ಕಾಂಗ್ರೆಸ್ ನಲ್ಲಿ ಆರು, ಜೆಡಿಎಸ್ ಹಾಗೂ ಕೆಜೆಪಿಯಲ್ಲಿ ತಲಾ ಐದು, ಬಿಎಸ್ಆರ್ ಕಾಂಗ್ರೆಸ್ ನಲ್ಲಿ ಮೂರು ಮಂದಿ ಕಣದಲ್ಲಿದ್ದಾರೆ. ಪೂಜಾಗಾಂಧಿ, ರಾಜು ತಾಳಿಕೋಟೆ, ರವಿಕಿರಣ್, ಜೇಡರಹಳ್ಳಿ ಕೃಷ್ಣಪ್ಪ, ಮಯೂರ್ ಪಟೇಲ್ ಇದೇ ಮೊದಲ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆ ಇಳಿದಿದ್ದಾರೆ.

[ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]

ಕಿತ್ತೂರು ಕ್ಷೇತ್ರದ ಅಭ್ಯರ್ಥಿ ಆನಂದ್ ಬಿ ಅಪ್ಪುಗೋಳ್-ಸೋಲು

ಕಿತ್ತೂರು ಕ್ಷೇತ್ರದ ಅಭ್ಯರ್ಥಿ ಆನಂದ್ ಬಿ ಅಪ್ಪುಗೋಳ್-ಸೋಲು

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ನಿರ್ಮಾಪಕ ಆನಂದ್ ಬಿ ಅಪ್ಪುಗೋಳ್ ಕಿತ್ತೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ ಅವರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಕಾಂಗ್ರೆಸ್ ನ ಇನಾಂದಾರ್ ದಾನಪ್ಪಗೌಡ ಬಸವನಗೌಡ ಅವರ ವಿರುದ್ಧ ಹೀನಾಯ ಸೋಲು ಕಂಡಿದ್ದಾರೆ.

ಇನಾಂದಾರ್ ದಾನಪ್ಪಗೌಡ ಬಸವನಗೌಡ ಮತಗಳು 53924

ಆನಂದ್ ಬಿ ಅಪ್ಪುಗೋಳ್ ಮತಗಳು-20657

ಹಿರೇಕೇರೂರು ಕಾಂಗ್ರೆಸ್ ಅಭ್ಯರ್ಥಿ ಬಿ.ಸಿ.ಪಾಟೀಲ್-ಸೋಲು

ಹಿರೇಕೇರೂರು ಕಾಂಗ್ರೆಸ್ ಅಭ್ಯರ್ಥಿ ಬಿ.ಸಿ.ಪಾಟೀಲ್-ಸೋಲು

ಬಿ.ಸಿ.ಪಾಟೀಲ್ ಅವರಿಗೆ ಈ ಬಾರಿ ಭಾರಿ ಮುಖಭಂಗವಾಗಿದೆ. ಕೆಜೆಪಿಯ ಯು.ಬಿ.ಬಣಕಾರ್ ವಿರುದ್ಧ ಅವರು ಸೋತಿದ್ದಾರೆ.

ಯು.ಬಿ.ಬಣಕಾರ್ ಮತಗಳು 49416
ಬಿಸಿ ಪಾಟೀಲ್ ಮತಗಳು 46408

ಕೌರವ, ಪೂರ್ಣ ಸತ್ಯ, ಎಲ್ಲರಂತಲ್ಲ ನನ್ನ ಗಂಡ, ಅಸ್ತ್ರ, ನಿಷ್ಕರ್ಷ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಮೂಲಕ ಕಣಕ್ಕಿಳಿದಿದ್ದ ಪಾಟೀಲರಿಗೆ ಮತದಾರ ಈ ಬಾರಿ ಕೈಹಿಡಿಯಲಿಲ್ಲ.

ತೇರದಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಉಮಾಶ್ರೀ

ತೇರದಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಉಮಾಶ್ರೀ

ಕಾಂಗ್ರೆಸ್ ಅಭ್ಯರ್ಥಿ ಉಮಾಶ್ರೀ ಅವರು ಭರ್ಜರಿ ಗೆಲುವು ದಾಖಲಿಸಿದ್ದಾರೆ. ತಮ್ಮ ಸಮೀಪದ ಸ್ಪರ್ಧಿ ಭಾರತೀಯ ಜನತಾ ಪಕ್ಷದ ಸಿದ್ದು ಸವದಿ ವಿರುದ್ಧ ಜಯಭೇರಿ ಭಾರಿಸಿದ್ದಾರೆ.

ಉಮಾಶ್ರೀ ಮತಗಳು-70189
ಸಿದ್ದು ಸವದಿ ಮತಗಳು-67590

ಸಿಂಧಗಿ ಕ್ಷೇತ್ರದ ಬಿಎಸ್ಆರ್ ಅಭ್ಯರ್ಥಿ ರಾಜು ತಾಳಿಕೋಟೆ

ಸಿಂಧಗಿ ಕ್ಷೇತ್ರದ ಬಿಎಸ್ಆರ್ ಅಭ್ಯರ್ಥಿ ರಾಜು ತಾಳಿಕೋಟೆ

ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದ ರಾಜು ತಾಳಿಕೋಟೆ ಅವರು ಠೇವಣಿ ಕಳೆದುಕೊಂಡಿದ್ದಾರೆ. ಭಾರತೀಯ ಜನತಾ ಪಕ್ಷದ ಭೂಸನೂರು ರಮೇಶ್ ಬಾಲಪ್ಪ ಅವರು ಸಿಂಧಗಿ ಕ್ಷೇತ್ರದಲ್ಲಿ ಜಯಭೇರಿ ಭಾರಿಸಿದ್ದಾರೆ.

ಭೂಸನೂರು ರಮೇಶ್ ಬಾಲಪ್ಪ ಮತಗಳು-36577
ರಾಜು ತಾಳಿಕೋಟೆ ಮತಗಳು-514

ಬೀದರ್ ದಕ್ಷಿಣ ಕ್ಷೇತ್ರದ ಕೆಎಂಪಿ ಅಭ್ಯರ್ಥಿ ಅಶೋಕ್ ಖೇಣಿ

ಬೀದರ್ ದಕ್ಷಿಣ ಕ್ಷೇತ್ರದ ಕೆಎಂಪಿ ಅಭ್ಯರ್ಥಿ ಅಶೋಕ್ ಖೇಣಿ

ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಅಶೋಕ್ ಖೇಣಿ ಅವರ ಕರ್ನಾಟಕ ಮಕ್ಕಳ ಪಕ್ಷ ಖಾತೆ ತೆರೆದಿದೆ. ತಮ್ಮ ಸಮೀಪದ ಸ್ಪರ್ಧಿ ಜೆಡಿಎಸ್ ಬಂಡೆಪ್ಪ ಕಾಶೆಂಪುರ್ ಅವರ ವಿರುದ್ಧ ಖೇಣಿ ಗೆದ್ದಿದ್ದಾರೆ.

ಅಶೋಕ್ ಖೇಣಿ ಮತಗಳು 40481
ಬಂಡೆಪ್ಪ ಕಾಶೆಂಪುರ್ ಮತಗಳು-28122

ರಾಯಚೂರು ನಗರ ಕ್ಷೇತ್ರದ ಬಿಎಸ್ಆರ್ ಅಭ್ಯರ್ಥಿ ಪೂಜಾಗಾಂಧಿ-ಸೋಲು

ರಾಯಚೂರು ನಗರ ಕ್ಷೇತ್ರದ ಬಿಎಸ್ಆರ್ ಅಭ್ಯರ್ಥಿ ಪೂಜಾಗಾಂಧಿ-ಸೋಲು

ರಾಯಚೂರಿನ ಬಿಸಿಲನ್ನೂ ಲೆಕ್ಕಿಸದೆ ಸಾಕಷ್ಟು ಬೆವರು ಹರಿಸಿದ್ದ ನಟಿ ಪೂಜಾಗಾಂಧಿ ಅವರಿಗೆ ಮತದಾರಪ್ರಭು ಕೈ ಕೊಟ್ಟಿದ್ದಾನೆ. ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಪೂಜಾಗಾಂಧಿ ಅವರು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಡಾ.ಎಸ್.ಶಿವರಾಜ್ ಪಾಟೀಲ್ ಮತಗಳು 45263
ಸೈಯದ್ ಯಾಸಿನ್ ಮತಗಳು 37392
ತ್ರಿವಿಕ್ರಮ್ ಜೋಶಿ ಮತಗಳು 6186
ಪೂಜಾಗಾಂಧಿ 1815

ಹೊನ್ನಾಳಿ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಂಪಿ ರೇಣುಕಾಚಾರ್ಯ

ಹೊನ್ನಾಳಿ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಂಪಿ ರೇಣುಕಾಚಾರ್ಯ

ಅಯ್ಯೋ ರೇಣುಕಾಚಾರ್ಯ ಅವರಿಗೂ ಸಿನಿಮಾಗೂ ಏನು ನಂಟು ಅಂತೀರಾ. ಇವರು 'ಭೀಮಾ ತೀರದಲ್ಲಿ' (ಬದಲಾದ ಶೀರ್ಷಿಕೆ 'ಚಂದಪ್ಪ') ಚಿತ್ರದಲ್ಲಿ ಅಭಿನಯಿಸುವ ಮೂಲಕ ಬೆಳ್ಳಿಪರದೆಯ ಮೇಲೆ ತಮ್ಮ ಖಾತೆ ತೆರೆದಿದ್ದಾರೆ. ಹೊನ್ನಾಳಿ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ನಿಂದ ಶಾಂತನಗೌಡ ಡಿ.ಜಿ, ಬಿಜೆಪಿಯ ಡಾ.ಎಚ್.ಪಿ.ರಾಜ್ ಕುಮಾರ್, ಜೆಡಿಎಸ್ ನಿಂದ ಎಂ.ಆರ್.ಮಹೇಶ್ ಕಣದಲಿದ್ದಾರೆ.

ಸೊರಬ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಮಾರ ಬಂಗಾರಪ್ಪ

ಸೊರಬ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಮಾರ ಬಂಗಾರಪ್ಪ

ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದಿಂದ ಕಣಕ್ಕಿಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಕುಮಾರ ಬಂಗಾರಪ್ಪ. ಇವರ ವಿರುದ್ಧ ಅವರ ಸಹೋದರ ಮಧು ಬಂಗಾರಪ್ಪ ಕಣಕ್ಕಿಳಿದಿರುವುದು ವಿಶೇಷ. ಜೆಡಿಎಸ್ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಕೆಜೆಪಿಯಿಂದ ಹರತಾಳು ಹಾಲಪ್ಪ ಕಣದಲ್ಲಿದ್ದಾರೆ.

ಸೊರಬ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ

ಸೊರಬ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ

ಮಧು ಬಂಗಾರಪ್ಪ ಅಭಿನಯದ ದೇವಿ ಎಂಬ ಚಿತ್ರ ಇನ್ನೂ ಬಿಡುಗಡೆ ಕಂಡಿಲ್ಲ. ಈ ಹಿಂದೆ ಅವರು ಪುರುಷೋತ್ತಮ ಎಂಬ ಚಿತ್ರವನ್ನು ನಿರ್ಮಿಸಿದ್ದರು. ಈಗ ಜೆಡಿಎಸ್ ಅಭ್ಯರ್ಥಿಯಾಗಿ ಅಣ್ಣನ ವಿರುದ್ಧ ಕಣಕ್ಕಿಳಿದಿದ್ದಾರೆ. ಕುಮಾರ ಬಂಗಾರಪ್ಪ ಅವರೇ ಮಧು ಅವರಿಗೆ ಪ್ರಬಲ ಸ್ಪರ್ಧಿ.

ರಾಜರಾಜೇಶ್ವರಿನಗರ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ

ರಾಜರಾಜೇಶ್ವರಿನಗರ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ

ಮುನಿರತ್ನ ಅವರು ಈಗಾಗಲೆ ಕಾರ್ಪೋರೇಟರ್ ಆಗಿ ರಾಜಕೀಯದ ನೀರು ಕುಡಿದವರು. ಈಗ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜರಾಜೇಶ್ವರಿನಗರದಿಂದ ಕಣಕ್ಕಿಳಿದ್ದಾರೆ. ಬಿಜೆಪಿಯ ಎಂ ಶ್ರೀನಿವಾಸ್, ಜೆಡಿಎಸ್ ನ ಕೆ.ಎಲ್.ತಿಮ್ಮನಂಜಯ್ಯ ಹಾಗೂ ಕೆಜೆಪಿಯ ವೆಂಕಟೇಶ್ ಗೌಡ ಇದೇ ಕ್ಷೇತ್ರದ ಇತರೆ ಅಭ್ಯರ್ಥಿಗಳು.

ಮಹಾಲಕ್ಷ್ಮಿಲೇಔಟ್ ಕಾಂಗ್ರೆಸ್ ಅಭ್ಯರ್ಥಿ ನರೇಂದ್ರ ಬಾಬು

ಮಹಾಲಕ್ಷ್ಮಿಲೇಔಟ್ ಕಾಂಗ್ರೆಸ್ ಅಭ್ಯರ್ಥಿ ನರೇಂದ್ರ ಬಾಬು

ನೆ.ಲ.ನರೇಂದ್ರ ಬಾಬು ಅವರು ಕಿರುತೆರೆ ಹಾಗೂ ಬೆಳ್ಳಿಪರದೆ ಮೇಲೆ ಹಲವಾರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಹಾಲಕ್ಷ್ಮಿಲೇಔಟ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಬಿಜೆಪಿಯ ಎಸ್ ಹರೀಶ್, ಜೆಡಿಎಸ್ ನ ಗೋಪಾಲಯ್ಯ, ಕೆಜೆಪಿಯ ವೀರೇಶ್ ಕುಮಾರ್ ಇದೇ ಕ್ಷೇತ್ರದ ಸ್ಪರ್ಧಿಗಳು.

ಬಸವನಗುಡಿ ಕೆಜೆಪಿ ಅಭ್ಯರ್ಥಿ ರವಿಕಿರಣ್

ಬಸವನಗುಡಿ ಕೆಜೆಪಿ ಅಭ್ಯರ್ಥಿ ರವಿಕಿರಣ್

ಕಿರುತೆರೆ ಕ್ರೇಜಿಸ್ಟಾರ್ ರವಿಕಿರಣ್ ಅವರು ಕೆಜೆಪಿ ಅಭ್ಯರ್ಥಿಯಾಗಿ ಪ್ರತಿಷ್ಠಿತ ಬಸವನಗುಡಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ನಿಂದ ಬಿ.ಕೆ.ಚಂದ್ರಶೇಖರ್, ಬಿಜೆಪಿಯಿಂದ ಎಲ್ ಎ ರವಿಸುಬ್ರಹ್ಮಣ್ಯ, ಜೆಡಿಎಸ್ ನ ಬಾಗೇಗೌಡ ಇದೇ ಕ್ಷೇತ್ರದ ಅಭ್ಯರ್ಥಿಗಳು.

ಮಹದೇವಪುರ ಬಿಎಸ್ಆರ್ ಅಭ್ಯರ್ಥಿ ಮಯೂರ್ ಪಟೇಲ್

ಮಹದೇವಪುರ ಬಿಎಸ್ಆರ್ ಅಭ್ಯರ್ಥಿ ಮಯೂರ್ ಪಟೇಲ್

ಮಹದೇವಪುರ ಮೀಸಲು ಕ್ಷೇತ್ರದಿಂದ ನಟ ಮಯೂರ್ ಪಟೇಲ್ ಇದೇ ಮೊದಲ ಬಾರಿಗೆ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ನ ಶ್ರೀನಿವಾಸ್ ಎ.ಸಿ, ಬಿಜೆಪಿಯ ಅರವಿಂದ ಲಿಂಬಾವಳಿ, ಜೆಡಿಎಸ್ ನ ಎನ್ ಗೋವರ್ಧನ್ ಕಣದಲ್ಲಿರುವ ಇತರೆ ಸ್ಪರ್ಧಿಗಳು.

ದೊಡ್ಡಬಳ್ಳಾಪುರ ಕೆಜೆಪಿ ಅಭ್ಯರ್ಥಿ ವಿ ನಾಗೇಂದ್ರ ಪ್ರಸಾದ್

ದೊಡ್ಡಬಳ್ಳಾಪುರ ಕೆಜೆಪಿ ಅಭ್ಯರ್ಥಿ ವಿ ನಾಗೇಂದ್ರ ಪ್ರಸಾದ್

ಗೀತ ಸಾಹಿತಿ ವಿ ನಾಗೇಂದ್ರ ಪ್ರಸಾದ್ ಅವರು ಈ ಬಾರಿ ದೊಡ್ಡಬಳ್ಳಾಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ನ ವೆಂಕಟರಾಮಯ್ಯ.ಟಿ, ಬಿಜೆಪಿಯ ಜೆ.ನರಸಿಂಹಸ್ವಾಮಿ, ಜೆಡಿಎಸ್ ನ ಸಿ ಚೆನ್ನಿಗಪ್ಪ ಇದೇ ಕ್ಷೇತ್ರದ ಇತರೆ ಪ್ರಬಲ ಸ್ಪರ್ಧಿಗಳು.

ಮಾಗಡಿ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಜೇಡರಹಳ್ಳಿ ಕೃಷ್ಣಪ್ಪ

ಮಾಗಡಿ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಜೇಡರಹಳ್ಳಿ ಕೃಷ್ಣಪ್ಪ

ಜೇಡರಹಳ್ಳಿ ಕೃಷ್ಣಪ್ಪ ಎಂದೇ ಖ್ಯಾತರಾಗಿರುವ ಎಚ್.ಎಂ.ಕೃಷ್ಣಮೂರ್ತಿ ಈ ಬಾರಿ ಮಾಗಡಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಜೇಡರಹಳ್ಳಿ ಎಂಬ ಚಿತ್ರದ ಮೂಲಕ ಅವರು ಕನ್ನಡ ಬೆಳ್ಳಿಪರದೆಗೆ ಅಡಿಯಿಟ್ಟವರು. ಕಾಂಗ್ರೆಸ್ ನ ಮಂಜುನಾಥ ಎ, ಬಿಜೆಪಿಯ ಜಗದೀಶ್ ಪ್ರಸಾದ್, ಜೆಡಿಎಸ್ ನ ಎಚ್.ಸಿ.ಬಾಲಕೃಷ್ಣ ಇದೇ ಕ್ಷೇತ್ರದಲ್ಲಿ ಇತರೆ ಅಭ್ಯರ್ಥಿಗಳು.

ರಾಮನಗರ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ

ರಾಮನಗರ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ

ಎಚ್.ಡಿ.ಕುಮಾರಸ್ವಾಮಿ ಅವರು ಕನ್ನಡ ಚಿತ್ರರಂಗದ ನಿರ್ಮಾಪಕರಾಗಿ ಹೆಸರು ಮಾಡಿದವರು. ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮರಿದೇವರು, ಬಿಜೆಪಿಯಿಂದ ಕೆ.ಎಸ್.ಶಿವಮಾಧು, ಕೆಜೆಪಿಯಿಂದ ಎಸ್.ಆರ್.ನಾಗರಾಜ್ ಕಣದಲ್ಲಿರುವ ಅಭ್ಯರ್ಥಿಗಳು.

ಚನ್ನಪಟ್ಟಣ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ

ಚನ್ನಪಟ್ಟಣ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ

ನೇರವಾಗಿ ಚಿತ್ರರಂಗದೊಂದಿಗೆ ಸಂಬಂಧವಿಲ್ಲದಿದ್ದರೂ ಕಿರುತೆರೆ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಕಸ್ತೂರಿ ವಾಹಿನಿಯ ಒಡತಿಯಾಗಿ ಅವರ ನಿರ್ಮಾಣದಲ್ಲಿ ಸಾಕಷ್ಟು ಧಾರಾವಾಹಿಗಳನ್ನು ಮೂಡಿಬಂದಿವೆ. ಕಾಂಗ್ರೆಸ್ ನ ಸಾದತ್ ಅಲಿ ಖಾನ್, ಬಿಜೆಪಿಯ ರವಿಕುಮಾರ್ ಗೌಡ, ಎಸ್ಪಿಯ ಸಿಪಿ ಯೋಗೇಶ್ವರ್ ಈ ಕ್ಷೇತ್ರದ ಪ್ರಬಲ ಸ್ಪರ್ಧಿಗಳು.

ಚನ್ನಪಟ್ಟಣ ಎಸ್ಪಿ ಅಭ್ಯರ್ಥಿ ಸಿಪಿ ಯೋಗೇಶ್ವರ್

ಚನ್ನಪಟ್ಟಣ ಎಸ್ಪಿ ಅಭ್ಯರ್ಥಿ ಸಿಪಿ ಯೋಗೇಶ್ವರ್

ಸಮಾಜವಾಗಿ ಪಕ್ಷದ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ಈ ಬಾರಿ ಇದೇ ಕಣದಲ್ಲಿದ್ದಾರೆ. ಜೆಡಿಎಸ್ ನ ಅನಿತಾ ಕುಮಾರಸ್ವಾಮಿ, ಕಾಂಗ್ರೆಸ್ ನ ಸಾದತ್ ಅಲಿ ಖಾನ್, ಬಿಜೆಪಿಯ ರವಿಕುಮಾರ್ ಗೌಡ ಪ್ರಬಲ ಸ್ಪರ್ಧಿಗಳು.

ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಎಚ್.ಅಂಬರೀಶ್

ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಎಚ್.ಅಂಬರೀಶ್

ಈ ಬಾರಿ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರ ಮಂಡ್ಯ. ರೆಬೆಲ್ ಸ್ಟಾರ್ ಅಂಬರೀಶ್ ಅವರು ಈ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಬಿಜೆಪಿಯ ಟಿ.ಎಲ್.ರವಿಶಂಕರ್, ಜೆಡಿಎಸ್ ನ ಎಂ.ಶ್ರೀನಿವಾಸ್, ಕೆಜೆಪಿಯ ವೆಂಕಟೇಶ್ ಆಚಾರ್ ಈ ಕಣದಲ್ಲಿರುವ ಇತರೆ ಸ್ಪರ್ಧಿಗಳು.

English summary
There are 19 people related to the Kannada film and television industry who are contesting on 5th May Assembly elections. After the voting on Sunday, their fates will be sealed till Wednesday when the counting takes place. The 15 film personalities contesting are: Ambaressh, HD Kumaraswamy, Umashree, Kumar Bangarappa, Madhu Bangarappa, Yogeshwar, Pooja Gandhi, Nagendra Prasad, Muniratna, BC Patil, Anand Appugol, Ravikiran, Jedarahalli Krishnappa, Mayur Patel and last but not the least, Ashok Kheny.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X