ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಡಿಕೆ ನೇತ್ರಾವತಿಗೆ ಓದುಗರ ಪ್ರತಿಕ್ರಿಯೆ ಮಹಾಪೂರ

By Mahesh
|
Google Oneindia Kannada News

Public condemn Kumaraswamy Statement
'ನಾನೇನಾದ್ರೂ ಸಿಎಂ ಆದ್ರೆ 48 ಗಂಟೆಗಳಲ್ಲಿ ನೇತ್ರಾವತಿ ಮನೆ ನಿಮ್ಮ ಮನೆ ಬಾಗಿಲಿಗೆ ಹರಿಸುತ್ತೇನೆ. ಕುಡಿಯುವ ನೀರಿನ ಸಮಸ್ಯೆ ಎಂಬುದು ರಾಜ್ಯದಲ್ಲಿ ಸಂಪೂರ್ಣವಾಗಿ ಮಾಯವಾಗಲಿದೆ' ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಗುರುವಾರ (ಡಿ.6) ಕೊಟ್ಟ ಲೇಟೆಸ್ಟ್ ಆಶ್ವಾಸನೆಗೆ ಸಾರ್ವಜನಿಕರು ಛೀ ಥೂ ಎಂದು ಪ್ರತಿಕ್ರಿಯಿಸಿದ್ದಾರೆ. ಹಲವರು ಇದು ದೊಡ್ಡ ಜೋಕು ಎಂದು ಹಾಸ್ಯ ಮಾಡಿದ್ದಾರೆ.

ಆಯಾ ಪ್ರದೇಶಕ್ಕೆ ತಕ್ಕಂತೆ ಆಶ್ವಾಸನೆ, ಭರವಸೆ ನೀಡುವುದು ರಾಜಕಾರಣಿ ಪ್ರಚಾರ ತಂತ್ರದ ಭಾಗವಾದರೂ ಅಸಾಧ್ಯವಾದ ಆಶ್ವಾಸನೆ, ಜನ ವಿರೋಧಿ ಹೇಳಿಕೆ ನೀಡಿ ಕೆಲವೊಮ್ಮೆ ಹಾಸ್ಯಾಸ್ಪದಕ್ಕೆ ಈಡಾಗುವುದು ಇದ್ದೇ ಇದೆ. ಕುಮಾರಸ್ವಾಮಿ ಅವರ ಹೇಳಿಕೆ ಪರ ವಿರೋಧ ಪ್ರತಿಕ್ರಿಯೆಗಳನ್ನು ಒಂದಿಷ್ಟು ಎಡಿಟ್ ಮಾಡಿ ಪ್ರಕಟಿಸಲಾಗುತ್ತಿದೆ.

lakshmikanth : ಕುಮಾರಸ್ವಾಮಿ ಸರ್, ಚಿತ್ರದುಗಕ್ಕೆ ಹತ್ತಿರದ ಭದ್ರ ನಿರ್ ತರೋಕೆ ಆಗ್ಲಿಲ್ಲ ., ನೀವು ನೇತ್ರಾವತಿ ನೀರು ಹರಿಸ್ತಿರಾ!!!! , ಸ್ವಲ್ಪ ತಾಂತ್ರಿಕವಾಗಿ ಮಾತಾಡಿ ಸ್ವಾಮಿ 48 ಗಂಟೆಗೆ ನೀರ್ ಹರಿಸ್ತಿರ ಅಂದ್ರೆ ವಿಮಾನದಲ್ಲಿ ಡೆಲ್ಲಿ ಹೋದಹಾಗೆ ಅಲ್ಲ ಸ್ವಾಮಿ . ಈ ಥರ ಆಶ್ವಾಸನೆ ಕೊಡಬೇಡಿ ಬೇರೆ ಏನಾದ್ರು ಟ್ರೈ ಮಡಿ....all the best....

sharath: ದೇಶದ ನಿಜವಾದ ಪರಿಕಲ್ಪನೆ ಜನರ ನಾಡಿ ಮಿಡಿತ ಅರಿತಿರುವ ವ್ಯಕಿಗೆ ನಿಮ ಮಠ ನೀಡಿ ಅಂಜಲು ಕಸಿಗಾಗಿ ಅಲ್ಲ ....
ಅವರ ಮಾತಿನಲ್ಲಿ ಮೊದಲು ತಪ್ಪು ಹುಡುಕುವುದನ್ನು ಬಿಡಿ, ಅದರ ಅರ್ಥ ನಾನು ನರ್ಮದಾ ನದಿ ನೀರನ್ನು ಕರ್ನಾಟಕ ಜನತೆಗೆ ಉಪಯೋಗವಾಗುವಂತೆ ಮಾಡುತ್ತೇನೆಂದು ಅಷ್ಟೇ.

ಯಾವುದೇ ಗೌರವಾನ್ವಿತ ಸ್ಥಾನ ಹೊಂದಿದ ವ್ಯಕ್ತಿಯ ಬಗ್ಗೆ ಮಾತನಾಡುವಾಗ ಪ್ರಜ್ಞೆ ಇರಬೇಕು, ಅದು ಕುಮಾರಸ್ವಾಮಿ ಇರಲಿ ಜಗದೀಶ್ ಶೆಟ್ಟರ್ ಇರಲಿ ಅಥವಾ ಬೇರೆ ಯಾರೇ ಇರಲಿ ಮಾತಿನ ಮೇಲೆ ಹಿಡಿತವಿರಲಿ ನೀವು ಬುದ್ದಿ ಜೀವಿಗಳು ಸಂವಿಧಾನ ನಿಮ್ಮಗೆ ಪ್ರಬಲ ವಾದ ಅಸ್ತ್ರ ನೀಡಿದೆ ಅದೇ ವೋಟು (ಮತ) ಅದನ್ನು ಬಳಸಿ ಸರಿಯಾದವರನ್ನು ಆರಿಸಿ ಅದನು ಬಿಟ್ಟು ಬೊಗಳೆಯ ಈ ಮಾತೇಕೆ,ನೀವು ಆರಿಸಿದ ಯಡ್ಡಿಯೂರಪ್ಪ ಮಾಡಿದ್ದು ಸಾಕು ಹಾಗಂತ ನಾನು ಕುಮಾರಸ್ವಾಮಿ ಪರ ಅಂತ ಅಲ್ಲ. ದೇಶದ ನಿಜವಾದ ಪರಿಕಲ್ಪನೆ ಜನರ ನಾಡಿ ಮಿಡಿತ ಅರಿತಿರುವ ವ್ಯಕಿಗೆ ನಿಮ್ಮ ಮತ ನೀಡಿ.

ಯಶವಂತ್‌ ಕುಮಾರ್‌, ಹಿರಿಯೂರು: ಕು.ಸ್ವಾಮಿಯವರೇ ನೀವು ಹೇಳಿದ್ದು ಸತ್ಯ ಕಣ್ರೀ.. ನೀವು ಧರ್ಮಸ್ಥಳಕ್ಕೆ ಹೋಗಿ ಬಾಟ್ಲಲ್ಲಿ ನೀರು ತರಬೇಕು ಅಂದ್ರೂ, 48 ಗಂಟೆ ಬೇಕು.. ಏನ್‌ ಸತ್ಯ ಹೇಳತ್ತೀರಾ.. ನೀವು ಸತ್ಯಹರಿಶ್ಚಂದ್ರರ ಪೀಸ್‌ ಕಣ್ರೀ,, ಆಲ್ಲಾ ಸ್ವಾಮೀ ನಿಮ್ಮ ಅಧಿಕಾರ ಅವಧಿಯಲ್ಲಿ ಹಿರಿಯೂರಿನವರೆ ಆದ ಡಿ.ಮಂಜುನಾಥ್‌ ಶಿಕ್ಷಣ ಮಂತ್ರಿಗಳಾಗಿದ್ದರು ನಿಮ್ಮ ಹಣೆಬರಹಕ್ಕೆ ಒಂದು ಉತ್ತಮ ಶಿಕ್ಷಣ ಸಂಸ್ಥೆ ಕೋಡೊಕೆ ಆಗಲಿಲ್ಲ. ಈಗಾ ನೀರು ಕೊಡ್ತಿರಾ..... ಕು.ಸ್ವಾಮಿ ಕಾದು ನೋಡೊಣಾ ಜನ ಮರಳೊ.. ಜಾತ್ರೆ ಮರಳೊ..

gokul: ಸಿ.ಎಂ. ಆಗಿದ್ದ 20 ತಿಂಗಳಿನಲ್ಲಿ ಆಗದ ಕೆಲಸ 48 ಗಂಟೆಗಳಲ್ಲಿ , ವಾವ್ ! ಈಗ ಸದ್ಯಕ್ಕೆ ಕಾವೇರಿ ತಮಿಳುನಾಡಿಗೆ ಹರಿಯುವದನ್ನು ತಡೆಯುವತ್ತ ಗಮನಹರಿಸಿ.

Rajesh Kumar : ಕುಮಾರಣ್ಣ ಜೋಕ್ ಮಾಡುತ್ತಿದ್ದಾರೆ. ಯಾರೂ ಸೀರಿಯಸ್ ಆಗಿ ತಗೋಬೇಡಿ.

Kishor kumar : ನೇತ್ರಾವತಿ ಹರಿಸೋಕೆ ಸಿಎಂ ಯಾಕೆ ಹಾಗಬೇಕು ಜನರಿಗೆ ಒಳ್ಫೆದು ಮಾಡೋಕೆ ಮನಸಿದ್ದರೆ ಹಾಗೆ ಮಾಡಬಹುದು. ಸುಮ್ಮನೆ ಯಾಕೆ ಸುಳ್ಳು ಹೇಳುತ್ತಿರಾ

sathya: ಸ್ವಾಮಿ ದೊಡ್ಡ ನಮಸ್ಕಾರ ತಮಗೆ, ಮುಖ್ಯಮಂತ್ರಿಯಾಗಿ ಕುದುರೆಮುಖಕ್ಕೆ ಬಂದಾಗ ತಾವು 15 ದಿನದಲ್ಲಿ ಬಳ್ಳಾರಿಯಲ್ಲಿ ಗಣಿ ಕೊಡಿಸುವೆನೆಂದು ಹೇಳಿ ಪರಾರಿಯಾದವರು 4 ವರ್ಷ ಸುದ್ದಿಯಿಲ್ಲ, ಇನ್ನು ನೀವು ಮತ್ತು ನಿಮ್ಮ ಪಕ್ಷ ಗೆಲ್ಲುವ ಮಾತು..ಗೊತ್ತು ಸತ್ಯ

Pavan : in 48 hours no one can do Mr HDK.. its not like passing urine... don give false statement..

Basappa: ಇದು ಒಂದು ವರ್ಷದ ಜೋಕ್. joke of the year..

Aravinda: Mr. ಕುಮಾರಸ್ವಾಮಿಯವರೇ, ನೀವು ಈ ಕೆಲಸ ಮಾಡ್ತಿರೋ ಇಲ್ಲವೋ ಗೊತ್ತಿಲ್ಲ, ಆದರೆ ನೀವೇ ಮುಖ್ಯಮಂತ್ರಿ ಆಗ್ಬೇಕು ಅಂತ ಯಾಕೆ ಕೆಳ್ಕೊತಿರ, JD(S) ಅಧಿಕಾರಕ್ಕೆ ಬರಲಿ ಅಂತ ಯಾಕೆ ಹೇಳಲ್ಲ?.

JD(S) ನಲ್ಲಿ ಮುಖ್ಯಮಂತ್ರಿ ಆಗೋ ಯೋಗ್ಯತೆ ಸಾಮರ್ಥ್ಯ ಇನ್ನೂ ಕೆಲವರಿಗೆ ಇದೆ. ನೀವು ಅವರನ್ನ ತುಳಿಥಿದಿರ ಅಷ್ಟೇ. ಜಾತಿ ರಾಜಕಾರಣ ಮಾಡ್ಬೇಡಿ ಸ್ವಾಮಿ. ಯಾಕೆ M.C ನಾಣಯ್ಯ, Y.S.V ದತ್ತ ಅಂತ ಸಾಮರ್ಥ್ಯ ಇರೋರನ್ನ ತುಲಿತಿರ ನೀವು ?. ನಿಮಗೆ ರಾಜ್ಯದ ಅಥವಾ ನೇತ್ರಾವತಿ ಬಗ್ಗೆ ಇವರಿಬ್ಬರಿಗಿಂತ ಗೊತ್ತ ?.

ನೊಂದ ಕನ್ನಡಿಗ : ಅಣ್ಣ ಕುಮಾರಣ್ಣ ನೀನು ನೇತ್ರಾವತಿ ಹರಿಸೋದಿರಲಿ ಮೊದಲು ಕಾವೇರಿ ಉಳಿಸು . ಅತ್ತ ಕಡೆ ದೇವೇಗೌಡರು : ನೀರು ಬಿಡಿ ಶೆಟ್ಟರೆ ನ್ಯಾಯಾಂಗ ನಿಂದನೆ ಆಗುತ್ತೆ ಅಂತ ಹಿರಿಯ ಮುತ್ಸದ್ದಿಯಂತೆ ಹೇಳಿಕೆ ಕೊಡೋದು .... ಅದೇ ವಿಧಾನ ಸೌಧದಲ್ಲಿ ನಿಮ್ಮ MLA ಗಳು ನೀರು ಬಿಡಬೇಡಿ ಅಂತ ಹೋರಾಟ ಮಾಡೋದು,

ರಾಜೀನಾಮೆ ನಾಟಕ ಹಾಡೋದು ಇಂಥ ಡಬಲ್ ಗೇಮ್ ಡಬಲ್ ಸ್ಟ್ಯಾಂಡರ್ಡ್ ಬಿಟ್ಟು... ಒಂದು ಹೇಳಿಕೆಗೆ ಬದ್ದರಾಗಿ.... ಅವಾಗ ಜನ ನಿಮ್ಮನ್ನ ನಂಬೋದೋ ಬೇಡವೋ ಅಂತ ನಿರ್ಧರಿಸುತ್ತಾರೆ. ದೇವರೇ, ಕೊಟ್ಟ ಮಾತಿಗೆ ನಡೆಯುವ ರಾಜಕಾರಣಿಗಳನ್ನು ನಮ್ಮ ನಾಡಿಗೆ ಕರುಣಿಸಿ ನಮ್ಮನ್ನು ಕಾಪಾಡು... ಮಿಕ್ಕ ಕಾಮೆಂಟ್ ಗಳನ್ನು.. ಕುಮಾರಸ್ವಾಮಿ ಹೇಳಿಕೆ ವಿವರಗಳನ್ನು ಇಲ್ಲಿ ಓದಿ

English summary
Public Condemn Former CM HD Kumaraswamy bats for Netravati river diversion project. HDK said said if he becomes CM he will assure to supply regular drinking water to Chitradurga, Ramanagar, Kolar, Chikkaballapur from Netravati within 48 hrs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X