ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಫೆ ಕಾಫಿಡೇಯಲ್ಲಿ ಕನ್ನಡ ಹಾಡು ಕೇಳ್ಸಲ್ಲ

By ಅರುಣ್ ಜಾವಗಲ್
|
Google Oneindia Kannada News

Cafe Coffee Day should Play Kannada Songs
ಕರ್ನಾಟಕದಲ್ಲಿ ಕನ್ನಡ ಹಾಡು ಕೇಳೋದು ತಪ್ಪೇ? ಕನ್ನಡಿಗರೊಬ್ಬರ ಒಡೆತನದಲ್ಲಿರುವ ಅತಿ ದೊಡ್ಡ ಕಾಫಿ ಮಳಿಗೆ ಜಾಲ ಹೊಂದಿರುವ ಕೆಫೆ ಕಾಫಿ ಡೇ ಕೇಂದ್ರಗಳಲ್ಲಿ ಕನ್ನಡಕ್ಕೆ ಜಾಗವಿಲ್ಲ. ಕನ್ನಡಿಗರನ್ನು ತನ್ನ ಫೇಸ್ ಬುಕ್ ಪುಟದಿಂದಲೂ CCD ನಿರ್ಬಂಧಿಸಿದೆ..

ಕೆಫೆ ಕಾಫೀ ಡೇ ನಲ್ಲಿ ಕನ್ನಡದ ಹಾಡುಗಳನ್ನು ಹಾಕದಿರುವುದುನ್ನು ನೋಡಿದ್ದೇವೆ. ಮೊನ್ನೆ ಇದೇ ಅನುಭವ ಅರಸೀಕೆರೆಗೆ ಪ್ರವಾಸ ಹೋಗಿದ್ದ ನನ್ನ ಗೆಳೆಯ ಪುಟ್ಟ ಹೊನ್ನೇಗೌಡರಿಗೂ ಆಗಿದೆ.

ಕನ್ನಡ ಹಾಡು ಹಾಕಿ ಎಂದಿದ್ದಕ್ಕೆ ನಮ್ಮ ಕಂಪನಿಯ ನಿಯಮದ ಪ್ರಕಾರ ಕನ್ನಡ ಹಾಡನ್ನು ಹಾಕೊಲ್ಲ ಎಂದು ಹೇಳಿದ್ದಾರೆ. ಅರಸೀಕೆರೆಯಿಂದ ಬೆಂಗಳೂರಿಗೆ ಬಂದ ಮೇಲೆ ಕಂಪನಿ ವೆಬ್ ಸೈಟ್ ನಲ್ಲಿ ಇವರ ಈ ಮೇಲ್ ಐಡಿಗೆ ಪತ್ರ ಬರೆದು ತಮಗೆ ಆದ ಅನುಭವವನ್ನು ಹಂಚಿಕೊಂಡಿದ್ದಾರೆ.

ಈ ಪತ್ರಕ್ಕೆ ಪ್ರತಿಕ್ರಿಯಿಸಿದ ಕಾಪೀ ಡೇ ಮತ್ತದೇ ಉತ್ತರ ನೀಡಿದೆ. ನಮ್ಮ ಕಂಪನಿ ನಿಯಮದ ಪ್ರಕಾರ ಕನ್ನಡ ಹಾಡು ಹಾಕುವುದಿಲ್ಲ.

ಕಾಫೀ ಡೇ ತರಹದ ಅನೇಕ ಹೊರ ದೇಶದ ಕಂಪನಿಗಳು ಕರ್ನಾಟಕದಲ್ಲಿ ಅಂಗಡಿಗಳನ್ನು ತೆರೆದಿದ್ದು, ಕನ್ನಡ ಹಾಡು ಹಾಕಿ ಎಂದು ನೀಡಿದ ಸಲಹೆಯನ್ನು ಸ್ವೀಕರಿಸಿ, ಸಲಹೆಯ ಬಗ್ಗೆ ಪರಿಶೀಲಿಸಲಾಗುವುದು ಎಂದು ಉತ್ತರಿಸುತ್ತಿದ್ದಾರೆ

ಆದರೆ ನಮ್ಮದೇ ನಾಡಿನ ಕಾಫೀ ಡೇ ನವರು ಕನ್ನಡ ಹಾಡು ಹಾಕಿ ಎನ್ನುವ ಸಲಹೆಯನ್ನು ಸಾರಾ ಸಗಟು ತೆಗೆದುಹಾಕುತ್ತಿರುವುದು ದುರಂತವೇ ಸರಿ.

ಇದೆಲ್ಲವುದರ ಜೊತೆಗೆ ಫೇಸ್ ಬುಕ್ಕಿನ ಕಾಫೀ ಡೇ ಯ ಅಧಿಕೃತ ಪೇಜಿನಲ್ಲಿ ಹಲವಾರು ಕನ್ನಡಿಗರು ಈ ಬಗ್ಗೆ ಪ್ರಸ್ತಾಪ ಮಾಡಿದಾಗ, ಕನ್ನಡ ಹಾಡು ಹಾಕಿ ಎಂದು ಕೇಳಿದವರನ್ನೆಲ್ಲಾ ತಮ್ಮ ಪೇಜಿನಿಂದ ಬ್ಯಾನ್ ಮಾಡಿದ್ದಾರೆ. ಇದೀಗ ಬ್ಯಾನ್ ಆದ ಕನ್ನಡಿಗರ ಮನಸ್ಸಿನಲ್ಲಿ ಕರ್ನಾಟಕದಲ್ಲಿ ಕನ್ನಡ ಹಾಡು ಕೇಳುವುದು ತಪ್ಪೇ ಎನ್ನುವಂತಾಗಿದೆ.

English summary
Public Demand : Cafe Coffee Day should Play Kannada Songs in their outlets demands citizen journalist Arun Javagal. He aaleged CCD is ill treating local Kannadigas and even Kannadigas blocked from CCD facebook page
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X