ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಸೆ.17ರಿಂದ ಅ.4ರ ತನಕ ಸಿಎಲ್ಟಿ20ವೇಳಾಪಟ್ಟಿ

By Mahesh

ಹೈದರಾಬಾದ್, ಸೆ.17: ಚುಟುಕು ಚಾಂಪಿಯನ್ಸ್ ಕ್ರಿಕೆಟ್ ಲೀಗ್ ಪಂದ್ಯಾವಳಿ ಸೆ.13ರಿಂದ ಆರಂಭವಾದರೂ ಅಸಲಿ ಆಟ ಸೆ.17ರಿಂದ ಆರಂಭವಾಗಲಿದೆ. ಟಿ 20 ಹಂಗಾಮ ಅಕ್ಟೋಬರ್ 4ರವರೆಗೆ ನಡೆಯಲಿದೆ. 6ನೇ ಸಿಎಲ್ಟಿ20 ಕದನದಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ ತಂಡಗಳೇ ಗೆಲ್ಲುವ ನೆಚ್ಚಿನ ತಂಡಗಳೆನಿಸಿವೆ. ಆದರೆ, ಈಗಾಗಲೇ ಅರ್ಹತಾ ಸುತ್ತಿನಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹೊರಬಿದ್ದಿದೆ.

ಸೆ.13ರಿಂದ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಿತು, 2014ರ ಐಪಿಎಲ್ ಟೂರ್ನಿ ಗೆದ್ದಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ, ಎರಡು ಬಾರಿ ಐಪಿಎಲ್ ವಿಜೇತ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಲೀಗ್ ಪ್ರಮುಖ ತಂಡಗಳಾಗಿವೆ. ಕಳೆದ ಐದು ವರ್ಷಗಳಲ್ಲಿ ನಡೆದಿರುವ ಚಾಂಪಿಯನ್ ಟ್ರೋಫಿಯಲ್ಲಿ ಭಾರತ ಮೂರು ಬಾರಿ ಗೆದ್ದಿರುವುದು ವಿಶೇಷ. 2010, 2011 ಹಾಗೂ 2013ರಲ್ಲಿ ಭಾರತೀಯ ತಂಡಗಳೇ ಚಾಂಪಿಯನ್ ತಂಡಗಳಾಗಿ ಹೊರಹೊಮ್ಮಿವೆ.

ಗ್ರೂಪ್ ಎ ಗುಂಪಿನಲ್ಲಿ
* ಭಾರತದ ಕೋಲ್ಕತ್ತಾ ನೈಟ್ ರೈಡರ್ಸ್
* ದಕ್ಷಿಣ ಆಫ್ರಿಕಾದ ಡಾಲ್ಫಿನ್ಸ್
* ಆಸ್ಟ್ರೇಲಿಯಾದ ಪರ್ತ್ ಸ್ಕಾರ್ಚರ್ಸ್
* ಚೆನ್ನೈ ಸೂಪರ್ ಕಿಂಗ್ ತಂಡಗಳು
* ಪಾಕಿಸ್ತಾನದ ಲಾಹೋರ್ ಲಯನ್ಸ್ (ಅರ್ಹತಾ ಸುತ್ತಿನಿಂದ ಆಯ್ಕೆ)
ಬಿ ಗುಂಪಿನಲ್ಲಿ
* ಭಾರತದ ಕಿಂಗ್ಸ್ ಇಲೆವೆನ್ ಪಂಜಾಬ್
* ಆಸ್ಟ್ರೇಲಿಯಾದ ಹೊಬಾರ್ಟ್ ಹರಿಕೇನ್ಸ್
* ದಕ್ಷಿಣ ಆಫ್ರಿಕಾದ ಕೇಪ್ ಕೋಬ್ರಾಸ್
* ವೆಸ್ಟ್ ಇಂಡೀಸ್‍ನ ಬರ್ಬಡಾಸ್ ಟ್ರೆಡೆಂಟ್ ತಂಡಗಳು
* ನ್ಯೂಜಿಲೆಂಡ್ ನ ನಾರ್ದನ್ ನೈಟ್ಸ್ (ಅರ್ಹತಾ ಸುತ್ತಿನಿಂದ ಆಯ್ಕೆ)

Champions League 2014 (CLT20) Schedule

ಮೊಹಾಲಿ, ಬೆಂಗಳೂರು, ಹೈದರಾಬಾದ್ ಹಾಗೂ ರಾಯ್‍ಪುರಗಳಲ್ಲಿ ಪಂದ್ಯಗಳು ನಡೆಯಲಿವೆ. ಅ.2ರಿಂದ ಆರಂಭಗೊಳ್ಳಲಿರುವ ಸೆಮಿಫೈನಲ್ ಪಂದ್ಯಗಳು ಹೈದರಾಬಾದ್‍ನಲ್ಲಿ ನಡೆಯಲಿದ್ದು, ಅ.4ರಂದು ನಡೆಯಲಿರುವ ಫೈನಲ್ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ. ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ:

ಚಾಂಪಿಯನ್ಸ್‌ ಲೀಗ್‌ ಟಿ-20 ವೇಳಾಪಟ್ಟಿ

ಸೆ. 17 ಕೆಕೆಆರ್‌-ಚೆನ್ನೈ ಹೈದರಾಬಾದ್‌ ರಾತ್ರಿ 8.00

ಸೆ. 18 ಪಂಜಾಬ್‌-ಹೋಬರ್ಟ್‌ ಮೊಹಾಲಿ ರಾತ್ರಿ 8.00

ಸೆ. 19 ಕೇಪ್‌ ಕೋಬ್ರಾಸ್‌-ಅರ್ಹತಾ ತಂಡ ರಾಯ್‌ಪುರ ರಾತ್ರಿ 8.00

ಸೆ. 20 ಡಾಲ್ಫಿನ್ಸ್‌-ಪರ್ತ್‌ ಮೊಹಾಲಿ ಸಂಜೆ 4.00

ಸೆ. 20 ಬಾರ್ಬಡಾಸ್‌-ಪಂಜಾಬ್‌ ಮೊಹಾಲಿ ರಾತ್ರಿ 8.00

ಸೆ. 21 ಕೇಪ್‌ ಕೋಬ್ರಾಸ್‌-ಹೋಬರ್ಟ್‌ ಹೈದರಾಬಾದ್‌ ಸಂಜೆ 4.00

ಸೆ. 21 ಕೆಕೆಆರ್‌-ಅರ್ಹತಾ ತಂಡ ಹೈದರಾಬಾದ್‌ ರಾತ್ರಿ 8.00

ಸೆ. 22 ಡಾಲ್ಫಿನ್ಸ್‌-ಚೆನ್ನೈ ಬೆಂಗಳೂರು ರಾತ್ರಿ 8.00

ಸೆ. 23 ಹೋಬರ್ಟ್‌-ಅರ್ಹತಾ ತಂಡ ರಾಯ್‌ಪುರ ರಾತ್ರಿ 8.00

ಸೆ. 24 ಕೆಕೆಆರ್‌-ಪರ್ತ್‌ ಹೈದರಾಬಾದ್‌ ರಾತ್ರಿ 8.00

ಸೆ. 25 ಚೆನ್ನೈ-ಅರ್ಹತಾ ತಂಡ ಬೆಂಗಳೂರು ರಾತ್ರಿ 8.00

ಸೆ. 26 ಬಾರ್ಬಡಾಸ್‌-ಕೇಪ್‌ ಕೋಬ್ರಾಸ್‌ ಮೊಹಾಲಿ ಸಂಜೆ 4.00

ಸೆ. 26 ಪಂಜಾಬ್‌-ಅರ್ಹತಾ ತಂಡ ಮೊಹಾಲಿ ರಾತ್ರಿ 8.00

ಸೆ. 27 ಡಾಲ್ಫಿನ್ಸ್‌-ಅರ್ಹತಾ ತಂಡ ಬೆಂಗಳೂರು ಸಂಜೆ 4.00

ಸೆ. 27 ಪರ್ತ್‌-ಚೆನ್ನೈ ಬೆಂಗಳೂರು ರಾತ್ರಿ 8.00

ಸೆ. 28 ಬಾರ್ಬಡಾಸ್‌-ಹೋಬರ್ಟ್‌ ಮೊಹಾಲಿ ಸಂಜೆ 4.00

ಸೆ. 28 ಪಂಜಾಬ್‌-ಕೇಪ್‌ ಕೋಬ್ರಾಸ್‌ ಮೊಹಾಲಿ ರಾತ್ರಿ 8.00

ಸೆ. 29 ಕೆಕೆಆರ್‌-ಡಾಲ್ಫಿನ್ಸ್‌ ಹೈದರಾಬಾದ್‌ ರಾತ್ರಿ 8.00

ಸೆ. 30 ಪರ್ತ್‌-ಅರ್ಹತಾ ತಂಡ ಬೆಂಗಳೂರು ಸಂಜೆ 4.00

ಸೆ. 30 ಬಾರ್ಬಡಾಸ್‌-ಅರ್ಹತಾ ತಂಡ ಬೆಂಗಳೂರು ರಾತ್ರಿ 8.00

ಅ. 2 ಮೊದಲ ಸೆಮಿಫೈನಲ್‌ ಹೈದರಾಬಾದ್‌ ಸಂಜೆ 4.00

ಅ. 2 ಎರಡನೇ ಸೆಮಿಫೈನಲ್‌ ಹೈದರಾಬಾದ್‌ ರಾತ್ರಿ 8.00

ಅ. 4 ಫೈನಲ್‌ ಬೆಂಗಳೂರು ರಾತ್ರಿ 8.00

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X