ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕಾರವಾರದಲ್ಲಿ ಲಿಂಬೋ ಸ್ಕೇಟಿಂಗ್ ನೋಡಿದ್ರಾ?

ಉತ್ತರ ಕನ್ನಡ, ಜೂ. 30 : ಕಾರವಾರದ ಕೈಗಾ ಟೌನ್ ಶಿಪ್ ನಲ್ಲಿ ಭಾನುವಾರ ನಡೆದ ಲಿಂಬೋ ಸ್ಕೇಟಿಂಗ್ ನಲ್ಲಿ ಸತತ ಆರು ಗಂಟೆಗಳ ಕಾಲ 25 ಮಕ್ಕಳು ಸ್ಕೇಟಿಂಗ್ ಮಾಡುವ ಮೂಲಕ ವಿಶ್ವದಾಖಲೆ ಮಾಡಿದ್ದಾರೆ. ದಿಲೀಪ್ ಹಣಬರ್ ಎಂಬ ತರಬೇತುದಾರರು ಲಿಂಬೋ ಸ್ಕೇಟರ್‌ ಗಳಿಗೆ ತರಬೇತಿ ನೀಡಿ ವಿಶ್ವದಾಖಲೆಗೆ ಸಜ್ಜುಗೊಳಿಸಿದ್ದರು.

ಜಾಗತಿಕ ತಾಪಮಾನ ವಿರುದ್ಧ ಹೋರಾಡುವ ಸಂದೇಶ ಹೊತ್ತು ಕೈಗಾ ರೋಲರ್ ಸ್ಕೇಟಿಂಗ್ ಕ್ಲಬ್ ನ 25 ಮಕ್ಕಳು ಕೈಗಾದ ಟೌನ್ ಶಿಪ್‌ನ ರಿಕ್ರಿಯೇಶನ್ ಕ್ಲಬ್‌ ಆವರಣದಲ್ಲಿ ಭಾನುವಾರ ಬೆಳಗ್ಗೆ 9ರಿಂದ ಸತತ 6 ಗಂಟೆಗಳ ಕಾಲ ಲಿಂಬೋ ಸ್ಕೇಟಿಂಗ್ ಸಾಹಸ ಪ್ರದರ್ಶಿಸಿದರು.

ಕೇವಲ 285 ಮಿ.ಮೀ ಎತ್ತರದ ಆಯತಾಕಾರದ ಬಾಕ್ಸ್ ನಲ್ಲಿ ಮಕ್ಕಳು ಸ್ಕೇಟಿಂಗ್ ಮಾಡುವ ಮೂಲಕ ಜನರ ಪ್ರಶಂಸೆಗೆ ಪಾತ್ರದಾರದರು. ಈ ಸ್ಕೇಂಟಿಗ್ ನಲ್ಲಿ ಅಂತರರಾಷ್ಟ್ರೀಯ ಸ್ಕೇಟಿಂಗ್ ಪಟು ದೇವಿಶ್ರೀ ಪ್ರಸಾದ್ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

25 ಮಕ್ಕಳು ಸತತ ಆರು ಗಂಟೆಗಳ ಕಾಲ 166 ಕಿಲೋ ಮೀಟರ್ ಸ್ಕೇಟಿಂಗ್ ನಡೆಸಿದರು. ಎಲ್ಲ ಮಕ್ಕಳು ಸೇರಿ 266 ಸುತ್ತು ಸುತ್ತಿದ್ದ ರೋಚಕ ಕ್ಷಣಗಳಿಗೆ Official Word records (OWR) ಸಂಸ್ಥೆಯ ಪ್ರತಿನಿಧಿಗಳು ಸಾಕ್ಷಿಯಾಗಿದ್ದರು. ಸಂಸ್ಥೆಯವರು ಸ್ಕೇಟಿಂಗ್ ಅನ್ನು ಚಿತ್ರೀಕರಿಸಿಕೊಂಡಿದ್ದು, ಇದು ವಿಶ್ವದಾಖಲೆ ಪಟ್ಟಿ ಸೇರಲಿದೆ.

Limbo Skating

Official Word records (OWR) ಸಂಸ್ಥೆಯ ಪ್ರತಿನಿಧಿಗಳಾದ ಪ್ರಮೋದ್ ರುಯಿಯಾ, ಕಪಿಲ್ ಗೆಹ್ಲಾಟ್ ಮತ್ತು ಸೂರ್ಯಕಾಂತ್ ಹಿಂಡಾಲ್ಗೇಕರ್ ಅವರ ನೇತೃತ್ವದಲ್ಲಿ ಸ್ಕೇಟಿಂಗ್ ಸಾಹಸಗಳನ್ನು ದಾಖಲು ಮಾಡಿಕೊಳ್ಳಲಾಯಿತು.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X