ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

CWG 5ನೇ ದಿನ: ಶಿವಲಿಂಗಂ ಚಿನ್ನದ ಬೇಟೆ

By Mahesh

ಗ್ಲಾಸ್ಕೋ, ಜು.28: ಸ್ಕಾಟ್ಲೆಂಡಿನಲ್ಲಿ ನಡೆದಿರುವ 20ನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಐದನೇ ದಿನ ಮಿಶ್ರ ಫಲಿತಾಂಶ ಪಡೆದುಕೊಂಡಿದೆ. ವೇಟ್ ಲಿಫ್ಟಿಂಗ್ ನಲ್ಲಿ ಸತೀಶ್ ಸಾಧನೆ, ಶೂಟಿಂಗ್ ನಲ್ಲಿ ಶ್ರೇಯಾಸಿ ಸಿಂಗ್ ಸಾಧನೆ ಕ್ರೀಡಾಪಟುಗಳ ಉತ್ಸಾಹ ಹೆಚ್ಚಿಸಿದೆ. ಆದರೆ, ಬಾಡ್ಮಿಂಟನ್, ಟೇಬರ್ ಟೆನಿಸ್ ಪಟುಗಳು ನಿರಾಶೆ ಮೂಡಿಸಿದ್ದಾರೆ.

ಭಾರತ ಒಟ್ಟಾರೆ 22 ಪದಕಗಳನ್ನು ಗಳಿಸಿದೆ. ತಮಿಳುನಾಡು ಮೂಲದ ಸತೀಶ್ ಶಿವಲಿಂಗಂ ವೇಟ್ ಲಿಫ್ಟಿಂಗ್ ನಲ್ಲಿ ಕೂಟ ದಾಖಲೆ ಬರೆದು ಚಿನ್ನ ಗೆದ್ದರು. ಒಟ್ಟಾರೆ 6 ಚಿನ್ನ, 9 ಬೆಳ್ಳಿ ಹಾಗೂ 7 ಕಂಚಿನ ಪದಕ ಗೆದ್ದುಕೊಂಡಿದೆ. ದೆಹಲಿಯಲ್ಲಿ ನಡೆದಿದ್ದ ಕಾಮನ್ ವೆಲ್ತ್ ಕ್ರೀಡಾಕೂಟ 2010ರಲ್ಲಿ ಭಾರತ 101 ಪದಕ (38 ಚಿನ್ನ, 27 ಬೆಳ್ಳಿ ಹಾಗೂ 36 ಕಂಚು) ಗಳಿಸಿತ್ತು.

Shreyasi Singh

ಜುಲೈ 27ರಂತೆ ಭಾರತದ ಪದಕ ವಿಜೇತರ ಪಟ್ಟಿ
ಚಿನ್ನ 6
* ಸತೀಶ್ ಶಿವಲಿಂಗಮ್: ಪುರುಷರ 77 ಕೆ.ಜಿ ವಿಭಾಗ ವೇಟ್ ಲಿಫ್ಟಿಂಗ್
* ಅಪೂರ್ವಿ ಚಾಂಡೆಲ : ಮಹಿಳೆಯರ ಶೂಟಿಂಗ್ 10 ಮೀ ಏರ್ ರೈಫಲ್
* ರಾಹಿ ಸರ್ನೊಬಾತ್ : ಮಹಿಳೆಯರ ಶೂಟಿಂಗ್ 25 ಮೀ ಏರ್ ರೈಫಲ್
* ಅಭಿನವ್ ಬಿಂದ್ರಾ : ಪುರುಷರ ಶೂಟಿಂಗ್ 10 ಮೀ ಏರ್ ರೈಫಲ್
* ಕೆ ಸಂಜೀತಾ ಚಾನು: ಮಹಿಳೆಯರ 48 ಕೆ.ಜಿ ವಿಭಾಗ (ಒಟ್ಟಾರೆ ಲಿಫ್ಟ್ 173 ಕೆಜಿ, 77+96)
* ಸುಕೇನ್ ಡೇ: ಪುರುಷರ 56 ಕೆ.ಜಿ ವಿಭಾಗ (ಒಟ್ಟಾರೆ ಲಿಫ್ಟ್ 248 ಕೆಜಿ, 109+139)

ಬೆಳ್ಳಿ 9
* ಶ್ರೇಯಸಿ ಸಿಂಗ್: ಮಹಿಳೆಯರ ಶೂಟಿಂಗ್ ಡಬಲ್ ಟ್ರಾಪ್
* ರವಿ ಕಟುಲು : ಪುರುಷರ 77 ಕೆ.ಜಿ ವಿಭಾಗ ವೇಟ್ ಲಿಫ್ಟಿಂಗ್
* ಪ್ರಕಾಶ್ ನಂಜಪ್ಪ: ಪುರುಷರ ಶೂಟಿಂಗ್ 10 ಮೀ ಏರ್ ಪಿಸ್ತೂಲ್
* ಅಯೋನಿಕಾ ಪಾಲ್ : ಮಹಿಳೆಯರ ಶೂಟಿಂಗ್ 10 ಮೀ ಏರ್ ರೈಫಲ್
* ಮಲೈಕಾ ಗೋಯಲ್ : ಮಹಿಳೆಯರ ಶೂಟಿಂಗ್ 10 ಮೀ ಏರ್ ರೈಫಲ್
* ಅನಿಶಾ ಸಯೀದ್ : ಮಹಿಳೆಯರ ಶೂಟಿಂಗ್ 25 ಮೀ ಏರ್ ಪಿಸ್ತೂಲ್
* ಎಸ್ ಮಿರಾಬಾಯಿ ಚಾನು: ಮಹಿಳೆಯರ 48 ಕೆ.ಜಿ ವಿಭಾಗ (ಒಟ್ಟಾರೆ ಲಿಫ್ಟ್ 170 ಕೆಜಿ, 75+95)
* ನವಜ್ಯೋತ್ ಚಾನ : ಪುರುಷರ ಜುಡೋ 60 ಕೆ.ಜಿ ವಿಭಾಗ (ಅಶ್ಲೆ ಮೆಕ್ ಕೆಂಜನಿ (ಇಂಗ್ಲೆಂಡ್) ಪೆನಾಲ್ಟಿ ಪಾಯಿಂಟ್ ನಲ್ಲಿ ಸೋಲು ಕಂಡರು)
* ಸುಶೀಲಾ ಲಿಕ್ಮಾಬಾಮ್ : ಮಹಿಳೆಯರ ಜುಡೋ 48 ಕೆ.ಜಿ ವಿಭಾಗ(ಸ್ಕಾಟ್ಲೆಂಡಿನ ಕಿಂಬರ್ಲಿ ರೆನಿಕ್ಸ್ ವಿರುದ್ಧ ಸೋಲು)

ಕಂಚು 7
* ಮಹಮ್ಮದ್ ಅಸಾಬ್: ಪುರುಷರ ಶೂಟಿಂಗ್ ಡಬಲ್ ಟ್ರಾಪ್
* ಪೂನಮ್ ಯಾದವ್ : ಮಹಿಳೆಯರ ವೇಟ್ ಲಿಫ್ಟಿಂಗ್ 63 ಕೆಜಿ
* ರಾಜ್ವಿಂದರ್ ಕೌರ್ : ಮಹಿಳೆಯರ 78 ಕೆಜಿ ವಿಭಾಗ ಜುಡೋ
* ಓಂಕಾರ್ ಓಟಾರಿ: ಪುರುಷರ 69 ಕೆಜಿ ವೇಟ್ ಲಿಫ್ಟಿಂಗ್
* ಸಂತೋಷಿ ಮಾತ್ಸಾ: ಮಹಿಳೆಯರ 53 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್.
* ಕಲ್ಪನಾ ಥೌಡಮ್ : ಮಹಿಳೆ ಜುಡೋ 52 ಕೆ.ಜಿ(ಮಾರಿಷಸ್ ನ ಕ್ರಿಶ್ಚಿಯನ್ ಲೆಗೆನ್ಟಿಲ್ ಸೋಲಿಸಿದರು)
* ಗಣೇಶ್ ಮಾಲಿ : ಪುರುಷರ ವೆಟ್ ಲಿಫ್ಟಿಂಗ್ 56 ಕೆ.ಜಿ (ಒಟ್ಟಾರೆ ಲಿಫ್ಟ್ 244 ಕೆಜಿ, 111+133)

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X