ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನವೆಂಬರ್ ನಲ್ಲಿ ಸಚಿನ್ ತೆಂಡೂಲ್ಕರ್ ಆತ್ಮಕಥೆ ರಿಲೀಸ್

By Mahesh

ಮುಂಬೈ, ಸೆ.2: ಕ್ರಿಕೆಟ್ ಜಗತ್ತಿನ ಅಭಿಮಾನಿಗಳ 'ದೇವರು', ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ತಮ್ಮ ಆತ್ಮಕಥೆಯನ್ನು ಬರೆದು ಮುಗಿಸಿದ್ದಾರೆ. ಬಹುನಿರೀಕ್ಷಿತ ಈ ಕೃತಿಯನ್ನು ಬಿಡುಗಡೆ ಮಾಡುವ ದಿನಾಂಕವನ್ನು ಮಂಗಳವಾರ ಸಚಿನ್ ಅವರು ಟ್ವೀಟ್ ಮಾಡಿ ಬಹಿರಂಗ ಮಾಡಿದ್ದಾರೆ.

41 ವರ್ಷ ವಯಸ್ಸಿನ ಸಚಿನ್ ಅವರು ತಮ್ಮ ಅತ್ಮಕಥನಕ್ಕೆ 'ಪ್ಲೇಯಿಂಗ್ ಇಟ್ ಮೈ ವೇ' ಎಂದು ಹೆಸರಿಟ್ಟಿದ್ದಾರೆ. ಸಚಿನ್ ಅವರ ಆತ್ಮಕಥನ ನ.6ರಂದು ಲೋಕಾರ್ಪಣೆಗೊಳ್ಳಲಿದೆ. ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ ನಂತರ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಾವು ಆತ್ಮಚರಿತ್ರೆ ಬರೆಯುತ್ತಿರುವುದಾಗಿ ಸಚಿನ್ ಹೇಳಿದ್ದರು.

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಆಡಿದ ನಂತರ ಕಳೆದ ವರ್ಷ ನವೆಂಬರ್ 17ರಂದು ಸಚಿನ್ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ತಮ್ಮ 200ನೇ ಟೆಸ್ಟ್ ಪಂದ್ಯವಾಡಿದ ಸಚಿನ್ ಅವರಿಗೆ ಭಾವಪೂರ್ಣ ಗುಡ್ ಬೈ ಹೇಳಲಾಗಿತ್ತು.

Sachin Tendulkar to launch his autobiography

ಟೀಂ ಇಂಡಿಯಾ, ಮುಂಬೈ ತಂಡವನ್ನು ಮುನ್ನಡೆಸಿದ ಸಚಿನ್ ಅವರು 2013ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿ ಚಾಂಪಿಯನ್ ಟಿ20 ಐಪಿಎಲ್ ಲೀಗ್ ನಲ್ಲೂ ಚಾಂಪಿಯನ್ ಎನಿಸಿಕೊಂಡರು. 2012ರಲ್ಲಿ ಪಾಕಿಸ್ತಾನ ವಿರುದ್ಧ ಕೊನೆಯ ಏಕದಿನ ಸರಣಿ ಆಡಿದ ಸಚಿನ್ ಅವರು ಎಲ್ಲಾ ಬಗೆಯ ಆಟಗಳಲ್ಲಿ ದಾಖಲೆಗಳನ್ನು ಹೊಂದಿದ್ದು, 100 ಅಂತಾರಾಷ್ಟ್ರೀಯ ಶತಕ ಗಳಿಸಿದ ಏಕೈಕ ಕ್ರಿಕೆಟಿಗ ಎನಿಸಿದ್ದಾರೆ.

ಸಚಿನ್ ಅವರ ಸುದೀರ್ಘ ಕ್ರಿಕೆಟ್ ಪ್ರಯಣದ ನೋವು ನಲಿವಿನ ಕಥೆಯನ್ನು ಓದಲು ಅಭಿಮಾನಿಗಳು ಕಾತುರರಾಗಿದ್ದಾರೆ. ಸಚಿನ್ ಅವರು ಸದ್ಯಕ್ಕೆ ಫುಟ್ಬಾಲ್ ಲೀಗ್ ನಲ್ಲಿ ಕೊಚ್ಚಿ ತಂಡವನ್ನು ಪ್ರತಿನಿಧಿಸುತ್ತಿದ್ದು, ಕ್ರಿಕೆಟ್ ಅಲ್ಲದೆ ಇತರೆ ಕ್ರೀಡೆಗಳಿಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದಾರೆ.

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X