ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೇಖನಗಳಿಗೆ ಓದುಗರು ಬರೆದ ಅತ್ಯುತ್ತಮ ಪತ್ರಗಳು

By Prasad
|
Google Oneindia Kannada News

ಉತ್ತಮ ಬರಹಗಳನ್ನು ಮಾತ್ರವಲ್ಲ ಉತ್ತಮ ಕೆಲಸಗಳನ್ನು ಮಾಡುತ್ತಿರುವ ರಾಜಕಾರಣಿಗಳನ್ನು ಹೊಗಳುತ್ತ, ಸಲ್ಲದ ರಾಜಕಾರಣಗಳನ್ನು ಮಾಡುತ್ತ ತಮ್ಮ ಬೇಳೆಕಾಳು ಬೇಯಿಸಿಕೊಳ್ಳುತ್ತಿರುವ ಜನರನ್ನು ತೆಗಳುತ್ತ ಓದುಗರು ಬರೆಯುವ ಪ್ರತಿಕ್ರಿಯೆಗಳನ್ನು, ಪತ್ರಗಳನ್ನು, ಕಾಮೆಂಟುಗಳನ್ನು ಓದುವುದು ನಿಜಕ್ಕೂ ಅತ್ಯುದ್ಭುತ ಅನುಭವ.

ತಮ್ಮ ಕಾಮೆಂಟುಗಳು ಪ್ರಕಟವಾಗಿದ್ದಕ್ಕೆ ಏನೋ ಖುಷಿ, ತಮ್ಮ ಪ್ರತಿಕ್ರಿಯೆ ಇನ್ನೂ ಬರದಿದ್ದುದಕ್ಕೆ ಏಕೋ ಬೇಸರ ವ್ಯಕ್ತಪಡಿಸುತ್ತಲೇ ಓದುಗರು ತಮ್ಮ ಕೆಲಸವನ್ನು ಅತ್ಯಂತ ಅಚ್ಚುಕಟ್ಟಾಗಿ ಮತ್ತು ಪ್ರೀತಿಯಿಂದ ಮಾಡುತ್ತಿರುತ್ತಾರೆ. ಅವರಿಗೊಂದು ನಮೋನಮಃ.

ಸಕಾರಾತ್ಮಕವೇ ಆಗಿರಲಿ, ನಕಾರಾತ್ಮಕವೇ ಆಗಿರಲಿ, ಆದರೆ ವಸ್ತುನಿಷ್ಠ ಪ್ರತಿಕ್ರಿಯೆಗಳಿಗೆ ಯಾವತ್ತೂ ಬೆಲೆ ಇದ್ದೇ ಇರುತ್ತದೆ. ಅವು ದಾರಿದೀಪದಂತೆ ನಮ್ಮನ್ನು ಸರಿದಾರಿಗೆ ಕೊಂಡೊಯ್ಯುತ್ತಲೇ ಇರುತ್ತವೆ. ಕೆಲವರು ಆಂಗ್ಲದಲ್ಲಿ ಪ್ರತಿಕ್ರಿಯೆ ಬರೆಯಲು ಇಚ್ಛಿಸುತ್ತಾರೆ. ಕೆಲವರಿಗೆ ಕನ್ನಡದಲ್ಲಿ ಬರೆಯುವುದು ಸಲೀಸು. ಕನ್ನಡದ ಹಿತದೃಷ್ಟಿಯಿಂದ ಎಲ್ಲ ಕಾಮೆಂಟುಗಳು ಕನ್ನಡದಲ್ಲೇ ಇರಲಿ ಎಂಬುದು ನಮ್ಮ ಆಶಯ ಮತ್ತು ಆಸೆ ಕೂಡ.

ಮಾಂಸ ತಿನ್ನೋದು ಅವರವರ ಕರ್ಮ!

ಮಾಂಸ ತಿನ್ನೋದು ಅವರವರ ಕರ್ಮ!

ಅಯ್ಯ ರಾಮದುರ್ಗ ದಿವಾಲರ್, ನೀವು ಇಷ್ಟುದ್ದ ಲೇಖನ ಬರೆಯುವ ಬದಲು... ನಿಮ್ಮ ಸ್ವಂತ ಖರ್ಚಿನಲ್ಲಿ ಮಾಂಸಾಹಾರಿ ಸಾಹಿತಿಗಳಿಗೆ ಪಂದಿ ಕರಿ ಊಟ ಹಾಕಬಹುದಲ್ಲ? ಸಾಹಿತ್ಯ ಸೇವೆ ಹೀಗೂ ಆಗುತ್ತೆ. ಇನ್ನೊಂದು ವಿಚಾರ, ಕುವೆಂಪು ಮಗ ಮಾಂಸ ತಿನ್ನುತ್ತಿದ್ದರು ಅಂದ್ರೆ, ಅದೇನು ಒಳ್ಳೆ ಸಾಹಿತಿಗಳ ಮನದಂಡ ಅಲ್ಲ. ಮಾಂಸಾಹಾರ ಸಮರ್ಥನೆಗೆ ಇದನ್ನ ನೀವು ಬಳಸಿರೋದು ನಿಮ್ಮ ವ್ಯಕ್ತಿತ್ವ ತೋರಿಸುತ್ತೆ. ಮತ್ತೆ ಮಾಂಸ ತಿನ್ನೋದು ಅವರವರ ಕರ್ಮ. ಕೇವಲ ಊಟಕ್ಕಾಗಿ ಸಾವಿರಾರು ಕುರಿ ಕೋಳಿ ಹಂದಿಹಳನ್ನು ಕೊಂದು ತಿಂದು.. ಸಮ್ಮೇಳನದಲ್ಲಿ ಪ್ರಕೃತಿ ಪ್ರೇಮ, ಪ್ರಾಣಿದಯೆ ಬಗ್ಗೆ ಭಾಷಣ ಬಿಗಿಯುವ ನಿಮ್ಮಂಥ ಮಾತಿನ ಮಲ್ಲರಿಗೆ ಇದೆಲ್ಲ ಹೀಗೆ ತಿಳಿಯಬೇಕು?

ಎನ್ಎನ್ ಜಮದಗ್ನಿ [ಸಾಹಿತ್ಯ ಸಮ್ಮೇಳನ ವೆಜಿಟೇರಿಯನ್ ಏಕೆ?]

ಗುಡಿಯಲ್ಲಿ ಕಸ ಗುಡಿಸ್ತಿದ್ವಿ, ದೀಪ ಹಚ್ತಿದ್ವಿ

ಗುಡಿಯಲ್ಲಿ ಕಸ ಗುಡಿಸ್ತಿದ್ವಿ, ದೀಪ ಹಚ್ತಿದ್ವಿ

ಶನಿಕೃಪೆಗೆ : ಯಾವುದೇ ದೇವಸ್ಥಾನಕ್ಕೆ ಹೋದರೂ ಅಲ್ಲಿ ಕಸಕಡ್ಡಿಗಳು ಇದ್ದರೆ ಅದನ್ನು ಎತ್ತಿ ಕಸದ ಬುಟ್ಟಿಗೆ ಹಾಕಬೇಕು. Excellent tips! ನಾವು ಸಣ್ಣವರಿದ್ದಾಗ, ನಮ್ಮ ಊರಿನ ಆಂಜನೇಯನ ದೇವಸ್ಥಾನದ ನೆಲ ಗುಡಿಸ್ತಿದ್ವಿ, ಅರಳಿ ಮರದ ಬುಡದಲ್ಲಿ ಬಿದ್ದ ಒಣಗಿದ ಎಳೆಗಳು, ಕಡ್ಡಿ ಕಸ ಎಲ್ಲ ತೆಗೆದು ಹಾಕ್ತಾ ಇದ್ವಿ, ಕಾರ್ತೀಕ ಮಾಸದಲ್ಲಿ ನೂರಾರು ದೀಪಗಳಿಗೆ ಎಣ್ಣೆ ಬತ್ತಿ ಹಾಕಿ, ದೀಪ ಹಚ್ಚಿ, ದೇವಸ್ಥಾನದ ಗೋಡೆಗಳ ಮೇಲೆ, ಕಾಂಪೌಂಡ್ ಮೇಲೆ ಎಲ್ಲ ಇತ್ತು ಬರ್ತಾ ಇದ್ವಿ. ಹುಡುಗಿಯರು, ಹುಡುಗರು ಎಲ್ಲರೂ ಸೇರಿ ಈ ಕೆಲ್ಸಗಳ್ನ ಮಾಡ್ತಾ ಇದ್ವಿ. ಅದೇ ದೇವಸ್ಥಾನದ ಕಾಂಪೌಂಡ್ನಲ್ಲೆ ನಾನಾ ರೀತಿ ಆಟ ಆಡ್ತಾ ಇದ್ವಿ. ಆಗೆಲ್ಲ ದೇವಸ್ಥಾನ ಅಂದರೆ ಮಕ್ಕಳಿಗೆ ಸುರಕ್ಷಿತವಾದ, ಒಳ್ಳೆ ಶಿಕ್ಷಣ ಕೊಡುವ ಸ್ಥಳವಾಗಿತ್ತು.

ಬಿ ಶಾಮಲಾ [ಮಕ್ಕಳಿಗೆ ಸಾಡೇಸಾತಿ]

ರಸ್ತೆ ಹಾಕಿಸಿ ರಮ್ಯಾ ಒಳ್ಳೆ ಕೆಲಸ ಮಾಡಿದ್ದಾರೆ

ರಸ್ತೆ ಹಾಕಿಸಿ ರಮ್ಯಾ ಒಳ್ಳೆ ಕೆಲಸ ಮಾಡಿದ್ದಾರೆ

ರಸ್ತೆ ಹಾಕಿಸಿ ಒಳ್ಳೆ ಕೆಲಸ ಮಾಡಿದ್ದಾರೆ. ಅದು ಅವರದೆ ದುಡ್ಡಿನಲ್ಲಿ ಮಾಡಿಸಿರುವುದು ಮಂಡ್ಯದ ರಾಜಕಾರಣಿಗಳಿಗೆ ಒಂದು ದೊಡ್ಡ ಪಾಠ ಕಲಿಸಿದ್ದಾರೆ. ರಮ್ಯ ಇದೇರೀತಿ ಗ್ರಾಮಗಳನ್ನು ಉದ್ಧಾರಮಾಡಲಿ ಅಂತ ಹಾರೈಸುತ್ತೇನೆ.

ಪಿಎಂ ಅಂಕಲೆ [ಮಂಡ್ಯ ಹಳ್ಳಿಯಲ್ಲಿ ರಮ್ಯಾ ಏನ್ಮಾಡ್ತಿದ್ದಾರೆ?]

ನಾನ್ ವೆಜ್ ಕೊಟ್ರೆ, ಡ್ರಿಂಕ್ಸ್ ಯಾಕಿಲ್ಲ?

ನಾನ್ ವೆಜ್ ಕೊಟ್ರೆ, ಡ್ರಿಂಕ್ಸ್ ಯಾಕಿಲ್ಲ?

ಸಾಹಿತ್ಯದ ಬಗ್ಗೆ ಆಸಕ್ತಿ ಇರೋಲ್ಲ, ಇಂಥ ತಲೆ ಹರಟೆ ಮಾಡ್ಕೊಂಡು ಟೈಮ್ ಪಾಸು ಮಾಡ್ತಾರೆ. ನಾನ್ ವೆಜ್ ಕೊಟ್ರೆ, ಡ್ರಿಂಕ್ಸ್ ಯಾಕಿಲ್ಲ, ಡ್ರಿಂಕ್ಸ್ ತಗೊಳೋರಿಗೆ ಅಭಿರುಚಿ ಇಲ್ವಾ ಅಂತ ಕೇಳ್ತಾರೆ. ಆಮೇಲೆ, ಯಥಾ ಪ್ರಕಾರ, ದನದ ಮಾಂಸ ಯಾಕಿಲ್ಲ, ಸೆಕ್ಯೂಲರ್ರು, ಕಮ್ಯೂನಲ್ಲು ಅಂತ ಹೊಸ ವಾದ ಶುರುವಾಗುತ್ತೆ. ಇವರೆಲ್ಲ ಯಾಕಪ್ಪ ಕರ್ನಾಟಕದಲ್ಲಿ ಹುಟ್ಟಿದರು ಅನ್ಸುತ್ತೆ. ಇಡಿ ಮಡಿಕೇರಿ ತುಂಬಾ ನಾನ್ ವೆಜ್ ಹೋಟ್ಲು ಇದೆ. ಅಲ್ಲಿ ಹೋಗಿ ತಿನ್ನೋಕಾಗೊಲ್ವ?

ಸಂಗಮೇಶ್

ಕುಲ ಕುಲ ಕುಲವೆಂದು ಹೊಡೆದಾಡದಿರಿ

ಕುಲ ಕುಲ ಕುಲವೆಂದು ಹೊಡೆದಾಡದಿರಿ

ಬೆಳೆಗೆರೆಯವರೇ, ಭಾರತದ ಸಂಸ್ಕೃತಿ ಜಾತಿಯಿಂದ ಆಚೆ ಯೋಚನೆ ಮಾಡುವ ತನಕ ಭಾರತೀಯರು ಉದ್ಧಾರ ಆಗಲ್ಲ. ಮುಂದೆ ಹೋಗಕ್ಕೆ ಆಗದೆ ನಾವು ನಮ್ಮೊಳಗೆ ಕಿತ್ತಾಡುತ್ತಾ ಹಿಂದೆ ಹೋಗುತ್ತಾ ಇರುತ್ತಿವಿ ಅಷ್ಟೇ ಇನ್ನೇನು ಇಲ್ಲ. ಕುಲ ಕುಲ ಕುಲವೆಂದು ಹೊಡೆದಾಡದಿರಿ.

ಕೊರಟಗೆರೆ ಕನಕದಾಸ (ಯುಎಸ್ಎ) [ಬ್ರಾಹ್ಮಣರ ಬೈಯುವವರಿಗೆ ಕೆಲ ಪ್ರಶ್ನೆ]

ಡಿಕೆಶಿ ಕಾನೂನು ಪ್ರಕಾರ ಕೆಲಸ ಮಾಡ್ತಾರೆ

ಡಿಕೆಶಿ ಕಾನೂನು ಪ್ರಕಾರ ಕೆಲಸ ಮಾಡ್ತಾರೆ

ಎಸ್.ಆರ್.ಹಿರೇಮಠ, ತಮ್ಮದು ಯಾಕೋ ಜಾಸ್ತಿ ಆಯಿತು. ಡಿ.ಕೆ.ಶಿ. ಯಾವಾಗಲು ಕಾನೂನು ಪ್ರಕಾರವಾಗೆ ಕೆಲಸ ಮಾಡುತ್ತಾರೆ. ಯಾವುದೇ ಉತ್ತೇಜನದಿಂದಲ್ಲ. ತನಿಖೆ ನಡೆಸಿ ಸುಮ್ಮನೆ ಅಧಿಕಾರದಿಂದ ಏಕಾ ಏಕಿ ಇಳಿಯಿರಿ ಅಂತ ಹೇಳಬೇಡಿ. ಎಲ್ಲ ಮಂತ್ರಿಗಳನ್ನು ಜನರು ಆಯ್ಕೆ ಮಾಡಿದ್ದರೆ. ಜನರ ಮತಗಳಿಗೂ ಸ್ವಲ್ಪ ಬೆಲೆ ಇರಲಿ.

ಇಂಡಿಯನ್ [ಡಿಕೆಶಿ ಮೇಲೆ ಅದಿರು ಖರೀದಿ ಆರೋಪ]

English summary
Letters to the editor by readers. Thanks to all the readers for responding to articles on Oneindia-Kannada. Again we request you all to write comments in Kannada only, for the sake and development of Kannada on internet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X