ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗರಿಗೇ ಉದ್ಯೋಗ, ಆನ್ ಲೈನ್ ಆಂದೋಲನ

By * ಅಮರನಾಥ್ ಶಿವಶಂಕರ್
|
Google Oneindia Kannada News

Online Petition to implement Sarojini Mahisi Report
ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕೆಂದು ಸಮಾಜಿಕ ಕಾರ್ಯಕರ್ತೆ ಹಿರಿಯ ನಾಗರೀಕರಾದ ವಿನುತಾರವರು ಶುರು ಮಾಡಿರುವ ಆನ್ಲೈನ್ ಸಹಿ ಸಂಗ್ರಹಕ್ಕೆ ನಮ್ಮ ಬೆಂಬಲ ಸೂಚಿಸುವ ಸಲುವಾಗಿ ಬನವಾಸಿ ಬಳಗದ ಅಮರನಾಥ್ ಶಿವಶಂಕರ್ ಅವರು ಈ ಆನ್ ಲೈನ್ ಅಭಿಯಾನದ ಬಗ್ಗೆ ಒಂದಷ್ಟು ಮಾಹಿತಿ ನೀಡಿದ್ದಾರೆ.

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ಸಿಗಬೇಕು ಅನ್ನುವ ಸಾಮಾನ್ಯ ಕನ್ನಡಿಗರ ಬಯಕೆಗೆ ಪೂರಕವಾಗಿರೋ ವರದಿ ಅಂದರೆ "ಸರೋಜಿನಿ ಮಹಿಷಿ ವರದಿ" .

1983ರಲ್ಲಿ ರಚಿಸಿದ ಡಾ.ಸರೋಜಿನಿ ಮಹಿಷಿ ಸಮಿತಿಯು ಕರ್ನಾಟಕದಲ್ಲಿನ ಎಲ್ಲಾ ಖಾಸಗಿ, ಸರ್ಕಾರಿ ವಲಯದ ಎಲ್ಲಾ ಹಂತಗಳ ಕೆಲಸಗಳಲ್ಲಿ ಕನ್ನಡಿಗರಿಗೆ ಆದ್ಯತೆ ಕೊಡಿಸುವತ್ತ ಹಲವಾರು ಶಿಫಾರಸ್ಸುಗಳನ್ನು ಒಳಗೊಂಡ ವರದಿಯನ್ನು ಸರ್ಕಾರಕ್ಕೆ 1986ರಲ್ಲೇ ಸಲ್ಲಿಸಿದೆ. ನೋವಿನ ಸಂಗತಿಯೆಂದರೆ ವರದಿ ಬಂದು 26 ವರ್ಷವಾದರೂ ಅದು ಪೂರ್ತಿ ಜಾರಿಯಾಗಿಲ್ಲ.

ಬೆಂಗಳೂರಿನಲ್ಲಿ ಹಿರಿಯ ನಾಗರೀಕರಾದ ಶ್ರೀಮತಿ ವಿನುತಾ ರವರು ಸರೋಜಿನಿ ಮಹಿಷಿ ವರದಿ ಜಾರಿಗೆ ಬರಬೇಕೆಂದು ಅನ್ನುವ ನಿಟ್ಟಿನಲ್ಲಿ ದುಡಿಯುತ್ತಿದ್ದಾರೆ. ಹಲವಾರು ಸಂಘಸಂಸ್ಥೆಗಳನ್ನು ಭೇಟಿ ಮಾಡಿ, ಜನಾಭಿಪ್ರಾಯ ಮೂಡಿಸಿ ಈ ವರದಿ ಕಾಯ್ದೆಯಾಗಬೇಕ್ಕೆನ್ನುವ ಬಯಕೆ ವಿನುತಾ ರವರದು. ನಿಜಕ್ಕೂ ಇಂಥವರು ಕನ್ನಡ ಯುವ ಪೀಳಿಗೆಗೆ ಆದರ್ಶವೇ ಸರಿ.

ಈ ಹಿಂದೆ ಅವರು ಮೊಬೈಲ್ ಎಸ್.ಎಂ.ಎಸ್ ಅಭಯಾನ ನಡೆಸಿ ಸುಮಾರು 10,000ಕ್ಕೂ ಹೆಚ್ಚು ಎಸ್.ಎಂ.ಎಸ್ ಗಳನ್ನು ಸಂಗ್ರಹಿಸಿದ್ದಾರೆ. ಇದೀಗ ಅಂತರ್ಜಾಲದಲ್ಲಿ ಆನ್ಲೈನ್ ಸಹಿ ಸಂಗ್ರಹದ ಮೂಲಕ ತಮ್ಮ ಈ ಅಭಿಯಾನಕ್ಕೆ ಇನ್ನಷ್ಟು ಬಲ ದಕ್ಕಿಸಿಕೊಳ್ಳಬೇಕೆನ್ನುವ ಹಂಬಲ ಅವರದಾಗಿದೆ.

ಈ ಆನ್ಲೈನ್ ಸಹಿ ಸಂಗ್ರಹದ ಮೂಲಕ ಮಾಡುವ ಮೂರು ಹಕ್ಕೊತ್ತಾಯಗಳು ಈ ರೀತಿಯಾಗಿವೆ:
1) ಇಂದಿಗೆ ಹೊಂದುವಂತೆ ಸರೋಜಿನಿ ಮಹಿಷಿ ವರದಿಯನ್ನು ಪರಿಷ್ಕರಿಸಲು ತಜ್ಞರ ಸಮಿತಿ ರಚಿಸಬೇಕು.
2) ಹೊಸ ಸಮಿತಿಯ ಶಿಫಾರಸ್ಸಿನನ್ವಯ ಪರಿಷ್ಕರಿಸಿದ ಸರೋಜಿನಿ ಮಹಿಷಿ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿ ಕಾನೂನಿನ ಮಾನ್ಯತೆ ಒದಗಿಸಬೇಕು.
3) ಹೊಸ ವರದಿಯ ಅನ್ವಯ ಕರ್ನಾಟಕದಲ್ಲಿನ ಎಲ್ಲಾ ಉದ್ಯೋಗಗಳಲ್ಲಿ ಸಿಂಹಪಾಲು ಕನ್ನಡಿಗರಿಗೆ ಸಿಗುವಂತೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.

ಸಾಮಾನ್ಯ ಕನ್ನಡಿಗರಿಗೆ ವಿನುತಾ ರವರಿಗಿಂತ ಬೇರೆ ಸ್ಪೂರ್ತಿ ಬೇಕಿದೆಯೇ? ನಮಗೆ ನಿಜವಾಗಿಯೂ ಕನ್ನಡ ನೆಲದಲ್ಲಿ ಕನ್ನಡಿಗರಿಗೆ ಕೆಲಸ ಸಿಗಬೇಕು ಅನ್ನುವ ಅಭಿಮಾನವಿದ್ದರೇ, ನಾವು ಈ ಸಹಿ ಸಂಗ್ರಹಕ್ಕೆ ನಮ್ಮ ಕೈ ಜೋಡಿಸಬೇಕು. ನಮ್ಮ ಗೆಳೆಯರು, ನೆಂಟರಿಷ್ಟರು, ಪರಿಚಯಸ್ತರಿಗೆ ಇದರ ಬಗ್ಗೆ ಹೇಳಿ ಅವರೂ ಸಹಿ ಹಾಕುವಂತೆ ಮಾಡಬೇಕು.

ಕೊಂಡಿಯಲ್ಲಿ ಆನ್ಲೈನ್ ಪಿಟಿಶನ್ ಇದೆ. ಇಲ್ಲಿ ಸಹಿ ಹಾಕಿ, ಹಾಕಿಸಿ ಕರ್ನಾಟಕದ ಪರವಾದ, ಕನ್ನಡಿಗರಿಗೋಸ್ಕರ ನಮ್ಮ ಅಳಿಲು ಸೇವೆಯನ್ನು ಸಲ್ಲಿಸೋಣ.

English summary
Vinutha a social worker and resident of Jayanagar, Bangalore demanding Karnataka government through online peition to implement Sarojini Mahishi report soon. Implementation of Sarojini Mahishi report set to ensure employment to local Kannadigas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X