ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನ ಅಂದಗೆಡಿಸುತ್ತಿರುವ ಕಸದ ವಾಹನಗಳು

By Prasad
|
Google Oneindia Kannada News

Garbage collecting vehicles creating nuisance in Mysore
ಮಾನ್ಯರೆ,

ಮೈಸೂರಿನ ನಾಗರೀಕರಲ್ಲಿ ಕೆಲವು ಸಮಸ್ಯೆಗಳು ಮನೆಮಾಡಿವೆ. ಅವುಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂಬುದು ತೋಚದೆ ನಿಮ್ಮ ಬಳಿ ಹೇಳಿ ಕೊಳ್ಳುತ್ತಿದ್ದೀನಿ. ಏಕೆಂದರೆ ಪತ್ರಕರ್ತರು ಸಮಾಜದ ಮುಖ್ಯ ಭಾಗ ಎಂಬುದು ನನ್ನ ಅಭಿಪ್ರಾಯ.

ಸಮಸ್ಯೆ ಏನೆಂದರೆ, ಮೈಸೂರಿನ ಬಹುತೇಕ ಕಸದ ವಾಹನಗಳು ಸರಿಯಾದ ಮೇಲು ಹೊದಿಕೆ ಇಲ್ಲದೆ ಕಸವನ್ನು ಸಾಗಣೆ ಮಾಡುತ್ತಿವೆ. ಇದರಿಂದಾಗಿ ಕಸ ಸಾಗಿಸುವಾಗ ಆ ವಾಹನದ ಹಿಂದೆ ಸಾಗುವ ವಾಹನಗಳಿಗೆ, ಸವಾರರಿಗೆ ಬಹಳ ತೊಂದರೆ ಆಗುತ್ತಿದೆ.

ಕೆಲವೊಮ್ಮೆ ಗಾಳಿ ಹೆಚ್ಚಾಗಿ ಬೀಸಿದರೆ ಆ ಕಸ ಹಿಂಬದಿ ವಾಹನ ಸವಾರರ ಮೇಲೆ ಬೀಳುತ್ತಿದೆ. ಇದರಿಂದಾಗಿ ತುಂಬಾ ತೊಂದರೆ ಉಂಟಾಗುದ್ದು, ಕಚೇರಿಗೆ ಹೊರಟಿರುವಾಗ ಇಂತಹ ಘಟನೆ ನಡೆದು ಜನ ಬೈದುಕೊಳ್ಳುವಂತಾಗಿದೆ. ಇದು ಸಾಕಷ್ಟು ಮುಜುಗರಕ್ಕೂ ಕಾರಣವಾಗುತ್ತಿದೆ. ಇಂತಹ ಸನ್ನಿವೇಶ ಪ್ರತಿ ನಿತ್ಯ ಬೆಂಗಳೂರು-ನಂಜನಗೂಡು ರಸ್ತೆಯಲ್ಲಿ ಹೆಚ್ಚಾಗಿದೆ.

ದಯವಿಟ್ಟು ಈ ಸಮಸ್ಯೆಯನ್ನು ಸಂಬಂಧ ಪಟ್ಟವರ ಗಮನಕ್ಕೆ ತರಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೀನಿ.

ಸೂಚನೆ : ಮೈಸೂರಿನಲ್ಲಿ ಯಾವುದೇ ಕುಂದುಕೊರತೆಗಳಿದ್ದರೆ ಕಾರ್ಪೋರೇಷನ್ ವೆಬ್ ತಾಣಕ್ಕೆ ಭೇಟಿ ನೀಡಿ, ದೂರು ನೀಡಿರಿ. ವಿಳಾಸ : http://www.mysorecity.gov.in/contactus

ಇಂತಿ ನಿಮ್ಮ,
ಸತೀಶ್ ಬಿ ಕನ್ನಡಿಗ

English summary
Letter to the editor by Satish B Kannadiga, Mysore. He says the garbage collecting vehicles without top cover have been creating nuisance in Mysore city by littering all over the beautiful city. Will the authorities take action immediately?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X