ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕಾಮನ್ ವೆಲ್ತ್ ಕ್ರೀಡಾಕೂಟ: ಭಾರತ ರಾಷ್ಟ್ರಧ್ವಜಕ್ಕೆ ಅಪಮಾನ

By Mahesh

ಗ್ಲಾಸ್ಕೋ, ಜು.24: ಸ್ಕಾಟ್ಲೆಂಡಿನಲ್ಲಿ ಆರಂಭಗೊಂಡಿರುವ 20ನೇ ಕಾಮನ್‌ವೆಲ್ತ್ ಕ್ರೀಡಾಕೂಟದ ಆರಂಭದಲ್ಲೇ ಭಾರತಕ್ಕೆ ಆಘಾತ ಉಂಟಾಗಿದೆ. ಕ್ರೀಡಾಕೂಟದ ಆಯೋಜಕರು ಭಾರತ ರಾಷ್ಟ್ರಧ್ವಜಕ್ಕೆ ಅಪಮಾನ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.

ಕಾಮನ್‌ವೆಲ್ತ್ ಕ್ರೀಡಾಕೂಟದ ಸ್ವಾಗತ ಗೀತೆ ಹಾಡುವಾಗ ಆಯೋಜಕರು ಭಾರತ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಪ್ರದರ್ಶಿಸುವ ಮೂಲಕ ಅಪಮಾನ ಎಸಗಿದ್ದಾರೆ. ಆಯೋಜಕರ ಅಜಾಗರೂಕತೆಯಿಂದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.[ಕಾಮನ್ ವೆಲ್ತ್ ಕ್ರೀಡಾಕೂಟ ವರ್ಣರಂಜಿತ ಆರಂಭ]

ಕ್ರೀಡಾಕೂಟದ ಸ್ವಾಗತ ಹಾಡಾದ 'ಲೆಟ್ಸ್ ಬಿಗಾನ್ ದಿ ಗೇಮ್‌' ಎಂಬ ಹಾಡನ್ನು ಹಾಡುವಾಗ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಎಲ್ಲ ರಾಷ್ಟ್ರಗಳ ರಾಷ್ಟ್ರಧ್ವಜವನ್ನು ಪ್ರದರ್ಶಿಸುವುದು ವಾಡಿಕೆಯಾಗಿದ್ದು, ಅದರಂತೆ ನಿನ್ನೆ ಉದ್ಘಾಟನಾ ಸಮಾರಂಭದಲ್ಲಿಯೂ ರಾಷ್ಟ್ರಧ್ವಜಗಳನ್ನು ಪ್ರದರ್ಶಿಸಲಾಗಿತ್ತು. ಆದರೆ ಆಯೋಜಕರು ಭಾರತ ದೇಶವನ್ನು ಪ್ರತಿನಿಧಿಸುವ ಧ್ವಜವನ್ನು ತಲೆಕೆಳಗಾಗಿ ಪ್ರದರ್ಶನ ಮಾಡುವ ಮೂಲಕ ಪ್ರಮಾದ ಎಸಗಿದ್ದಾರೆ.

Indian flag shown upside down in CWG official song video

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಕೂಟವನ್ನು ಅಯೋಜಿಸುವಾಗ ಆಯಾ ದೇಶದ ಬಗೆಗಿನ ಕನಿಷ್ಟ ಜ್ಞಾನವೂ ಇಲ್ಲದೇ ಹೋದರೆ ಆಗುವ ಪ್ರಮಾದಗಳಿಗೆ ಪ್ರಸಕ್ತ ಘಟನೆ ಉತ್ತಮ ಉದಾಹರಣೆಯಂತಿದೆ. ಇದೇ ಮೊದಲ ಬಾರಿಗೆ ಕಾಮನ್‌ವೆಲ್ತ್ ರಾಷ್ಟ್ರಗಳಲ್ಲಿ ಮಕ್ಕಳ ಅಭಿವೃದ್ಧಿಗಾಗಿ ದೇಣಿಗೆಯನ್ನು ಸಂಗ್ರಹಿಸಲಾಯಿತು. ಯುನಿಸೆಫ್ ಪರವಾಗಿ ಮಕ್ಕಳು ಹಾಡಿದ ಗೀತೆಯಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ, ಕೆಲ ಕ್ಷಣ ಕಾಣುವ ಭಾರತದ ಬಾವುಟ ಉಲ್ಟಾ ಆಗಿತ್ತ್ತು.

2010ರ ಕಾಮನ್‌ವೆಲ್ತ್ ಗೇಮ್ಸ್‌ಗೆ ವಿವಾದ,ಭ್ರಷ್ಟಾಚಾರಕ್ಕೆ ಬಲಿಯಾಗಿತ್ತು. ಭಾರತ ಕ್ರೀಡಾಪಟುಗಳಿಗೆ ದಾಖಲೆಯ ಪದಕ ಗೆಲ್ಲುವಲ್ಲಿ ಯಾವುದೇ ಸಮಸ್ಯೆ ಉಂಟಾಗಲಿಲ್ಲ. ಒಟ್ಟು 101 (38 ಚಿನ್ನ, 27 ಬೆಳ್ಳಿ , 36 ಕಂಚು) ಪದಕಗಳನ್ನು ಭಾರತ ಪಡೆದಿತ್ತು. ಪದಕ ಪಟ್ಟಿಯಲ್ಲಿ ಆಸ್ಟ್ರೇಲಿಯ ಮೊದಲ ಸ್ಥಾನ ಮತ್ತು ಭಾರತ ಎರಡನೆ ಸ್ಥಾನ ಹಂಚಿಕೊಂಡಿತ್ತು. ಯುನಿಸೆಫ್ ಗಾಗಿ ಮಕ್ಕಳು ಹಾಡಿದ ಸ್ವಾಗತ ಗೀತೆಯ ಲಿಂಕ್ ಇಲ್ಲಿದೆ ನೋಡಿ...

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X