ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕಾಮನ್ ವೆಲ್ತ್ ಕ್ರೀಡಾಕೂಟ ವರ್ಣರಂಜಿತ ಆರಂಭ

By Mahesh

ಗ್ಲಾಸ್ಗೋ, ಜು.24: ಬಣ್ಣ ಬಣ್ಣದ ಬೆಳಕಿನ ಚಿತ್ತಾರದ ನಡುವೆ 20ನೇ ಕಾಮನ್‌ವೆಲ್ತ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ವಿಶ್ವದ ಗಮನ ಸೆಳೆದಿದೆ. ಸ್ಕಾಟ್ಲೆಂಡ್ ರಾಜಧಾನಿ ಗ್ಲಾಸ್ಗೋದಲ್ಲಿನ ಸೆಲ್ಟಿಕ್ ಪಾರ್ಕ್‌ನಲ್ಲಿ ಬುಧವಾರ ತಡರಾತ್ರಿ ವರ್ಣಮಯ ಕಾರ್ಯಕ್ರಮದ ಜತೆಗೆ 11 ದಿನಗಳ ಕಾಲದ ಕ್ರೀಡಾ ಹಬ್ಬಕ್ಕೆ ಚಾಲನೆ ನೀಡಲಾಗಿದೆ.

ಇಂಗ್ಲೆಂಡಿನ ರಾಣಿ 2ನೇ ಎಲಿಜೆಬೆತ್‌ ಅವರು ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಸ್ಕಾಟ್ಲೆಂಡ್‌ನ ಜನರ ಜೀವನ ಶೈಲಿ, ಸಂಸ್ಕೃತಿಗಳು ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟ ಕಲಾವಿದರು ತಮ್ಮ ಸಂಗೀತ ನೃತ್ಯಗಳ ಮೂಲಕ ಜನರ ಮನ ಸೂರೆ ಮಾಡಿದರು.

ಉದ್ಘಾಟನಾ ಕಾರ್ಯಕ್ರದದಲ್ಲಿ ಖ್ಯಾತ ಗಾಯಕ ನಿಕೊಲ್ ಶರ್ಜಿಂಗರ್, ಸೈಕ್ಲಿಂಗ್ ದಂತಕತೆ ಸರ್ ಕ್ರಿಸ್ ಹಾಯ್, ಫುಟ್ಬಾಲ್ ಖ್ಯಾತ ತಾರೆ ಸರ್ ಅಲೆಕ್ಸ್ ಫರ್ಗುಸನ್, ಖ್ಯಾತ ನಟಿ ಕೀಲೆ ಹವೇಸ್ ಗಮನ ಸೆಳೆದ ಮುಖ್ಯ ಅತಿಥಿಗಳಾಗಿದ್ದರು. ಮನರಂಜನಾ ಕಾರ್ಯಕ್ರಮ ನೀಡಿದ ಸ್ಕಾಟ್ಲೆಂಡ್‌ನ ಐಕಾನ್ ರಾಡ್ ಸ್ಟಿವರ್ಟ್, ಬ್ರಿಟೀಷ್ ಗಾಟ್ ಟ್ಯಾಲೆಂಟ್ ಕಾರ್ಯಕ್ರಮದ ವಿಜೇತ ಸೂಸನ್ ಬಾಯ್ಲೆ, ಗಾಯಕ ಆಮಿ ಮೆಕ್‌ಡೊನಾಲ್ಡ್ ಜತೆಗೆ ಸ್ಥಳೀಯ ಕಲಾವಿದರು ಎಲ್ಲರನ್ನು ರಂಜಿಸಿದರು. [ಕಾಮನ್ ವೆಲ್ತ್ ಕ್ರೀಡಾಕೂಟ ವರ್ಣರಂಜಿತ ಆರಂಭ]

ವಿಶೇಷ ಅಂಶ ಎಂದರೆ ಯುನಿಸೆಫ್‌ನ ದೇಣಿಗೆ ಸಂಗ್ರಹ. ಪುಟ್ ಚಿಲ್ಡ್ರನ್ ಫರ್ಸ್ಟ್ ಎಂಬ ಕಾರ್ಯಕ್ರಮದ ಮೂಲಕ ಕಾಮನ್‌ವೆಲ್ತ್ ರಾಷ್ಟ್ರಗಳಲ್ಲಿ ಮಕ್ಕಳ ಅಭಿವೃದ್ಧಿಗಾಗಿ ದೇಣಿಗೆಯನ್ನು ಸಂಗ್ರಹಿಸಲಾಯಿತು. ಕಾಮನ್‌ವೆಲ್ತ್ ಕ್ರೀಡಾಕೂಟದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದೇಣಿಗೆ ಸಂಗ್ರಹಿಸಲಾಯಿತು. ವರ್ಣ ರಂಜಿತ ಕಾರ್ಯಕ್ರಮವನ್ನು ಆಯೋಜಿಸಿ ಯಶಸ್ವಿಗೊಳಿಸಿದ ಸಾಧನೆ ಡೇವಿಡ್ ಜೊಲ್ಕ್ ವರ್ ಅವರಿಗೆ ಸಲ್ಲುತ್ತದೆ. ಉದ್ಘಟನಾ ಸಮಾರಂಭ ಚಿತ್ರಗಳು ನಿಮ್ಮ ಮುಂದೆ...

 ಕಾಮನ್ ವೆಲ್ತ್ ಕ್ರೀಡಾಕೂಟ 2014 ಆರಂಭ

ಕಾಮನ್ ವೆಲ್ತ್ ಕ್ರೀಡಾಕೂಟ 2014 ಆರಂಭ

ಇಂಗ್ಲೆಂಡಿನ ರಾಣಿ 2ನೇ ಎಲಿಜೆಬೆತ್‌ ಅವರು ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಸ್ಕಾಟ್ಲೆಂಡ್‌ನ ಜನರ ಜೀವನ ಶೈಲಿ, ಸಂಸ್ಕೃತಿಗಳು ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟ ಕಲಾವಿದರು ತಮ್ಮ ಸಂಗೀತ ನೃತ್ಯಗಳ ಮೂಲಕ ಜನರ ಮನ ಸೂರೆ ಮಾಡಿದರು.

ತ್ರಿವರ್ಣ ಧ್ವಜ ಹಿಡಿದ ಭಾರತದ ಕ್ರೀಡಾಳುಗಳು

ತ್ರಿವರ್ಣ ಧ್ವಜ ಹಿಡಿದ ಭಾರತದ ಕ್ರೀಡಾಳುಗಳು

2010ರ ಕಾಮನ್‌ವೆಲ್ತ್ ಗೇಮ್ಸ್‌ಗೆ ವಿವಾದ,ಭ್ರಷ್ಟಾಚಾರಕ್ಕೆ ಬಲಿಯಾಗಿತ್ತು. ಭಾರತ ಕ್ರೀಡಾಪಟುಗಳಿಗೆ ದಾಖಲೆಯ ಪದಕ ಗೆಲ್ಲುವಲ್ಲಿ ಯಾವುದೇ ಸಮಸ್ಯೆ ಉಂಟಾಗಲಿಲ್ಲ. ಒಟ್ಟು 101(38 ಚಿನ್ನ, 27 ಬೆಳ್ಳಿ , 36 ಕಂಚು) ಪದಕಗಳನ್ನು ಭಾರತ ಪಡೆದಿತ್ತು. ಪದಕ ಪಟ್ಟಿಯಲ್ಲಿ ಆಸ್ಟ್ರೇಲಿಯ ಮೊದಲ ಸ್ಥಾನ ಮತ್ತು ಭಾರತ ಎರಡನೆ ಸ್ಥಾನ ಹಂಚಿಕೊಂಡಿತ್ತು.

ಉದ್ಘಾಟನಾ ಕಾರ್ಯಕ್ರಮದಲ್ಲಿ

ಉದ್ಘಾಟನಾ ಕಾರ್ಯಕ್ರಮದಲ್ಲಿ

ಉದ್ಘಾಟನಾ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ನಿಕೊಲ್ ಶರ್ಜಿಂಗರ್, ಸೈಕ್ಲಿಂಗ್ ದಂತಕತೆ ಸರ್ ಕ್ರಿಸ್ ಹಾಯ್, ಫುಟ್ಬಾಲ್ ಖ್ಯಾತ ತಾರೆ ಸರ್ ಅಲೆಕ್ಸ್ ಫರ್ಗುಸನ್, ಖ್ಯಾತ ನಟಿ ಕೀಲೆ ಹವೇಸ್ ಗಮನ ಸೆಳೆದ ಮುಖ್ಯ ಅತಿಥಿಗಳಾಗಿದ್ದರು

ಮೂರನೆ ಬಾರಿ ಸ್ಕಾಟ್ಲೆಂಡ್ ನಲ್ಲಿ ಆಯೋಜನೆ

ಮೂರನೆ ಬಾರಿ ಸ್ಕಾಟ್ಲೆಂಡ್ ನಲ್ಲಿ ಆಯೋಜನೆ

ಸ್ಕಾಟ್ಲೆಂಡ್ ಮೂರನೆ ಬಾರಿ ಕಾಮನ್‌ವೆಲ್ತ್ ಕ್ರೀಡಾಕೂಟ ಆಯೋಜಿಸಿದೆ.1986 ಮತ್ತು 1970ರಲ್ಲಿ ಈ ಮೊದಲು ಕ್ರೀಡಾಕೂಟ ನಡೆದಿತ್ತು.

ಆಸ್ಟ್ರೇಲಿಯ- ಆರು ಬಾರಿ ಸಮಗ್ರ ಪ್ರಶಸ್ತಿ

ಆಸ್ಟ್ರೇಲಿಯ- ಆರು ಬಾರಿ ಸಮಗ್ರ ಪ್ರಶಸ್ತಿ

ಆಸ್ಟ್ರೇಲಿಯ ಸಿಡಬ್ಲುಜಿ ಇತಿಹಾಸದಲ್ಲಿ ಯಶಸ್ವಿ ದೇಶ ಅದು ಈ ವರೆಗೆ 803 ಚಿನ್ನದ ಪದಕ ಪಡೆದಿದೆ. ಸತತ ಆರು ಬಾರಿ ಸಮಗ್ರ ಪ್ರಶಸ್ತಿ ಬಾಚಿಕೊಂಡಿದೆ.

ಭಾರತ 215 ಕ್ರೀಡಾಪಟುಗಳನ್ನು ಕಣಕ್ಕಿಳಿಸಿದೆ

ಭಾರತ 215 ಕ್ರೀಡಾಪಟುಗಳನ್ನು ಕಣಕ್ಕಿಳಿಸಿದೆ

2010ರ ಒಲಿಂಪಿಕ್ಸ್‌ನಲ್ಲಿ ಭಾರತ 38 ಚಿನ್ನ, 27 ಬೆಳ್ಳಿ ಮತ್ತು 36 ಕಂಚು ಪಡೆದು ಕೂಟದಲ್ಲಿ ಎರಡನೆ ಸ್ಥಾನ ಗಿಟ್ಟಿಸಿಕೊಂಡಿತ್ತು. ಭಾರತ ಈ ಬಾರಿಯ ಕ್ರೀಡಾಕೂಟದಲ್ಲಿ 215 ಕ್ರೀಡಾಪಟುಗಳನ್ನು ಕಣಕ್ಕಿಳಿಸಿದೆ.

ಒಟ್ಟಾರೆ ಕ್ರೀಡಾಪಟುಗಳೆಷ್ಟಿದ್ದಾರೆ

ಒಟ್ಟಾರೆ ಕ್ರೀಡಾಪಟುಗಳೆಷ್ಟಿದ್ದಾರೆ

ಈ ಬಾರಿ 17 ಕ್ರೀಡೆಗಳ 261 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. 71 ರಾಷ್ಟ್ರಗಳ 4,900 ಕ್ರೀಡಾಪಟುಗಳು ಸ್ಪರ್ಧಿಸುತ್ತಿದ್ದಾರೆ.

17 ವಿಭಾಗಗಳಲ್ಲೂ ಭಾರತದ ಸ್ಪರ್ಧೆ

17 ವಿಭಾಗಗಳಲ್ಲೂ ಭಾರತದ ಸ್ಪರ್ಧೆ

* 17 ಸ್ಪರ್ಧೆಗಳ ಪೈಕಿ ರಗ್ಬಿ, ಟ್ರಯಾಥ್ಲಾನ್ ಮತ್ತು ನೆಟ್‌ಬಾಲ್ ಹೊರತುಪಡಿಸಿ ಉಳಿದ 14 ಸ್ಪರ್ಧೆಗಳಲ್ಲಿ ಭಾರತ ಪದಕದ ಬೇಟೆ ನಡೆಸಲಿದೆ.
* ಸ್ಕಾಟ್ಲೆಂಡ್‌ನ ಖ್ಯಾತ ಆಭರಣ ವಿನ್ಯಾಸಕಾರ ಜೊನಾಥನ್ ಬೊಯ್ಡಾ ನೇತೃತ್ವದ 11 ಮಂದಿ ಸದಸ್ಯರ ತಂಡ ಕ್ರೀಡಾಕೂಟಕ್ಕೆ ಪದಕಗಳನ್ನು ಸಿದ್ದಪಡಿಸಿದ್ದಾರೆ. ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳು ತಲಾ 100 ಗ್ರಾಂ ತೂಕ ಹೊಂದಿದೆ.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X