ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್ 2014: ಕೊರಿಯಾದಲ್ಲಿ ಪದಕಗಳ ಬೇಟೆ

By Mahesh

ದಕ್ಷಿಣ ಕೊರಿಯಾದ ಇಂಚನ್ ನಲ್ಲಿ 17ನೇ ಏಷ್ಯನ್ ಗೇಮ್ಸ್ ಸೆ.19ರಿಂದ ಅ. 4ರ ತನಕ ನಡೆಯಲಿದೆ. ಏಷ್ಯಾದ ದೇಶಗಳು ಚಿನ್ನದ ಬೇಟೆಗೆ ಸಜ್ಜಾಗಿದ್ದು ವೈವಿಧ್ಯಮಯ ಕ್ರೀಡಾ ಹಬ್ಬಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಕಳೆದ ಬಾರಿಯ ಏಷ್ಯನ್ ಗೇಮ್ಸ್ ಚೀನಾದಲ್ಲಿ ಗುವಾಗ್ಜುವಿನಲ್ಲಿ ನಡೆದಿತ್ತು.

ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಕ್ರೀಡಾಕೂಟಕ್ಕೆ ಭಾರತದಿಂದ ಈ ಬಾರಿ 679 ಕ್ರೀಡಾ ಪ್ರತಿನಿಧಿಗಳು ತೆರಳಲಿದ್ದು ಈ ಪೈಕಿ 516 ಅಥ್ಲೀಟ್ ಗಳು 163 ಕೋಚ್ ಗಳು ಹಾಗೂ ಸಹಾಯಕ ಸಿಬ್ಬಂದಿ ಇದ್ದಾರೆ. ಭಾರತ ಈ ಬಾರಿ 28 ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದೆ. ಈ ಬಾರಿಯ ಏಷ್ಯನ್ ಗೇಮ್ಸ್ ನಲ್ಲಿ ಸುಮಾರು 45 ದೇಶಗಳು 39 ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿವೆ.[ಏಷ್ಯನ್ ಗೇಮ್ಸ್ ನಿಂದ ಕಾಲ್ತೆಗೆದ ಜ್ವಾಲಾ ಗುಟ್ಟಾ]

17ನೇ ಏಷ್ಯನ್ ಗೇಮ್ಸ್ ಪಂದ್ಯಾವಳಿಗೂ ಮುನ್ನ ಕ್ರೀಡಾಕೂಟದ ಬಗ್ಗೆ ಒಂದಿಷ್ಟು ವಿವರ ಇಲ್ಲಿದೆ:
* ಅಧಿಕೃತ ಹೆಸರು: 17ನೇ ಏಷ್ಯನ್ ಗೇಮ್ಸ್ ಇಂಚನ್ 2014
* ಧ್ಯೇಯ ವಾಕ್ಯ: Diversity shines here
* ಮುಖ್ಯ ಸ್ಟೇಡಿಯಂ ಹಾಗೂ ಮೈದಾನಗಳು: ಇಂಚನ್ ಏಷ್ಯಾಡ್ ಮುಖ್ಯ ಸ್ಟೇಡಿಯಂ ಹಾಗೂ ಇನ್ನಿತರ ಮೈದಾನಗಳು
* ಅಧಿಕೃತ ಟ್ವಿಟ್ಟರ್ ಐಡಿ : @incheonAG2014en
* ಕ್ರೀಡಾಕೂಟದ ಶ್ರೇಷ್ಠ ಆಟಗಾರ ಪ್ರಶಸ್ತಿ: ಸ್ಯಾಮ್ ಸಂಗ್ ಸಂಸ್ಥೆ ಪ್ರಾಯೋಜಕತ್ವದಲ್ಲಿ ಏಷ್ಯನ್ ಗೇಮ್ಸ್ Most Valuable Player ಪ್ರಶಸ್ತಿ ನೀಡಲಾಗುತ್ತಿದೆ.
* ಕ್ರೀಡಾಕೂಟದ ಸಮಯ ಪಾಲಕರು : Tissot ಕಂಪನಿ
* ಕೊರಿಯಾಗೆ ಮೂರನೇ ಗೌರವ: ಇಂಚನ್ ನಲ್ಲಿ ಪ್ರಥಮಬಾರಿಗೆ ಏಷ್ಯನ್ ಗೇಮ್ಸ್ ಆಯೋಜನೆಗೊಂಡಿದೆ. ಇದಕ್ಕೂ ಮುನ್ನ ಸಿಯೋಲ್ (1986) ಹಾಗೂ ಬೂಸನ್(2002) ನಲ್ಲಿ ಟೂರ್ನಿ ನಡೆದಿತ್ತು.
* ಏಷ್ಯನ್ ಗೇಮ್ಸ್ ಉದ್ಘಾಟನೆಗೂ ಮುನ್ನ ಸೆ.14ರಿಂದ ಫುಟ್ಬಾಲ್ ಆಟಗಳು ಶುರುವಾಗಿದೆ. 15 ದಿನ ಸ್ಪರ್ಧೆಗಳು ನಡೆಯಲಿವೆ.

Asian Games Incheon 2014: All you need to know

* ನಡೆಯಲಿರುವ ಕ್ರೀಡೆಗಳು: ಅಕ್ವಾಟಿಕ್ಸ್(ಈಜು), ಬಿಲ್ಲುಗಾರಿಕೆ, ಅಥ್ಲೆಟಿಕ್ಸ್, ಬಾಡ್ಮಿಂಟನ್, ಬಾಸ್ಕೆಟ್ ಬಾಲ್, ಬಾಕ್ಸಿಂಗ್, ಕನೋಯಿಂಗ್ ಹಾಗೂ ಕಯಾಗಿಂಗ್, ಸೈಕಲಿಂಗ್, ಈಕ್ವೇಸ್ಟ್ರಿಯನ್, ಫುಟ್ಬಾಲ್, ಗಾಲ್ಫ್, ಜಿಮ್ನಾಸ್ಟಿಕ್ಸ್, ಹ್ಯಾಂಡ್ ಬಾಲ್, ಹಾಕಿ, ಜ್ಯೂಡೋ, ಕಬಡ್ಡಿ, ರೋಯಿಂಗ್, ಸೆಪಾಂಗ್ ಟಾಕ್ರಾ, ಶೂಟಿಂಗ್, ಸ್ಕ್ವಾಶ್, ಟೆಕ್ವಾಂಡೋ, ಟೇಬಲ್ ಟೆನಿಸ್, ಟೆನಿಸ್, ವಾಲಿಬಾಲ್, ಕುಸ್ತಿ, ವುಶು, ವೇಟ್ ಲಿಫ್ಟಿಂಗ್ ಹಾಗೂ ಯಾಚಿಂಗ್
* ಸುಮಾರು 45 ದೇಶಗಳು 39 ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿವೆ. ಎಂದಿನಂತೆ ಬಿಸಿಸಿಐ ಕ್ರಿಕೆಟ್ ತಂಡವನ್ನು ಕಳಿಸುತ್ತಿಲ್ಲ.
* ಈಜು ಸ್ಪರ್ಧೆಯಲ್ಲಿ 53 ಚಿನ್ನದ ಪದಕ ಸ್ಪರ್ಧೆಯಲ್ಲಿದೆ.
* ಅಥ್ಲೆಟಿಕ್ ಗ್ರಾಮದಲ್ಲಿ ಒಮ್ಮೆಗೆ 3500 ಕ್ರೀಡಾಳುಗಳು ಭೋಜನ ಮಾಡುವ ವ್ಯವಸ್ಥೆ ಇದೆ. ಕೆಫೆಟೇರಿಯಾ 24X 7 ತೆರೆದಿರುತ್ತದೆ.
* ವಿವಿಧ ದೇಶಗಳಿಂದ ಸುಮಾರು 7000ಕ್ಕೂ ಅಧಿಕ ಮಾಧ್ಯಮ ಪ್ರತಿನಿಧಿಗಳು ಕ್ರೀಡಾಕೂಟವನ್ನು ವರದಿ ಮಾಡಲು ಆಗಮಿಸುತ್ತಿದ್ದಾರೆ.
* ಅಥ್ಲೆಟಿಕ್ ಗ್ರಾಮದಲ್ಲಿ ಸುಮಾರು 22 ಹೊಸ ಅಪಾರ್ಟ್ಮೆಂಟ್ ನಿರ್ಮಿಸಲಾಗಿದೆ.
* 1951ರಲ್ಲಿ ಪ್ರಪ್ರಥಮ ಬಾರಿಗೆ ಏಷ್ಯನ್ ಗೇಮ್ಸ್ ನವದೆಹಲಿಯಲ್ಲಿ ಆರಂಭವಾಯಿತು.
ಏಷ್ಯನ್ ಗೇಮ್ಸ್ ಅಧಿಕೃತ ವಿಡಿಯೋ ನೋಡಿ

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X