ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ ಸಮ್ಮೇಳನದಲ್ಲಿ ಕನ್ನಡ ಸಂಸ್ಕೃತಿಯ ಸೊಗಡು

By Mahesh
|
Google Oneindia Kannada News

ಬೆಂಗಳೂರು, ಆ.18: ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರೆಲ್ಲರನ್ನು ಒಂದೆಡೆ ಬೆಸೆಯುವ ಕಾರ್ಯವನ್ನು ಅಕ್ಕ ಸಂಸ್ಥೆ ನಿರಂತರವಾಗಿ ಮಾಡಿಕೊಂಡು ಬಂದಿದೆ. ಈ ಬಾರಿಯ 8ನೇ ವಿಶ್ವಕನ್ನಡ ಸಮ್ಮೇಳನದಲ್ಲಿ ಕನ್ನಡ ಸಂಸ್ಕೃತಿ, ಕಲೆ, ಜಾನಪದ ಶ್ರೀಮಂತಿಕೆಯನ್ನು ಅನಾವರಣಗೊಳಿಸಲು ಕಲಾವಿದರ ತಂಡ ಸಜ್ಜಾಗಿದೆ.

ಅಮೆರಿಕಕ್ಕೆ ಹೊರಟಿರುವ ಈ ಕಲಾವಿದರ ತಂಡಕ್ಕೆ ಕಪ್ಪಣ್ಣ ಅವರು ನಾವಿಕರಾಗಿದ್ದಾರೆ. ಮಹಿಳೆಯರಿಂದ ಯಕ್ಷಗಾನ, ನಗಾರಿ, ಚೌಡಿಕೆ ಮೇಳ, ಜಾನಪದ ಗೀತ ಗಾಯನ, ಕುವೆಂಪು ಕಾವ್ಯ ಆಧಾರಿತ ಭರತನಾಟ್ಯ ಆಯೋಜನೆಯಾಗಿದೆ.

ಕಲಾವಿದರ ತಂಡದ ವಿವರ ಈ ಕೆಳಗಿನಂತಿದೆ: [ಸಮ್ಮೇಳನಕ್ಕೊಂದು ಸುಂದರ ಅಪ್ಲಿಕೇಷನ್]

1. ಮಹಿಳಾ ಯಕ್ಷಗಾನ
* ನಾಲ್ವರು ಮಹಿಳೆಯರು ಹಾಗೂ ಇಬ್ಬರು ಪುರುಷ ಕಲಾವಿದರು, ಡಾ. ಶಿವರಾಮ ಕಾರಂತ ಯಕ್ಷಗಾನ ಬ್ಯಾಲೆ.
* ಪ್ರಸಂಗ : ಪಂಚವಟಿ
* ನಿರ್ದೇಶನ : ಶ್ರೀಮತಿ ಮಾಲಿನಿ ಮಲ್ಯ ಹಾಗೂ ಸುಧೀರ್ ರಾವ್ ಕೊಡವೂರು
* ವಿನ್ಯಾಸ ಹಾಗೂ ಸಹಕಾರ : ಶ್ರೀನಿವಾಸ್ ಸಾಸ್ತನ್ ಹಾಗೂ ಗೌರಿ ಕೆ ಶ್ರೀನಿವಾಸ್
* ಶ್ರೀಮತಿ ಕಡೆಕ್ಕೋಡು ಗೌರಿ ಅವರ ನೇತೃತ್ವದ ಕರ್ನಾಟಕ ಮಹಿಳಾ ಯಕ್ಷಗಾನ ತಂಡ

Yakshagana

2. ಚೆಲುವ ಕನ್ನಡ ನಾಡು:
ಧಾರವಾಡ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಿತಾರ್ ಮಾಂತ್ರಿಕ ಉಸ್ತಾದ್ ರತನ್ ರಹಿಮತ್ ಖಾನ್, ಉಸ್ತಾದ್ ಅಬ್ದುಲ್ ಕರೀಂ ಖಾನ್, ಉಸ್ತಾದ್ ಬಾಳೆ ಖಾನ್ ಅವರ ಕುಟುಂಬದ ಮುಂದುವರೆದ ಸಂಗೀತ ಪರಂಪರೆಯ ಕುಡಿಗಳಾದ ಉಸ್ತಾದ್ ರಯೀಸ್ ಖಾನ್ ಹಾಗೂ ಉಸ್ತಾದ್ ಹಫೀಜ್ ಖಾನ್ ಅವರು ಸಂಗೀತ ರಸದೌತಣ ನೀಡಲಿದ್ದಾರೆ. ಇವರಿಗೆ ವಿದ್ವಾನ್ ಸತೀಶ್ ಹಂಪಿಹೊಳಿ ತಬಲಾ ಸಾಥ್ ನೀಡಲಿದ್ದಾರೆ.

3. ಶಾಸ್ತ್ರೀಯ ನೃತ್ಯ, ಸಮಕಾಲೀನ ಸಂಗೀತ ಫ್ಯೂಷನ್
"ಕುವೆಂಪು ಕಂಡ ಕನ್ನಡ ಮತ್ತು ಕರ್ನಾಟಕ"
* ಕಲಾವಿದರು ಶ್ರೀಮತಿ ಪದ್ಮಿನಿ ಅಚ್ಚು, ಶ್ರೀಮತಿ ಬೆಳ್ಳಿ ರವಿವರ್ಮ ಕುಮಾರ್, ಕುಮಾರಿ ಪೂಜಾ ಅನುಪ್, ಕುಮಾರಿ ಪ್ರೇರಣಾ ಪರಾವಸ್ತು
* 30 ನಿಮಿಷಗಳ ಈ ಕಾರ್ಯಕ್ರಮದ ಮೂಲಕ ರಾಷ್ಟ್ರಕವಿ ಕುವೆಂಪು ಅವರಿಗೆ ಗೌರವ ನಮನ ಸಲ್ಲಿಸಲಾಗುತ್ತದೆ.

4. ಕರ್ನಾಟಕ ಜಾನಪದ ಮೇಳ [ಕಲಾವಿದರ ಚಿತ್ರಗಳಿಗೆ ಕ್ಲಿಕ್ಕಿಸಿ]
* ಜಾನಪದ ವಾದ್ಯ ಸಂಗೀತ ಹಾಗೂ ಗೀತ ಗಾಯನ.
* ಚಾಮರಾಜನಗರದ ಸಿ.ಎಂ ನರಸಿಂಹ ಮೂರ್ತಿ ನೇತೃತ್ವ ತಂಡ

5. ಜಾನಪದ ತಂಡ : ನಗಾರಿ
* ಬೇಸ್ ಡ್ರಮ್ಸ್ ಮಾದರಿಯ ನಗಾರಿ ವಾದ್ಯ, ತಮಟೆ, ತಾಳ ವಾದ್ಯ ಮೇಳ, ನೃತ್ಯ ಮೈಸೂರಿನ ಸಿ ಮಂಜುನಾಥ್ ಅವರ ತಂಡ

6. ಜಾನಪದ ತಂಡ: ಚೌಡಿಕೆ ಮೇಳ
* ಎಲ್ಲಮ್ಮ ದೇವಿ ಕುರಿತ ತತ್ವ ಪದ ಗೀತ ಗಾಯನ, ನೃತ್ಯ
* ಬೆಳಗಾವಿಯ ಅಥಣಿ ತಾಲೂಕಿನ ಶ್ರೀಮತಿ ರಾಧಾ ಬಾಯಿ ಮಾರುತಿ ಮಾದರ್ ಹಾಗೂ ತಂಡ

English summary
Yakshagana, Hindustani vocal, Contemporary dance performance as a tribute to Kumvempu are some of the cultural troupes taking part in Akka world convention 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X