ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟ್ವಿಟ್ಟರ್ ನಲ್ಲೂ ನಗೆ ಚಾಟಿಗೆ ತುತ್ತಾದ ಬ್ರೆಜಿಲ್

By Mahesh

ಬೆಲೊ ಹಾರಿಜಾಂಟೆ, ಜು.9: ವಿಶ್ವಕಪ್ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಅತಿಥೇಯ ರಾಷ್ಟ್ರ, ಟೂರ್ನಿಯ ಫೇವರೀಟ್ ಎನಿಸಿದ್ದ ಬ್ರೆಜಿಲ್ ತಂಡವನ್ನು ಹಿಗ್ಗಾಮುಗ್ಗಾ ಥಳಿಸಿದ ಜರ್ಮನಿಗೆ ಎಲ್ಲರೂ ಬಹುಪರಾಕ್ ಹೇಳುತ್ತಿದ್ದರೆ, ಬ್ರೆಜಿಲ್ ವಿರುದ್ಧ ಟೀಕೆ, ನಗೆ ಬಾಂಬ್, ಕುಚೋದ್ಯದ ಟ್ವೀಟ್ ಗಳ ಸುರಿಮಳೆಯಾಗಿದೆ.

ವಿಶ್ವಕಪ್ ಇತಿಹಾಸದಲ್ಲೇ ಅತಿಥೇಯ ತಂಡವೊಂದು ಇಷ್ಟು ಹೀನಾಯ ಸೋಲು ಕಂಡಿರಲಿಲ್ಲ.ಆದರೆ, ಜರ್ಮನಿ ವಿರುದ್ಧ ಬ್ರೆಜಿಲ್ 1-7 ಅಂತರದಿಂದ ಸೋತಿದ್ದು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಹೊಸ ದಾಖಲೆ ಬರೆದಿದೆ.

ಜರ್ಮನಿ ತಂಡದ ವೃತ್ತಿ ಪರತೆ, ಕರಾರುವಾಕ್ ದಾಳಿ, ಸೂಕ್ಷ್ಮ ತಂತ್ರಗಾರಿಕೆ ಮುಂದೆ ಬಲಿಷ್ಠ ಬ್ರೆಜಿಲ್ ನೆಲಕಚ್ಚಿದೆ. ಸೆಮಿಫೈನಲ್ ಪಂದ್ಯದಲ್ಲಿ ಬ್ರೆಜಿಲ್ 1-7 ಅಂತರದಿಂದ ಜರ್ಮನ್ನರ ಮುಂದೆ ಮಂಡಿಯೂರುವ ಮೂಲಕ ಅಸಂಖ್ಯ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ.[ಜರ್ಮನ್ನರ ಮುಂದೆ 'ಬೆತ್ತಲೆ'ಯಾದ ಬ್ರೆಜಿಲ್]

ಈ ಬಗ್ಗೆ ಬುಧವಾರ ಹೇಳಿಕೆ ನೀಡಿರುವ ಟ್ವಿಟ್ಟರ್ ಸಂಸ್ಥೆ,ವಿಶ್ವದ ಯಾವುದೇ ಒಂದು ಪಂದ್ಯ ಕಂಡರಿಯದಷ್ಟು ಟ್ವೀಟ್ ಗಳನ್ನು ಬ್ರೆಜಿಲ್ ಹಾಗೂ ಜರ್ಮನಿ ಪಂದ್ಯದಲ್ಲಿ ಕಾಣಲಾಯಿತು ಎಂದಿದೆ. ಸರಿ ಸುಮಾರು 35.6 ಮಿಲಿಯನ್ ಟ್ವೀಟ್ ಗಳು ಹರಿದಾಡಿವೆ.

ಭಾರತ ಸೇರಿದಂತೆ ವಿಶ್ವದೆಲ್ಲೆಡೆಯಿಂದ ಅಭಿಮಾನಿಗಳು, ಅದರಲ್ಲೂ ಫುಟ್ಬಾಲ್ ಕ್ರೇಜ್ ಇಲ್ಲದ ಜನ ಕೂಡಾ ಪಂದ್ಯ ವೀಕ್ಷಿಸಿ ತಮ್ಮ ಪ್ರತಿಕ್ರಿಯೆ ಹಂಚಿಕೊಂಡಿದ್ದಾರಂತೆ. ಟ್ವೀಟ್ ದಾಖಲೆ ಬದಿಗಿಟ್ಟರೆ, ಟ್ವಿಟ್ಟರ್ ನಲ್ಲಿ ಹಾಸ್ಯದೋಕುಳಿಯಲ್ಲಿ ಬ್ರೆಜಿಲ್ ತಂಡವನ್ನು ಮುಳುಗಿಸಲಾಗಿದೆ. ರಸಭರಿತ ಟ್ವೀಟ್ ಗಳು ನಿಮಗಾಗಿ ಇಲ್ಲಿದೆ..

ಟ್ವಿಟ್ಟರ್ ಸಂಸ್ಥೆ ಹೊರ ಹಾಕಿದ ಅಚ್ಚರಿಯ ದಾಖಲೆ

ಟ್ವಿಟ್ಟರ್ ಸಂಸ್ಥೆ ಹೊರ ಹಾಕಿದ ಅಚ್ಚರಿಯ ದಾಖಲೆ

ಪಂದ್ಯದಲ್ಲಿ ಸರಿ ಸುಮಾರು 35.6 ಮಿಲಿಯನ್ ಟ್ವೀಟ್ ಗಳು ಸೇರಿದಂತೆ, Tweets Per Minute ಅಂಕಿ ಅಂಶ ಪ್ರಕಾರ 29ನೇ ನಿಮಿಷದಲ್ಲಿ ಸಾಮಿ ಖದೀರ ಹೊಡೆದ ಗೋಲು ಸುಮಾರು 580,166 ಟ್ವಿಟ್ ಗಳನ್ನು ಪಡೆದುಕೊಂಡು ಹೊಸ ದಾಖಲೆ ಬರೆದಿದೆ.

ಟ್ವಿಟ್ಟರ್ ಅಚ್ಚರಿಯ ದಾಖಲೆ ಗ್ರಾಫಿಕ್ಸ್ ಚಿತ್ರಣ

ಟ್ವಿಟ್ಟರ್ ಅಚ್ಚರಿಯ ದಾಖಲೆ ಗ್ರಾಫಿಕ್ಸ್ ಚಿತ್ರಣದಲ್ಲಿ ಟ್ವೀಟ್/ ನಿಮಿಷ, ಯಾವ ಆಟಗಾರರ ಬಗ್ಗೆ ಹೆಚ್ಚು ಟ್ವೀಟ್, ಯಾವ ಯಾವ ದೇಶದಿಂದ ಟ್ವೀಟ್, ಯಾವ ಅವಧಿಯಲ್ಲಿ ಹೆಚ್ಚು ಟ್ವೀಟ್ ಆಗಿದೆ ಎಂಬ ಮಾಹಿತಿ ಇದೆ.

ಜರ್ಮನಿ ಗೋಲಿ ಬ್ರೆಜಿಲ್ ಪರ ಆಡ್ತಾ ಇದ್ದಾನೆ

ಜರ್ಮನಿ ಗೋಲಿ ಬ್ರೆಜಿಲ್ ಪರ ಆಡ್ತಾ ಇದ್ದಾನೆ ನೋಡಿ ಬೇಕಾದರೆ ಎಷ್ಟು ಚೆಂದವಾಗಿ ಪುಸ್ತಕ ಓದ್ತಾ ಇದ್ದಾನೆ

ಮರಡೋನಾಗೆ ಬ್ರೆಜಿಲ್ ಯಾಕೆ ಇಷ್ಟವಿಲ್ಲ

ಮರಡೋನಾಗೆ ಬ್ರೆಜಿಲ್ ಯಾಕೆ ಇಷ್ಟವಿಲ್ಲ ಎಂಬುದಕ್ಕೆ ಉತ್ತರ ನಿನ್ನೆ ಸಿಕ್ಕಿದೆ.

ಬ್ರೆಜಿಲ್ ಹೊಸ ಬಾವುಟ ಹೀಗಿರತ್ತೆ

ಸೆಮಿಫೈನಲ್ ಪಂದ್ಯದ ನಂತರ ಬ್ರೆಜಿಲ್ ಹೊಸ ಬಾವುಟ ಹೀಗಿರತ್ತೆ

ತೇಜಾಬ್ ಚಿತ್ರದ ಹಾಡು ನೆನಪಾಗುತ್ತದೆ

ತೇಜಾಬ್ ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಕುಣಿತದ ಹಾಡು ನೆನಪಾಗುತ್ತದೆ

ಬ್ರೆಜಿಲ್ಲಿನ ಹೊಸ ಜರ್ಸಿ ಹೀಗಾಗಿದೆ

ಅರೆ ಇದೇನಿದು ಬ್ರೆಜಿಲ್ಲಿನ ಹೊಸ ಜರ್ಸಿ ಹೀಗಾಗಿದೆ

ಬ್ರೆಜಿಲ್ಲಿನ ಏಕೈಕ ಆಶಾಕಿರಣ

ಬ್ರೆಜಿಲ್ಲಿನ ಏಕೈಕ ಆಶಾಕಿರಣ ಯಾವುದು ಗೊತ್ತೆ

ನೇಮಾರ್ ಗೆ ಸರಿಯಾದ ಸನ್ಮಾನ ಸಿಕ್ಕಿದೆ

ನೇಮಾರ್ ಗಾಗಿ ಪಂದ್ಯ ಗೆಲ್ಲುವ ಮಾತನಾಡಿದ್ದ ಬ್ರೆಜಿಲ್ ಸರಿಯಾದ ಸನ್ಮಾನ ನೀಡಿದೆ.

ಬ್ರೆಜಿಲ್ ಪಂದ್ಯ ನೋಡದವರಿಲ್ಲ

ಬ್ರೆಜಿಲ್ ಹಾಗೂ ಜರ್ಮನಿ ಸೆಮಿಫೈನಲ್ ಪಂದ್ಯ ನೋಡದವರಿಲ್ಲ

ಬ್ರೆಜಿಲ್ ಡಿಫೆನ್ಸ್ ಹೀಗಿದೆ

ಸೆಮಿಫೈನಲ್ ಪಂದ್ಯದಲ್ಲಿ ಬ್ರೆಜಿಲ್ ಡಿಫೆನ್ಸ್ ಹೀಗಿದೆ

ಬಿಗ್ ಫಿಲ್ ಕಥೆ ಏನಾಯ್ತು

ಬ್ರೆಜಿಲ್ ಕೋಚ್ ಬಿಗ್ ಫಿಲ್ ಅಲಿಯಾಸ್ ಸ್ಕೋಲಾರಿ ಕಥೆ ಏನಾಯ್ತು

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X