ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಸೋಲಿನ ದವಡೆಯಿಂದ ಪಾರಾದ ರೊನಾಲ್ಡೊ ಪಡೆ

By Mahesh

ಮನೌಸ್(ಬ್ರೆಜಿಲ್), ಜೂ.23: ಯುಎಸ್ಎ ತಂಡದ ವಿರುದ್ಧ ಕಟ್ಟ ಕಡೆಯ ಕ್ಷಣದಲ್ಲಿ ಗೋಲು ಗಳಿಸುವ ಮೂಲಕ ಕ್ರಿಶ್ಚಿಯಾನೊ ರೊನಾಲ್ಡೊ ನೇತೃತ್ವದ ಪೋರ್ಚುಗಲ್ ತಂಡ ಸೋಲಿನ ಭೀತಿಯಿಂದ ಬಚಾವಾಗಿ ಪಂದ್ಯ ಡ್ರಾ ಮಾಡಿಕೊಂಡಿದೆ.

ಪಂದ್ಯದ 9೦+5ನೇ ನಿಮಿಷದಲ್ಲಿ ರೊನಾಲ್ಡೊ ನೀಡಿದ ಪಾಸನ್ನು ನಂ.10ನೇ ಜರ್ಸಿಯ ವರೇಲಾ ಹೆಡ್ ಮಾಡಿ ಗೋಲಾಗಿಸಿ ಪೋರ್ಚುಗಲ್ ಮಾನ ಕಾಪಾಡಿದರು. ಪಂದ್ಯ ಮುಕ್ತಾಯಕ್ಕೂ 30 ಸೆಕೆಂಡುಗಳಿಗೂ ಮುನ್ನ ಈ ಗೋಲು ದಾಖಲಾಗಿದ್ದು, ಪ್ರೇಕ್ಷಕರು ರೋಮಾಂಚನಗೊಂಡು ಹುಚ್ಚೆದ್ದು ಕುಣಿದಾಡಿದರು. [ಸಾಂಬಾ ನಾಡಲ್ಲಿ ವಿಶ್ವಕಪ್ ಸಮರ ಸಂಭ್ರಮ]

ಈ ಪಂದ್ಯ ಡ್ರಾ ಮಾಡಿಕೊಳ್ಳುವ ಮೂಲಕ ರೌಂಡ್ 16 ತಲುಪುವ ಆಸೆಯನ್ನು ಪೋರ್ಚುಗಲ್ ಇನ್ನೂ ಜೀವಂತ ಇರಿಸಿಕೊಂಡಿದೆ. ಪಂದ್ಯವನ್ನು ಗೆಲ್ಲಲಾಗದಿದ್ದರೂ ಜರ್ಮನಿನ ದಿಗ್ಗಜ ಕ್ಲಿನ್ಸ್ ಮನ್ ಅವರಿಂದ ತರಬೇತಿ ಪಡೆದಿರುವ ಯುಎಸ್ ಎ ಪಡೆ ಎಲ್ಲರ ಮನೆ ಗೆದ್ದಿತು.[ಪೋರ್ಚುಗಲ್ ಗುಂಪಿನ ವೇಳಾಪಟ್ಟಿ]

ಪೋರ್ಚುಗಲ್ ಆರಂಭ ಅದ್ಭುತವಾಗಿತ್ತು. ಪಂದ್ಯದ 5ನೇ ನಿಮಿಷದಲ್ಲೇ ನಾನಿ ಗೋಲು ದಾಖಲಿಸಿ ಯುಎಸ್ಎಗೆ ಹಿನ್ನಡೆ ಉಂಟು ಮಾಡಿದರು. ಆದರೆ, ದ್ವಿತೀಯಾರ್ಧದಲ್ಲಿ ಪಂದ್ಯ ಬೇರೆಯದ್ದೇ ತಿರುವು ಪಡೆದುಕೊಂಡಿತು.

ಪೋರ್ಚುಗಲ್ ಆರಂಭ ಶೂರತ್ವ ಫಲ ನೀಡಲಿಲ್ಲ

ಪೋರ್ಚುಗಲ್ ಆರಂಭ ಶೂರತ್ವ ಫಲ ನೀಡಲಿಲ್ಲ

ಪೋರ್ಚುಗಲ್ ತಂಡ ಪಂದ್ಯದ ಐದನೇ ನಿಮಿಷದಲ್ಲಿ ಗೋಲು ದಾಖಲಿಸಿದರೂ ಲಾಭ ಗಳಿಸಲಿಲ್ಲ. ಡೆಂಪ್ಸಿ ಅವರ ಯುಎಸ್ಎ ಪಡೆ ಕಟ್ಟಿದ ರಕ್ಷಣಾ ವ್ಯೂಹ ದಾಟಲು ರೊನಾಲ್ಡೊಗೂ ಆಗಲಿಲ್ಲ.

ದ್ವಿತೀಯಾರ್ಧದಲ್ಲಿ ಆರಂಭಿಕ ಶಾಕ್ ನೀಡಿದ ಯುಎಸ್

ದ್ವಿತೀಯಾರ್ಧದಲ್ಲಿ ಆರಂಭಿಕ ಶಾಕ್ ನೀಡಿದ ಯುಎಸ್

ಅಮೆರಿಕದ ಜೆರಮಿ ಜೋನ್ಸ್ ಅವರು ಪಂದ್ಯದ 64ನೇ ನಿಮಿಷದಲ್ಲಿ ಅದ್ಭುತ ಗೋಲು ದಾಖಲಿಸಿ ಮುನ್ನಡೆ ಒದಗಿಸಿದರು.

ಮುನ್ನಡೆ ಪಡೆದ ಯುಎಸ್ ಮೈಮರೆಯಿತು

ಮುನ್ನಡೆ ಪಡೆದ ಯುಎಸ್ ಮೈಮರೆಯಿತು

ಪಂದ್ಯದ 81ನೇ ನಿಮಿಷದಲ್ಲಿ ಸ್ಟಾರ್ ಆಟಗಾರ ನಾಯಕ ಕ್ಲಿಂಟ್ ಡೆಂಪ್ಸಿ ಅವರು ಗೋಲು ದಾಖಲಿಸಿ ಪಂದ್ಯದಲ್ಲಿ ಮುನ್ನಡೆ ಗಳಿಸಿಕೊಟ್ಟರು. ಆದರೆ, ಮೈಮರೆತ ಯುಎಸ್ಎ ಪಡೆ ಪೋರ್ಚುಗಲ್ ಡ್ರಾ ಮಾಡಿಕೊಳ್ಳಲು ಅವಕಾಶ ನೀಡಿಬಿಟ್ಟರು.

ಗಾಯದಿಂದ ಚೇತರಿಸಿಕೊಳ್ಳದ ರೊನಾಲ್ಡೊ

ಗಾಯದಿಂದ ಚೇತರಿಸಿಕೊಳ್ಳದ ರೊನಾಲ್ಡೊ

ಗಾಯದಿಂದ ಚೇತರಿಸಿಕೊಳ್ಳದ ರೊನಾಲ್ಡೊ ಹೊಸ ಹೇರ್ ಸ್ಟೈಲ್ ನೊಂದಿಗೆ ಕಣಕ್ಕಿಳಿದರೂ ನಾನಿ, ವರೇಲಾ ನೆರಳಿನಂತೆ ಸಂಚರಿಸಿದರು. ಆದರೆ, ಕೊನೆ ಕ್ಷಣದಲ್ಲಿ ವರೇಲಾ ಗೋಲು ಗಳಿಸಲು ಸಹಕಾರಿ ಪೋರ್ಚುಗಲ್ ಮಾನ ಕಾಪಾಡಿದರು.

ಪಂದ್ಯದ ಅಂಕಿ ಅಂಶ ಎಲ್ಲಾ ಹೇಳುತ್ತದೆ

ಪಂದ್ಯದ ಅಂಕಿ ಅಂಶ ಎಲ್ಲಾ ಹೇಳುತ್ತದೆ

* ಒಟ್ಟಾರೆ ಶಾಟ್(ಗುರಿ ತಲುಪಿದ್ದು) : ಯುಎಸ್ಎ 15 (10) vs ಪೋರ್ಚುಗಲ್ 20(9)
* ಫೌಲ್: ಯುಎಸ್ಎ 11 vs ಪೋರ್ಚುಗಲ್ 14
* ಚೆಂಡಿನ ಹಿಡಿತ : ಯುಎಸ್ಎ 48% vs ಪೋರ್ಚುಗಲ್ 52%
* ಕಾರ್ನರ್ : ಯುಎಸ್ಎ 6 vs ಪೋರ್ಚುಗಲ್ 4
* ಆಫ್ ಸೈಡ್: ಯುಎಸ್ಎ 1 vs ಪೋರ್ಚುಗಲ್ 0
* ಹಳದಿ ಕಾರ್ಡ್: ಯುಎಸ್ಎ 1 vs ಪೋರ್ಚುಗಲ್ 0

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X