ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಜಯ' ದೊಂದಿಗೆ ಟೆಸ್ಟ್ ಕ್ರಿಕೆಟ್ ಗೆ ಮಹೇಲ ವಿದಾಯ

By Mahesh

ಕೊಲಂಬೋ, ಆ.18: ಸುಮಾರು 17 ವರ್ಷಗಳ ಕಾಲದ ಟೆಸ್ಟ್ ವೃತ್ತಿ ಬದುಕನ್ನು ಜಯದೊಂದಿಗೆ ಮಹೇಲ ಅಂತ್ಯಗೊಳಿಸಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಕಂಡ ಅತ್ಯಂತ ಸಮರ್ಥ ಆಟಗಾರ ತಮ್ಮ ಟೆಸ್ಟ್ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ. ಪಾಕಿಸ್ತಾನ ವಿರುದ್ಧ 105ರನ್ ಗಳ ಗೆಲುವಿನೊಂದಿಗೆ ಲಂಕನ್ನರು ಮಹೇಲಗೆ ಸರಣಿ ಜಯದ ಕಾಣಿಕೆ ನೀಡಿದ್ದಾರೆ.

37 ವರ್ಷ ವಯಸ್ಸಿನ ಮಹೇಲ ಅವರು ಈಗಾಗಲೇ ಟಿ 20 ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿ ಹೊಂದಿದ್ದಾರೆ. ಕಳೆದ ಏಪ್ರಿಲ್ ನಲ್ಲಿ ಶ್ರೀಲಂಕಾ ತಂಡ ವಿಶ್ವಟಿ20 ಕಪ್ ಎತ್ತುತ್ತಿದ್ದಂತೆ ಮಹೇಲ ನಿವೃತ್ತಿ ಘೋಷಿಸಿದ್ದರು. ಮುಂದಿನ ವಿಶ್ವಕಪ್ ಏಕದಿನ ಪಂದ್ಯಾವಳಿಗೂ ಮುನ್ನ ಒಂದೇ ಒಂದು ಪಂದ್ಯದಲ್ಲಿ ಮಹೇಲ ಆಟವನ್ನು ನೋಡಿ ಅಭಿಮಾನಿಗಳು ಕಣ್ತುಂಬಿಸಿಕೊಳ್ಳಬಹುದು.

ಸಂಗಕ್ಕಾರ ಜೊತೆ ಜುಗಲ್ ಬಂದಿ : ಸುದೀರ್ಘ 14 ವರ್ಷಗಳ ಬ್ಯಾಟಿಂಗ್ ಜುಗಲ್ ಬಂದಿಗೆ ಕೊನೆಗೂ ಬೇಸರದಿಂದಲೇ ಶ್ರೀಲಂಕಾದ ಕ್ರಿಕೆಟ್ ಅಭಿಮಾನಿಗಳು ವಿದಾಯ ಹೇಳಬೇಕಾಗಿದೆ. 2000 ಜೂನ್ 20 ರಂದು ಗಾಲೆ ಕ್ರೀಡಾಂಗಣದಲ್ಲಿ ಆರಂಭವಾದ ಮಹೇಲ ಜಯವರ್ಧನೆ ಹಾಗೂ ಕುಮಾರ ಸಂಗಕ್ಕಾರರ ಬ್ಯಾಟಿಂಗ್ ಗೆಳೆತನಕ್ಕೆ ಕೊನೆಗೂ ತೆರೆ ಬಿದ್ದಿದೆ.

Mahela Jayawardene ends glorious Test career with a win

ಮಹೇಲ ಜಯವರ್ಧನೆ- ಕುಮಾರ ಸಂಗಕ್ಕಾರ ಜೋಡಿಯಾಗಿ 119 ಪಂದ್ಯ 6447 ರನ್, 624 (ಗರಿಷ್ಠ ), 18 ಶತಕ, 27 ಅರ್ಧಶತಕ ದಾಖಲಿಸಿ ಟಾಪ್ 5 ಉತ್ತಮ ಜೊತೆಯಾಟ ಪಟ್ಟಿ ಸೇರಿದ್ದಾರೆ. 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗಳಿಸಿದ ದಾಖಲೆಯ 624 ರನ್‍ ಜೊತೆಯಾಟ ಮರೆಯಲು ಸಾಧ್ಯವಿಲ್ಲ. ವಿಶ್ವದಾಖಲೆ ಬರೆದ ಈ ಜೊತೆಯಾಟದಲ್ಲಿ ಮಹೇಲ 374 ರನ್ ಚೆಚ್ಚಿದರೆ, ಸಂಗಕ್ಕಾರ 287 ರನ್ ಬಾರಿಸಿದ್ದರು.

ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ನಲ್ಲಿ 11,000 ರನ್ ಗಳಿಸಿದ ಕೆಲವೇ ಕೆಲವು ಆಟಗಾರರಲ್ಲಿ ಮಹೇಲ ಕೂಡಾ ಒಬ್ಬರು. ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ಜಾಕ್ ಕಾಲಿಸ್, ಕುಮಾರ ಸಂಗಕ್ಕಾರ ಮಾತ್ರ ಈ ಸಾಧನೆ ಮಾಡಿದ್ದಾರೆ. ಮಹೇಲ ಜಯವರ್ಧನೆ 149 ಟೆಸ್ಟ್ 11,814 ರನ್, 34 ಶತಕ, 49.84 ರನ್ ಸರಾಸರಿಯೊಂದಿಗೆ ಟೆಸ್ಟ್ ಗೆ ವಿದಾಯ ಹೇಳಿದ್ದಾರೆ.

ಸಿಂಹಳೀಸ್ ಸ್ಫೋರ್ಟ್ಸ್ ಕ್ಲಬ್ ಮೈದಾನದಲ್ಲಿ 27 ಟೆಸ್ಟ್ ಪಂದ್ಯಗಳಲ್ಲಿ 2921ರನ್ ಗಳಿಸಿರುವ ಮಹೇಲ ಒಂದೇ ಕ್ರೀಡಾಂಗಣದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ವಿಶಿಷ್ಟ ದಾಖಲೆಯನ್ನು ಹೊಂದಿದ್ದಾರೆ. ಹೀಗೆ ಹತ್ತು ಹಲವು ದಾಖಲೆಗಳನ್ನು ಬರೆದಿರುವ ಮಹೇಲ ಅವರು ಅಂತಿಮ ಟೆಸ್ಟ್ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಗಳಿಸಿ ವಿದಾಯ ಹೇಳಿದರು.

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X