ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸಬ್ ಗೆ ನೇಣು, ಸೋನಿಯಾ ಚಾಲಾಕಿ ನಡೆ

By * ಶ್ರೀಧರ ಕೆದಿಲಾಯ, ಉಡುಪಿ
|
Google Oneindia Kannada News

Sonia gandhi
ಮುಂಬೈ ದಾಳಿ ರುವಾರಿ ಮಹಮ್ಮದ್ ಅಜ್ಮಲ್ ಅಮೀರ್ ಕಸಬ್ ಕೊನೆಗೂ ನೇಣು ಹಾಕಲಾಗಿದೆ. ಆದರೆ, ಕಸಬ್ ಸತ್ತ ನಂತರ ಅನೇಕ ಪ್ರಶ್ನೆಗಳು ಜನ ಸಾಮಾನ್ಯರನ್ನು ಕಾಡುತ್ತಿದೆ. ಕಸಬ್ ಗಲ್ಲಿಗೇರಿಸುವ ಪ್ರಕ್ರಿಯೆ ಹಿಂದೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧೀಜಿ ಅವರ ಚಾಲಾಕಿ ರಾಜಕೀಯ ನಡೆ ಎದ್ದು ಕಾಣುತ್ತಿದೆ.

ಉಗ್ರರ ವಿರುದ್ಧ ಸರ್ಕಾರ ಕೊನೆಗೂ ಕಠಿಣ ಕ್ರಮ ತೆಗೆದುಕೊಂಡಿದೆ ಎಂಬ ಸಮಾಧಾನ ಒಂದೆಡೆಯಾದರೆ, ಕಸಬ್ ಗಲ್ಲಿಗೇರಿಸುವಲ್ಲಿ ಆದ ವಿಳಂಬ ಹಾಗೂ ಆತುರತೆಗೆ ಸ್ಪಷ್ಟ ಕಾರಣ ಯಾರೂ ನೀಡುತ್ತಿಲ್ಲ ಬಹುಶಃ ಯಾರೂ ನೀಡಲಾರರು.

21/11/2012 ರ ಬೆಳಗ್ಗೆ 7.30 ಗಂಟೆಗೆ ಕಸಬ್ ನನ್ನು ಗಲ್ಲಿಗೇರಿಸಲಾಗಿದೆ ಎಂದು ಕೇಂದ್ರ ಸುಶೀಲ್ ಕುಮಾರ್ ಶಿಂಧೆ ಘೋಷಿಸಿದ್ದಾರೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನ.5 ರಂದೇ ಕಸಬ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದರು. ನಾನು ವಿದೇಶ ಯಾತ್ರೆಯಲ್ಲಿದ್ದೆ. ಮರುದಿನ ನನಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿತು ಎಂದು ಗೃಹ ಸಚಿವ ಶಿಂಧೆ ಹೇಳಿದ್ದಾರೆ.

* ನ.5 ಕ್ಕೆ ರಾಷ್ಟ್ರಪತಿ ಅಂಕಿತ ಬಿದ್ದರೂ 16 ದಿನ ವಿಳಂಬ ಮಾಡಿದ್ದು ಏಕೆ?
* ಗಲ್ಲಿಗೇರಿಸುವವರ ಪಟ್ಟಿಯಲ್ಲಿ ಕಸಬ್ ಲಾಂಗ್ ಜಂಪ್ ಮಾಡಿದ್ದು ಹೇಗೆ?
* 2001 ಸಂಸತ್ ದಾಳಿ ಪ್ರಕರಣದ ರುವಾರಿ ಅಫ್ಜಲ್ ಗುರುವಿಗಿಂತ ಮೊದಲೇ ಕಸಬ್ ಗಲ್ಲಿಗೇರಿದ್ದು ಏಕೆ?
* ಕಾಂಗ್ರೆಸ್ ಸರ್ಕಾರವೇ ಅಫ್ಜಲ್ ಗುರು ಗಲ್ಲು ಮುಂದೂಡುತ್ತಿದೆ ಏಕೆ?
* ಕಸಬ್ ನನ್ನು ನಿಜಕ್ಕೂ ಗಲ್ಲಿಗೇರಿಸಲಾಯಿತೇ? ಇದಕ್ಕೆ ಪುರಾವೆ ಇದೆಯೇ?
* ಡೆಂಗ್ಯೂ ಜ್ವರದಿಂದ ಕಸಬ್ ಸತ್ತದ್ದು ಎಂಬ ವಾದ ನಿಜವೇ?
* ಕಸಬ್‌ನ ಮೃತದೇಹ ಯೆರವಡಾ ಜೈಲಿನಲ್ಲಿ ದಫನ್ ಮಾಡಿದ್ದು ಏಕೆ?

ಸಂಸತ್ತು ಅಧಿವೇಶನ ಭೀತಿಯೇ? : ಪ್ರತಿ ಬಾರಿ ಪ್ರತಿಪಕ್ಷಗಳು ತಿರುಗಿಬಿದ್ದಾಗ ಒಂದೊಂದು ತಂತ್ರ ಮಾಡಿ ಮಾಧ್ಯಮ ಹಾಗೂ ಜನರ ಗಮನವನ್ನು ಬೇರೆಡೆಗೆ ಸೆಳೆಯುವಲ್ಲಿ ಸೋನಿಯಾ ಗಾಂಧಿ ಅವರು ಯಶಸ್ವಿಯಾಗಿದ್ದಾರೆ.

ಸೋನಿಯಾ ಅನಾರೋಗ್ಯ ನಿಗೂಢತೆ, ಕಲ್ಲಿದ್ದಲು ಹಗರಣ, 2ಜಿ ಹಗರಣ, ಕಾಮನ್ ವೆಲ್ತ್ ಹಗರಣ ಸೇರಿದಂತೆ ಎಲ್ಲ ವಿಷಯಗಳು ಸತ್ತು ಹೋಗುವಂತೆ ಮಾಡಲಾಗಿದೆ.

ಈ ಬಾರಿ ಸಂಸತ್ ಅಧಿವೇಶನದ ಜೊತೆಗೆ ಗುಜರಾತ್ ಚುನಾವಣೆಯ ಭೀತಿ ಕೂಡಾ ಯುಪಿಎಯನ್ನು ಕಾಡುತ್ತಿದೆ. ಸರಿಯಾಗಿ ಇನ್ನೊಂದು ತಿಂಗಳಿಗೆ ಮೋದಿ ನಾಡಿನಲ್ಲಿ ಕೇಸರಿ ಬಾವುಟ ಹಾರುತ್ತದೋ ಅಥವಾ ಕೈ ಬಾವುಟ ಮೇಲೇಳುತ್ತದೋ ನೋಡಬೇಕಿದೆ.

ಈಗಲೂ ಕೂಡಾ ಅದೇ ತಂತ್ರವನ್ನು ಉಪಯೋಗಿಸಿದ್ದಾರೆ. ಉಗ್ರ ಅಜ್ಮಲ್ ಕಸಬ್ ಇರಲಿ ಅಫ್ಜಲ್ ಗುರುವಿರಲಿ ಇಬ್ಬರಿಗೂ ಗಲ್ಲುಶಿಕ್ಷೆ ಖಾಯಂ ಎಂಬುದು ಜಗಜ್ಜಾಹೀರಾಗಿದೆ. ಆದರೆ, ಇಷ್ಟು ರಹಸ್ಯವಾಗಿ ಕಾರ್ಯಾಚರಣೆ ಮಾಡಿದ್ದರ ಹಿಂದಿನ ಉದ್ದೇಶವೇನು? ಅದರಲ್ಲೂ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನ ಕಸಬ್ ಗಲ್ಲಿಗೇರಿಸಿದ್ದು ಸೋನಿಯಾ ತಂತ್ರವೇ ಎಂಬ ಪ್ರಶ್ನೆ ಮೂಡುತ್ತದೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಬಹುಬ್ರಾಂಡ್ ನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ, ರಾಬರ್ಟ್ ವದ್ರಾ ಹಗರಣಗಳ ಬಗ್ಗೆ ಸಂಸತ್ತಿನಲ್ಲಿ ಗದ್ದಲ ಮಾಡಿ ಸರ್ಕಾರದ ಮಾನ ಕಳೆಯಲು ಬಿಜೆಪಿ, ಮಮತಾ ಬ್ಯಾನರ್ಜಿ, ಎಡಪಕ್ಷಗಳು ತುದಿಗಾಲಲ್ಲಿ ನಿಂತ ಸಂದರ್ಭದಲ್ಲಿ ಕಸಬ್ ವಿಷಯವನ್ನು ತೂರಿ, ಯುಪಿಎಗೆ ಸಂಸತ್ತಿನ ಆಗಬಹುದಾದ ಮುಜುಗರವನ್ನು ಮುಂದೂಡಿದೆ.

ರಾಬರ್ಟ್ ವದ್ರಾ ಅವರ 3000 ಕೋಟಿ ಭೂ ಹಗರಣದ ಬಣ್ಣ ಬಯಲಾಗುವುದು ಸೋನಿಯಾಜಿಗೆ ಬೇಕಿಲ್ಲ. ಎಫ್ ಡಿಐ ನಿಂದ ಬರುವ ಸಾವಿರಾರು ಕೋಟಿ ರು ಮೊತ್ತಕ್ಕೆ ಕಲ್ಲು ಬೀಳುವಂತೆ ಮಾಡಲು ವಿಪಕ್ಷಗಳು ಕಾದು ಕೂತಿದೆ. ಸರ್ಕಾರ ಬೀಳಿಸುತ್ತೇನೆ ಎಂದು ಮಮತಾ ಎಚ್ಚರಿಸುತ್ತಲೇ ಇದ್ದಾರೆ.

ತಮಿಳುನಾಡು ಹಾಗೂ ಪಶ್ಚಿಮ ಬಂಗಾಳದಲ್ಲಿ ಎಫ್ ಡಿಐ ಅಳವಡಿಕೆ ಸಾಧ್ಯವಾಗದಿದ್ದರೆ ಸೋನಿಯಾ ಅವರು ಸೋಲೊಪ್ಪಿಕೊಂಡಂತೆ ಆಗುತ್ತದೆ. ಹೀಗಾಗಿ ದೇಶದ ಗಮನವನ್ನು ಬೇರೆಡೆಗೆ ಹರಿಸಲು ಯುಪಿಎ ಸರ್ಕಾರ ಕಸಬ್ ನನ್ನು ಗಲ್ಲಿಗೇರಿಸಿದೆ ಎನ್ನಬಹುದು.

ಕಸಬ್ ಗಲ್ಲಿಗೇರಿಸಿ ರಾಜಕೀಯ ಲಾಭ ಪಡೆಯಲು ಯುಪಿಎ ನಿರ್ಧರಿಸಿದೆ. ಕಸಬ್ ನ ಸಾವಿನ ನಿಗೂಢತೆ ಪ್ರಶ್ನೆಗಳೊಂದಿಗೆ ಸಾರ್ವಜನಿಕರು ಚರ್ಚೆ ಮುಂದುವರೆಸಿದ್ದಾರೆ.

English summary
Kasab Hanging raises many questions why he was hanged before beginning of parliament session. Did Sonia played a tactics in driving media and public attention from FDI and Scam to Kasab. BJP said Robert Vadra Scam will be will be raised in the coming session of Parliament.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X