ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪಾದಕರಿಗೆ ಪತ್ರ: ಪ್ರಗತಿಪರರಿಗೆ ಬಹಿರಂಗ ಸವಾಲ್

By ಪತ್ರೇಶ್ ಹಿರೇಮಠ
|
Google Oneindia Kannada News

An open letter to all forward front leaders
ಅಡ್ಡಪಲ್ಲಕ್ಕಿ ಮತ್ತು ಗಂಡನ ಪಾದಪೂಜೆ ಮೌಢ್ಯವೆಂದು ಭಾವಿಸುವವರು ತಾಳಿ ಕಟ್ಟುವುದನ್ನುಬಿಟ್ಟುಬಿಡಿ.ಇಲ್ಲ ಕಟ್ಟಿದ್ದರೆ ಕಿತ್ತೆಸೆದುಬಿಡಿ. ಸುಮ್ಮನೆ ಪ್ರಗತಿಪರರೆಂದು ಬಿಂಬಿಸುವ ಭರದಲ್ಲಿ ಕೆಲವು ಆಚರಣೆ ಹಾಗೂ ಪದ್ಧತಿಗಳನ್ನು ವಿರೋಧಿಸಿ ಆ ಮೂಲಕ ತಾವು ಪ್ರಗತಿಪರರು, ಚಿಂತಕರು, ಬುದ್ಧಿಜೀವಿಗಳು ಎನ್ನುವುದನ್ನು ಸಾಬೀತು ಮಾಡಿಕೊಳ್ಳುತ್ತಿರುವ ಅಪಾಯಕಾರಿಬೆಳವಣಿಗೆ ಕರ್ನಾಟಕದಲ್ಲಿ ಕೆಲವರು ಮಾಡುತ್ತಿದ್ದಾರೆ.

ತಾವಾಗಿ ಇಷ್ಟಪಟ್ಟು ಆಚರಿಸುವ ಪದ್ಧತಿಯನ್ನು ವಿರೋಧ ಮಾಡುವುದಕ್ಕೆ ಇವರಿಗೆ ಯಾರು ಅಧಿಕಾರ ನೀಡಿದರು ಎನ್ನುವುದನ್ನು ಪ್ರಶ್ನೆ ಹಾಕಿಕೊಳ್ಳಬೇಕಾಗುತ್ತದೆ. ಆದರೆ ಯಾರದೇ ಒತ್ತಡ, ಬಲವಂತವಿಲ್ಲದೆಆಚರಿಸುತ್ತಾರೆಂದರೆ ಈ ದೇಶದಲ್ಲಿ ಆ ಹಕ್ಕು ಪ್ರತಿಯೊಬ್ಬರಿಗೂ ಇದೆ.

ಹಾಗೆ ಆಚರಣೆ ಮಾಡದೆ ಇರುವ ಹಕ್ಕೂ ಇದೆ. ಬೇಡವಾದವರು ಅದರಿಂದ ದೂರವಿದ್ದರಾಯಿತು. ಅವರನ್ನು ಯಾರೂಬಲವಂತ ಮಾಡುವುದಿಲ್ಲ. ಆದರೆ ವಿರೋಧ ಮಾಡುವುದು, ನಿಲ್ಲಿಸುವುದು ಇದಕ್ಕೆ ಇವರಿಗೆಯಾರು ಅಧಿಕಾರ ಕೊಟ್ಟಿದ್ದಾರೆ?

ಒಟ್ಟಾರೆ ಈಗ ನಡೆಯುತ್ತಿರುವ ಆಚರಣೆಗಳೆಲ್ಲಾ ಸರಿ ಇಲ್ಲಾ ಎನ್ನುವುದಾದರೆ, ಎಲ್ಲರೂ ಮನುಷ್ಯರೇ ಎಲ್ಲರೂ ಸಮಾನರು ಎಂದು ಭಾವಿಸುವುದಾದರೆ ಮೊದಲು ಶಾಲೆಯಲ್ಲಿ ನಿಮ್ಮ ಮಕ್ಕಳನ್ನು ಸೇರಿಸುವಾಗ ಧರ್ಮ ಮತ್ತು ಜಾತಿ ಕಾಲಂಗಳಲ್ಲಿ ಭಾರತೀಯ ಎಂದು ಬರೆಸಿ ಪ್ರಗತಿಪರರೇ ...

ಮನೆಯಲ್ಲಿ ಹೆಂಡತಿ ಬಿಸಿ ನೀರು ಕಾಯಿಸಿಕೊಡುತ್ತಾಳೆ. ನೀವು ತಿಂದ ಎಂಜಲು ತಟ್ಟೆಯನ್ನು ತೊಳೆಯುತ್ತಾಳೆ. ನಿಮ್ಮ ಬಟ್ಟೆ ಒಗೆಯುತ್ತಾಳೆ ಅದು ಶೋಷಣೆಯಲ್ಲವೇ... ಮನೆಯ ಹೆಂಡತಿ ಮೇಲೆ ಶೋಷಣೆ ಮಾಡುವ ನೀವು ಇನ್ನೊಬ್ಬರು ಭಕ್ತಿಯಿಂದ ಹೆಗಲ ಮೇಲೆ ಪಲ್ಲಕ್ಕಿ ಹೊತ್ತರೆ ನಿಮ್ಮ ಹೆಗಲು ನೋವು ಬಂದ ತರಹ ವರ್ತಿಸುತ್ತೀರಲ್ಲಾ. ಮೊದಲು ನಿಮ್ಮ ಹೆಂಡತಿಯನ್ನು ಸಮಾನವಾಗಿ ಕಾಣಿ. ಮುಸುರೆ ತಿಕ್ಕಿ ... ನೀವು ಉಂಡ ತಟ್ಟೆ ನೀವು ತೊಳೆದು ಸಮಾಜಕ್ಕೆ ಭೊಧನೆ ಮಾಡಿ ಪ್ರಗತಿಪರರೇ

ತಾಳಿ ಕಟ್ಟುವುದು ಮೌಢ್ಯವಲ್ಲವೇ ಧರ್ಮ,ಆಚಾರ, ವಿಚಾರ, ಪರಂಪರೆ ಬಗ್ಗೆ ನಂಬಿಕೆ ಇಲ್ಲವೆಂದರೆ ತಾಳಿ ಯಾಕೆ ಕಟ್ಟುತ್ತೀರಿ... ಕಟ್ಟಿದ ಪ್ರಗತಿಪರರು ತಾಳಿ ಕಿತ್ತೆಸೆದುಬಿಡಿ.

ಬೇರೆ ಬೇರೆ ಧರ್ಮಗಳಲ್ಲಿ ನಡೆಯುವ ಮಹಿಳೆಯರ ಮೇಲಿನ ಶೋಷಣೆಗಿಂತ ಹಿಂದೂ ವೀರಶೈವ ಧರ್ಮಗಳ ಬಗ್ಗೆ ಮಾತನಾಡುತ್ತೀರಲ್ಲ... ಬೇರೆ ಧರ್ಮಗಳ ಅಮಾನವೀಯ ಪದ್ಧತಿಗಳ ಬಗ್ಗೆ ಮಾತನಾಡುವ ಗಂಡಸುತನ ತೋರಿಸಿ ಪ್ರಗತಿಪರರೇ

ಈ ದೇಶದಲ್ಲಿ ಧರ್ಮ ದೇವರು ಪತಿ ಪತ್ನಿ ತಂದೆ ತಾಯಿ ಎಂಬ ಬಿಗಿ ಬಂಧವಿಲ್ಲದಿದ್ದರೆ ಹುಟ್ಟಿದ ಮಕ್ಕಳು ವಿದೇಶಿ ವ್ಯವಸ್ಥೆಯಂತೆ ಬೀದಿ ಪಾಲಾಗಿ ಹೋಗುತ್ತಿದ್ದವು.

English summary
Here is an open letter to all forward front leaders who recently objected wife doing pooja to Husband during Hindu festival. Let forward front leaders omit caste column and fill the form as Indians
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X