ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓದುಗರ ಪತ್ರ : ಮರುಕಳಿಸಿದ ಹಳೆಯ ನೆನಪುಗಳು

By Prasad
|
Google Oneindia Kannada News

Letters to the editor
ಗೆಳೆಯ ನಾಗರಾಜ್ ಅವರೇ, ನಿಮ್ಮ ಲೇಖನ ಚೆನ್ನಾಗಿದೆ. ನನಗು ನನ್ನ ಹಳೆ ನೆನಪುಗಳು ಹಸಿಯಾದವು. ನಿಜಕ್ಕೂ ಇಮೇಲ್ ಆದಿಯಾಗಿ ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ನಾವು ನಮ್ಮ ಭಾವನೆಗಳನ್ನು ಪತ್ರ ಮುಖೇನ ಬರೆಯುವುದನ್ನು ಮರೆತಿದ್ದೇವೆ. ನಾನೂ ಸಣ್ಣ ಊರಿಂದ ಮೈಸೂರ್ ಗೆ ಇಂಜಿನಿಯರಿಂಗ್ ಓದಕ್ಕೆ ಹೋದಾಗ ಆದ ಅನುಭವಗಳು ನಿಮ್ಮ ಲೇಖನದ ಮೊದಲ ಭಾಗವನ್ನು ಓದಿದಾಗ ಹಸಿಯಾದವು. ನಿಮಗೆ ಧನ್ಯವಾದಗಳು.[ಶುಭಸಂಕಲ್ಪ : ಚಿಂತೆ ಬಿಸಾಕು]
* ನಿರಂಜನ ಕೂಡವಲ್ಲಿ

***
ನಿನ್ನೆ 12 am 7.30 ಶೋ ಕಪಾಲಿಯಲ್ಲಿ ನೋಡಿದೆವು. ನನಗನಿಸಿದ ಬೆಸ್ಟ್ ಪಾಯಿಂಟ್ಸ್ ಅಂದ್ರೆ, 1. ಎಲ್ಲೂ ಬೋರಾಗದ ಸಿನಿಮಾ. 2. ನಾಯಕ ನಟ- ನಟಿಯರ ಹಾಗೂ ಪೋಷಕ ಪಾತ್ರಗಳ ಉತ್ತಮ ಅಭಿನಯ. 3. ತಲೆ ಕೆಡಿಸುವ ಹಾಡುಗಳಾಗಲೀ, ಮುಜುಗರ ತರಿಸುವ ಹಾಸ್ಯ ದೃಶ್ಯಗಳಾಗಲೀ ಇಲ್ಲದೆ ಇರುವುದು. 4. ಸಸ್ಪೆನ್ಸ್ ಅನ್ನು ಇಂಟರ್ವಲ್ ವರೆಗೂ ಕಾಯ್ದಿಟ್ಟುಕೊಳ್ಳುವಲ್ಲಿ ಸಫಲರಾದ ನಿರ್ದೇಶಕರಿಗೆ ಫುಲ್ ಮಾರ್ಕ್ಸ್. 5. ಸಣ್ಣ ಸಣ್ಣ ಅಂಶಗಳ ಗಮನಿಕೆ. ಆಸ್ತಿಕತೆಯೋ ನಾಸ್ತಿಕತೆಯೋ ಎಂಬ ನಿರ್ಧಾರವನ್ನು ಪ್ರೇಕ್ಷಕರಿಗೆ ಬಿಟ್ಟಿದ್ದಾರೆ! ಇತ್ತೀಚಿಗೆ ಬಂದ ಹಾರರ್ ಸಿನೆಮಾಗಳಲ್ಲಿ ಉತ್ತಮ ಪ್ರಯತ್ನ. ಕನ್ನಡಿಗರೆಲ್ಲ ಧಾರಾಳವಾಗಿ ನೋಡಬಹುದು.[12 AM ಮಧ್ಯರಾತ್ರಿ ಚಿತ್ರವಿಮರ್ಶೆ]
* ಕನ್ನಡತಿ

***
ಸ್ವಾಮಿ. ಸಿನಿಮಾ ಕಲಾವಿದರ ಲೈಫ್ ಸಾಧಾರಣ ಮನುಷ್ಯರ ಲೈಫ್ ತರಹ ಅಲ್ಲ. ಸಿನಿಮಾದಲ್ಲಿ ಇರೋಹಾಗೆ ನಿಜಜೀವನದಲ್ಲೂ ಇರಲು ಬಯಸುತ್ತಾರೆ. ಹಾಗೆಯೇ ಪೇಪರ್ ಮತ್ತು ಮಾಧ್ಯಮದವರು ಅವರ ಹಿಂದೆ ಯಾಕೆ ಬೀಳಬೇಕು ಗೊತ್ತಾಗ್ತಾ ಇಲ್ಲ. ಅವರಷ್ಟಕ್ಕೆ ಅವರನ್ನು ಬಿಡಿ.[ಹೊಸ ಸ್ನೇಹಿತನೊಂದಿಗೆ ದೀಪಿಕಾ]
* ಗೋಪಾಲಕೃಷ್ಣ

***
ತುಂಬಾ ಅರ್ಥಪೂರ್ಣ ಲೇಖನ. ಭಗವಂತನನ್ನು ಶನೇಶ್ವರ, ಶನೇಶ್ಚರ, ಶನಿ ಭಗವಾನ್ ಅಥವಾ ಶನಿದೇವ ಅಂತ ಲೇಖನದಲ್ಲಿ ಉಲ್ಲೇಖಿಸಬೇಕಾಗಿ ವಿನಂತಿ. ಜೈ ಶನೇಶ್ವರ ಭಗವಾನ್ ........[ಶನಿದೇವ ಒಳ್ಳೆಯದನ್ನೂ ಮಾಡುತ್ತಾನೆ]
* ಮಂಜುನಾಥ ಸಿ.ಎಂ.

***
ಹೊನ್ನಾಳಿ ಕ್ಷೇತ್ರದ ಜನತೆಯಲ್ಲಿ ಕರಮುಗಿದು ಬೇಡುವೆ. ಈ ಅಯೋಗ್ಯ ರೇಣುಕಾಚಾರ್ಯನಿಗೆ ಮುಂದಿನ ಬಾರಿ ಮತ ನೀಡದಿರಿ. ಬಿಜೆಪಿಯ ಟಿಕೆಟನ್ನು ಈತ ಖಂಡಿತ ಗಿಟ್ಟಿಸಿಕೊಳ್ತಾನೆ. ಆದರೆ ನೀವು ದಯಮಾಡಿ ಯಾರಾದರೂ ಸಭ್ಯ ಪಕ್ಷೇತರಿರಿಗೆ ಮತ ಚಲಾಯಿಸಿ. ಯಾವ ಪಕ್ಷದಲ್ಲಿ ಒಂದೊಮ್ಮೆ ವಾಜಪೇಯಿ, ಅಡ್ವಾಣಿ ಅವರು ರಾಮ ರಾಜ್ಯ ಕಟ್ಟುವ ಕನಸನ್ನು ಕಂಡರೋ, ಅದೇ ಪಕ್ಷದಲ್ಲಿದ್ದು ಈತ ಹಳ್ಳಿಹಳ್ಳಿಯಲ್ಲಿ ಮದ್ಯದ ಕೋಡಿಯನ್ನು ಹರಿಸಿದ. ಇವನು ನಮ್ಮ ರಾಜ್ಯಕ್ಕೇ ಕಳಂಕ. ಇವನು ಮಾಡ್ತಿರೋ ಪಾಪದ ಯೋಜನೆಗಳನ್ನು ತೊಳೆಯಲು ಮುಂದೆ ಬಹಳ ಶ್ರಮದ ಅಗತ್ಯವಿದೆ. ದಯಮಾಡಿ ಇವನಿಗೆ ಇನ್ನೆಂದೂ ಮತ ನೀಡದಿರಿ. ತುಂಬಾ ಧನ್ಯವಾದಗಳು.[ಕುಡುಕರಿಗೆ ರೇಣಾಕೋ ಊರುಗೋಲು?]
* ಜಿಷ್ನು

English summary
Letters to the editor. Readers respond to articles on the vanishing art of letter writing, Kashinath's movie 12 AM midnight, article series about Sade sati, dating by Deepika Padukone and excise minister Renukacharya. Thanks to all the writers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X