ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಎಲ್ಟಿ20:ಸ್ಟೇಡಿಯಂ ಸುತ್ತಾ ವಾಹನ ನಿಲುಗಡೆ, ನಿಷೇಧ ಎಲ್ಲೆಲ್ಲಿ?

By Mahesh

ಬೆಂಗಳೂರು, ಸೆ.21: ಚಾಂಪಿಯನ್ಸ್ ಲೀಗ್ ಟಿ20 ಸಮರಕ್ಕೆ ನಗರದ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಆಟಗಾರರು ಭರ್ಜರಿ ತಯಾರಿ ನಡೆಸಿದಂತೆ ಬೆಂಗಳೂರಿನ ಪೊಲೀಸರು ಕೂಡಾ ಭದ್ರತಾ ದೃಷ್ಟಿಯಿಂದ ಬಿಗಿ ಬಂದೋ ಬಸ್ತ್ ಏರ್ಪಡಿಸಿದ್ದಾರೆ. ಟ್ರಾಫಿಕ್ ಪೊಲೀಸರು ವಾಹನ ಸಂಚಾರ ನಿರ್ಬಂಧ, ಬದಲಿ ಮಾರ್ಗ, ವಾಹನ ನಿಲುಗಡೆ ನಿಷೇಧ ಎಲ್ಲೆಲ್ಲಿ ಎಂಬುದರ ಬಗ್ಗೆ ಮಾಹಿತಿ ಪ್ರಕಟಿಸಿದ್ದಾರೆ. ಜೊತೆಗೆ ಬಿಎಂಟಿಸಿ ಬಸ್ ಗಳನ್ನೇ ಬಳಸಿ ಎಂದು ಕೋರಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆ.22, 25, 27, 30 ಹಾಗೂ ಅಕ್ಟೋಬರ್ 4ರಂದು ಚಾಂಪಿಯನ್ಸ್ ಲೀಗ್ ಟಿ-20 ಕ್ರಿಕೆಟ್ ಪಂದ್ಯ ನಡೆಯಲಿರುವುದರಿಂದ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಕ್ರೀಡಾಂಗಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ ಕ್ರಿಕೆಟ್ ಪ್ರೇಮಿಗಳು ಬಿಎಂಟಿಸಿ ಬಸ್ ಬಳಸಲು ಸಂಚಾರ ಪೊಲೀಸರು ಕೋರಿದ್ದಾರೆ. ಪಂದ್ಯ ನಡೆಯುವ ದಿನಗಳಂದು ಬಿಎಂಟಿಸಿ ಬಿಗ್ 10 ಬಸ್ ವ್ಯವಸ್ಥೆ ಕಲ್ಪಿಸಲಿದೆ. [ಸಿಎಲ್ಟಿ20ವೇಳಾಪಟ್ಟಿ]

ಭದ್ರತಾ ದೃಷ್ಟಿಯಿಂದ ಕ್ರೀಡಾಂಗಣದ ಒಳಗೆ ಸಿಗರೇಟ್, ಕ್ಯಾಮೆರಾ, ಬೈನಾಕ್ಯುಲರ್, ಮ್ಯಾಚ್ ಬಾಕ್ಸ್, ಲೈಟರ್, ಹೊರಗಿನ ತಿಂಡಿ-ತಿನಿಸು, ಊಟದ ಡಬ್ಬಿ, ಲ್ಯಾಪ್ ಟಾಪ್, ಟಾಬ್ಲೆಟ್, ಹರಿತವಾದ ಆಯುಧಗಳು, ನೀರಿನ ಬಾಟಲ್ ಮತ್ತು ಕ್ಯಾನ್ ಗಳು, ಶಸ್ತ್ರಾಸ್ತ್ರಗಳು, ಹೆಲ್ಮೆಟ್, ಹ್ಯಾಂಡ್‍ಬ್ಯಾಗ್, ಬಾವುಟ/ಕಡ್ಡಿಗಳು, ಮದ್ಯದ ಬಾಟಲ್‍ಗಳು, ಮಾದಕ ವಸ್ತುಗಳು, ಪಟಾಕಿ, ಬಣ್ಣದ ಪುಡಿ, ಔಷಧಿಯ ಬಾಟಲ್ ಗಳು, ಸುಗಂಧ ದ್ರವ್ಯ ಬಾಟಲ್ ಗಳು, ಸೌಂದರ್ಯ ವರ್ಧಕಗಳು, ಛತ್ರಿಗಳು,ಟಾರ್ಚ್ ಗಳು ಹಾಗೂ ಬೊಂಬೆಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.

ಕ್ರೀಡಾಂಗಣ ಸುತ್ತಾ ಬಿಗಿ ಭದ್ರತಾ ಪಹರೆ

ಕ್ರೀಡಾಂಗಣ ಸುತ್ತಾ ಬಿಗಿ ಭದ್ರತಾ ಪಹರೆ

ಕ್ರೀಡಾಂಗಣದ ಭದ್ರತೆಗಾಗಿ 3 ಡಿಸಿಪಿಗಳು, 14 ಎಸಿಪಿಗಳು, 44 ಇನ್ಸ್ ಪೆಕ್ಟರ್ ಗಳು, 83 ಸಬ್ ಇನ್ಸ್ ಪೆಕ್ಟರ್ ಗಳು, 70 ಸಹಾಯಕ ಸಬ್ ಇನ್ಸ್ ಪೆಕ್ಟರ್ ಗಳು, 140 ಹೆಡ್ ಕಾನ್ಸ್ ಟೇಬರ್ ಗಳು, 281 ಪೊಲೀಸ್ ಕಾನ್ಸ್ ಟೇಬಲ್ ಗಳು ಹಾಗೂ ಸಾದಾ ಉಡುಪಿನ 46 ಸಿಬ್ಬಂದಿಗಳು ಸೇರಿದಂತೆ 712 ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ಕಣ್ಗಾವಲಿಗಾಗಿ 86 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ 6 ಕೆಎಸ್‍ಆರ್ ಪಿ ತುಕಡಿ ಹಾಗೂ 2 ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಸಿಎಲ್ಟಿ20: ವಾಹನ ನಿಲುಗಡೆ, ನಿಷೇಧ ಎಲ್ಲೆಲ್ಲಿ?

ಸಿಎಲ್ಟಿ20: ವಾಹನ ನಿಲುಗಡೆ, ನಿಷೇಧ ಎಲ್ಲೆಲ್ಲಿ?

ಸೆ.22ರಂದು ಸಂಜೆ 4ರಿಂದ 11ರವರೆಗೆ ವಾಹನ ನಿಲುಗಡೆ ನಿಷೇಧ

1. ಕ್ವೀನ್ಸ್ ರಸ್ತೆಯಲ್ಲಿ ಸಿ.ಟಿ.ಓ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆ ರಸ್ತೆಯ ಎರಡೂ ಕಡೆ.
2. ಎಂ.ಜಿ ರಸ್ತೆಯಲ್ಲಿ ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದ ವರೆಗೆ ರಸ್ತೆಯ ಎರಡೂ ಕಡೆ.
3. ಲಿಂಕ್ ರಸ್ತೆಯಲ್ಲಿ ಎಂ.ಜಿ ರಸ್ತೆಯಿಂದ ಕಬ್ಬನ್ ರಸ್ತೆಯ ವರೆಗೆ.
4. ರಾಜಭವನ ರಸ್ತೆ, ಟಿ.ಚೌಡಯ್ಯ ರಸ್ತೆ ಮತ್ತು ರೇಸ್ ಕೋರ್ಸ್ ರಸ್ತೆಗಳಲ್ಲಿ.
5. ಕ್ರಿಕೆಟ್ ಮೈದಾನದ ಕಾಂಪೈಂಡಿಗೆ ಹೊಂದಿಕೊಂಡಂತೆ ರಸ್ತೆಯ ಎರಡೂ ಕಡೆ.
6. ಸೆಂಟ್ರಲ್ ಸ್ಟ್ರೀಟ್ ರಸ್ತೆಯಲ್ಲಿ ರಸ್ತೆಯ ಎರಡೂ ಕಡೆ.
7. ಕಬ್ಬನ್ ರಸ್ತೆಯಲ್ಲಿ- ಬಿ.ಆರ್. ವಿ ವೃತ್ತದಿಂದ ಡಿಕೆನ್ಸ್ ನ್ ರಸ್ತೆ ಜಂಕ್ಷನ್ ವರೆಗೆ ರಸ್ತೆಯ ಎರಡೂ ಕಡೆ. ಕಬ್ಬನ್ ರಸ್ತೆಯಲ್ಲಿ ಕಾಮರಾಜ ರಸ್ತೆ ಜಂಕ್ಷನ್ ನಿಂದ ಡಿಕೆನ್ಸ್‌ನ್ ರಸ್ತೆ ಜಂಕ್ಷನ್ ವರೆಗೆ ಬಿ.ಎಂ.ಟಿಸಿ. ಬಸ್ ಗಳನ್ನು ಹೊರತುಪಡಿಸಿ ಇತರೆ ಎಲ್ಲ ತರಹದ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
8. ಮದ್ರಾಸ್ ಬ್ಯಾಂಕ್ ರಸ್ತೆಯಲ್ಲಿ ಎಸ್.‌ಬಿ.ಐ ವೃತ್ತದಿಂದ ಆಶೀರ್ವಾದಂ ವೃತ್ತದ ವರೆಗೆ.
9. ಮದ್ರಾಸ್ ಬ್ಯಾಂಕ್ ರಸ್ತೆಯಲ್ಲಿ ಎಂ.ಜಿ ರಸ್ತೆಯಿಂದ ಮದ್ರಾಸ್ ಬ್ಯಾಂಕ್ ರಸ್ತೆ ವರೆಗೆ ಹಾಗೂ ರೆಸಿಡೆನ್ಸಿ ರಸ್ತೆ ವರೆಗೆ.
10. ಮ್ಯೂಸಿಯಂ ರಸ್ತೆಯಲ್ಲಿ ಎಂ.ಜಿ ರಸ್ತೆಯಿಂದ ಮದ್ರಾಸ್ ಬ್ಯಾಂಕ್ ರಸ್ತೆ ವರೆಗೆ ಹಾಗೂ ರೆಸಿಡೆನ್ಸಿ ರಸ್ತೆವರೆಗೆ.
11. ಕಸ್ತೂರಬಾ ರಸ್ತೆಯಲ್ಲಿ ಕ್ವೀನ್ಸ್ ವೃತ್ತದಿಂದ ಹಡ್ಸನ್ ವೃತ್ತದ ವರೆಗೆ ಹಾಗೂ ಗ್ರ್ಯಾಂಡ್ ರಸ್ತೆಯಲ್ಲಿ ಸಿದ್ದಲಿಂಗಯ್ಯ ವೃತ್ತದಿಂದ ಆರ್.ಆರ್.ಎಂ.ಆರ್. ವೃತ್ತದ ವರೆಗೆ.

ಪಾರ್ಕಿಂಗ್ ನಿಷೇಧಿಸಲಾಗಿದೆ

ಪಾರ್ಕಿಂಗ್ ನಿಷೇಧಿಸಲಾಗಿದೆ

ಕಬ್ಬನ್ ಪಾರ್ಕ್ ಒಳಭಾಗದ ಕಿಂಗ್ ರಸ್ತೆ, ಪ್ರೆಸ್ ಕ್ಲಬ್ ಮುಂಭಾಗ, ಬಾಲಭವನ ಪೌಂಟೇನ್ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್ ಕಡ್ಡಾಯವಾಗಿ ನಿಷೇಧಿಸಲಾಗಿದೆ.
* ಕ್ವೀನ್ಸ್‌ವೃತ್ತದಿಂದ ಲ್ಯಾವೆಲ್ಲಿ ರಸ್ತೆಯಲ್ಲಿ ಗ್ರಾಂಟ್ ಜಂಕ್ಷನ್ ವರೆಗೆ ರಸ್ತೆಗಳಲ್ಲಿ ವಾಹನಗಳ ಪಾರ್ಕಿಂಗ್ ಕಡ್ಡಾಯವಾಗಿ ನಿಷೇಧಿಸಲಾಗಿದೆ.
* ಸಿದ್ದಲಿಂಗಯ್ಯ ವೃತ್ತದಿಂದ ವಿಠಲ್ ಮಲ್ಯ ರಸ್ತೆಯಲ್ಲಿ ಬಿಷಪ್ ಕಾಟನ್ ಬಾಲಕಿಯ ಶಾಲೆಯವರೆಗೆ ರಸ್ತೆಗಳಲ್ಲಿ ಪಾರ್ಕಿಂಗ್ ಕಡ್ಡಾಯವಾಗಿ ನಿಷೇಧಿಸಲಾಗಿದೆ.

ವಾಹನಗಳ ನಿಲುಗಡೆಗೆ ವ್ಯವಸ್ಥೆ ಎಲ್ಲಿ?

ವಾಹನಗಳ ನಿಲುಗಡೆಗೆ ವ್ಯವಸ್ಥೆ ಎಲ್ಲಿ?

ಈ ಕೆಳಕಂಡ ರಸ್ತೆಗಳಲ್ಲಿ ರಸ್ತೆಗಳಲ್ಲಿ ಬೆಳಗ್ಗೆ 10-00 ಗಂಟೆಯಿಂದ ರಾತ್ರಿ 11-00 ಗಂಟೆಯ ವರೆಗೆ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿರುತ್ತದೆ.
1. ಸದಸ್ಯರು ಹಾಗೂ ಪಂದ್ಯ ವೀಕ್ಷಣೆ ಮಾಡಲು ಬರುವವರು ತಮ್ಮ ವಾಹನಗಳನ್ನು ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮತ್ತು ಕಂಠೀರವ ಕ್ರೀಡಾಂಗಣದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
2. ಶಿವಾಜಿನಗರ ಬಸ್ ನಿಲ್ದಾಣದ 1ನೇ ಮಹಡಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡಬಹುದಾಗಿದೆ.
3. ಬಿ.ಆರ್.ವಿ. ಮೈದಾನದಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದು, ವಾಹನ ನಿಲುಗಡೆಗೆ ಸ್ಥಳಾವಕಾಶ ಕಡಿಮೆ ಇರುವುದರಿಂದ ಹಾಗೂ ಎಂ.ಜಿ ರಸ್ತೆ ಸಿಟಿಒ ವೃತ್ತದ ಬಳಿ ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ ಸಂಚಾರ ದಟ್ಟಣೆ ತಪ್ಪಿಸಲು ಕ್ರಿಕೆಟ್ ವೀಕ್ಷಣೆಗೆ ಬರುವ ಪ್ರೇಕ್ಷಕರು ಸಾರ್ವಜನಿಕ ಸಾರಿಗೆ (ಬಿಎಂಟಿಸಿ) ವಾಹನಗಳನ್ನು ಬಳಸಲು ಕೋರಲಾಗಿದೆ.

ಬಿಎಂಟಿಸಿ ಬಸ್ ವ್ಯವಸ್ಥೆ

ಬಿಎಂಟಿಸಿ ಬಸ್ ವ್ಯವಸ್ಥೆ

ಪಂದ್ಯ ಮುಗಿದ ನಂತರ ಬಿಎಂಟಿಸಿ ವತಿಯಿಂದ ನಗರದ ಎಲ್ಲಾ ಭಾಗಗಳಿಗೂ ಬಿಗ್-10 ಬಸ್ ವ್ಯವಸ್ಥೆ ಮಾಡಲಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂ ಒಳ ಮತ್ತು ಹೊರ ಹೋಗಲು ಪ್ರೇಕ್ಷಕರುಗಳಿಗೆ (ಪಾದಚಾರಿಗಳಿಗೆ) ಅನುವು ಮಾಡಿರುವ ಬಗ್ಗೆ:
1. ಗೇಟ್ ನಂ-1ರಿಂದ ಗೇಟ್ ನಂ-8 ಕ್ವೀನ್ಸ್ ರಸ್ತೆಯಲ್ಲಿ ಪಾದಚಾರಿಗಳಿಗೆ/ವೀಕ್ಷಕರುಗಳಿಗೆ ಹೋಗಲು ಅವಕಾಶ ಕಲ್ಪಿಸಿದೆ.
2. ಗೇಟ್ ನಂ.17 ಮತ್ತು ಗೇಟ್ ನಂ.20ರ ವರೆಗೆ ಲಿಂಕ್ ರಸ್ತೆಯಲ್ಲಿದ್ದು ಅನಿಲ್ ಕುಂಬ್ಳೆ ವೃತ್ತದಿಂದ ಬರುವ ಪ್ರೇಕ್ಷಕರುಗಳು/ಪಾದಚಾರಿಗಳೂ ಹೋಗಬಹುದಾಗಿರುತ್ತದೆ.

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X