•  

ವಿಂಡ್‌ಹಾಮ್‌ ಹೋಟೆಲ್‌ ಹೌಸ್‌ಫುಲ್‌!

ಬುಧವಾರ, ಏಪ್ರಿಲ್ 5, 2006, 16:50 [IST]
ವಿಶ್ವಕನ್ನಡ ಸಮ್ಮೇಳನದ ವಸತಿ ವ್ಯವಸ್ಥೆಯಾದ ವಿಂಡ್‌ಹಾಮ್‌ ಹೋಟೆಲ್‌(ಬಾಲ್ಟಿಮೊರ್‌)ನಲ್ಲಿ ರಿಯಾಯಿತಿ ದರದ (99ಡಾಲರ್‌ ದಿನವಹಿ) ಬುಕಿಂಗ್‌ಗೆ ಅತ್ಯದ್ಭುತ ಪ್ರತಿಕ್ರಿಯೆ ಬಂದು ಸಮ್ಮೇಳನಕ್ಕಾಗಿ ನಿಗದಿಪಡಿಸಿದ್ದ ಎಲ್ಲ 550 ಕೊಠಡಿಗಳ ಬುಕಿಂಗ್‌ ಆಗಿಹೋಗಿದೆ! ವಿಂಡ್‌ಹಾಮ್‌ನಲ್ಲಿ ಈ ಕ್ಷಣದಿಂದಲೇ ‘ಡೋರ್‌ ಬಸ್ಟರ್‌’ ದರದಲ್ಲಿ ಬುಕಿಂಗ್‌ ಮುಕ್ತಾಯಗೊಂಡಿದ್ದು, ಇನ್ನೂ ಅಲ್ಲಿ ಯಾವುದೇ ದರದಲ್ಲೂ ಕೊಠಡಿಗಳ ಲಭ್ಯತೆಯಿರುವುದಿಲ್ಲ.

ಇಷ್ಟೊಂದು ಉತ್ಸಾಹದ ಪ್ರತಿಕ್ರಿಯೆಯನ್ನು ತೋರಿಸಿದ್ದಕ್ಕಾಗಿ ಸಮ್ಮೇಳನಾರ್ಥಿಗಳನ್ನು ಸಂಚಾಲನಾ ಸಮಿತಿಯು ಅಭಿನಂದಿಸುತ್ತಿದೆ.

ನಿರಾಸೆ ಬೇಡ! ವಿಂಡ್‌ಹಾಮ್‌ ಹೋಟೆಲ್‌ನ ಪಕ್ಕದಲ್ಲೇ ಇರುವ ಮತ್ತು ಸಮ್ಮೇಳನ ಸಭಾಂಗಣಕ್ಕೆ ಐದು ನಿಮಿಷದ ನಡಿಗೆಯಷ್ಟಿರುವ ರ್ಯಾಡಿಸನ್‌ ಹೋಟೆಲ್‌ನಲ್ಲೀಗ ಸಮ್ಮೇಳನ ಸಂದರ್ಭಕ್ಕಾಗಿ ಕೊಠಡಿಗಳ ಕಾಯ್ದಿರಿಸುವಿಕೆಗೆ ವ್ಯವಸ್ಥೆ ಮಾಡಲಾಗಿದೆ.

250 ಕೊಠಡಿಗಳನ್ನು ಇದಕ್ಕಾಗಿ ಮೀಸಲಾಗಿಟ್ಟಿದ್ದು ಏಪ್ರಿಲ್‌ 30ರೊಳಗೆ ಬುಕ್‌ ಮಾಡಿದರೆ ದಿನವಹಿ ದರ 115 ಡಾಲರ್‌ ಆಗಿರುತ್ತದೆ. (ಬಾಲ್ಟಿಮೊರ್‌ನ ಒಳ್ಳೆಯ ಹೋಟೆಲ್‌ಗಳಲ್ಲಿ ಸರಾಸರಿಯಾಗಿ 160 ಡಾಲರ್‌ನಷ್ಟು ಬಾಡಿಗೆದರಗಳಿರುವುದನ್ನು ಗಮನಿಸಿ). ಸಮ್ಮೇಳನಕ್ಕೆ ಆಗಮಿಸಲಿರುವವರು ಇದೀಗಲೇ ರ್ಯಾಡಿಸನ್‌ ಹೋಟೆಲ್‌ನಲ್ಲಿ ರಿಯಾಯಿತಿ ದರದಲ್ಲಿ ಕೊಠಡಿಗಳನ್ನು ಕಾಯ್ದಿರಿಸಬೇಕಾಗಿ ಈ ಮೂಲಕ ಕೋರಲಾಗಿದೆ.

ರ್ಯಾಡಿಸನ್‌ ಹೋಟೆಲ್‌ ವಿವರಗಳು:

ವಿಳಾಸ: Radisson Plaza Lord Baltimore, 20 West Baltimore Street, Baltomore, MD 21201
ವೆಬ್‌ ಪುಟ: www.radisson.com/lordbaltimore
ದೂರವಾಣಿ: 1 800 333 3333
Contact: Sharon Tietjens; Direct Line: 410 659 5255; e mail: sharon.tietjens@radisson.com
ಗ್ರೂಪ್‌ ಕೋಡ್‌: AKKA

ರ್ಯಾಡಿಸನ್‌ ಹೊಟೆಲ್‌ ಬುಕಿಂಗ್‌ಗೂ ತೀವ್ರ ಬೇಡಿಕೆ ನಿರೀಕ್ಷಿಸಲಾಗಿದ್ದು ಇನ್ನೂ ಒಂದೆರಡು ಹೊಟೆಲ್‌ಗಳಲ್ಲಿ ಸಮ್ಮೇಳನ ವಿಶೇಷ ರಿಯಾಯಿತಿ ದರದಲ್ಲಿ ಕೊಠಡಿಗಳ ಲಭ್ಯತೆಯ ಬಗ್ಗೆ ಸಮಿತಿಯು ಯೋಜನೆಯನ್ನು ರೂಪಿಸುತ್ತಿದೆ.

ಕೊಠಡಿ ಕಾಯ್ದಿರಿಸುವಿಕೆಯ ಬಗ್ಗೆ ಹೆಚ್ಚಿನ ವಿವರಗಳು ಅವಶ್ಯವಿದ್ದಲ್ಲಿ ನೋಂದಣಿ ಸಮಿತಿಯ ಸದಸ್ಯರ ಸಂಪರ್ಕ ವಿವರಗಳು ಹೀಗಿವೆ:

1) ರವಿ ಹರಪ್ಪನಹಳ್ಳಿ (ಸಮ್ಮೇಳನ ನೋಂದಣಿ ನಿರ್ವಾಹಕ)
ಇ-ಮೇಲ್‌: ravih@starpower.net
ದೂರವಾಣಿ: 240-381-2273 (ಮೊಬೈಲ್‌); 301-438-0642 (ಮನೆ)

2) ಜಯಶ್ರೀ ಜಗದೀಶ್‌ (ಸಮ್ಮೇಳನ ನೋಂದಣಿ ಸಹನಿರ್ವಾಹಕಿ)
ಇ-ಮೇಲ್‌: jagadeesh49@yahoo.com
ದೂರವಾಣಿ: 202-492-6346 (ಮೊಬೈಲ್‌); 301-208-8260 (ಮನೆ)

4ನೇ ‘ಅಕ್ಕ ವಿಶ್ವ ಕನ್ನಡ ಸಮ್ಮೇಳನ’ದ ಸಮಗ್ರ ಮಾಹಿತಿಗೆ ಸಂದರ್ಶಿಸಿ:
http://www.akkaonline.org/2006/



ಮುಖಪುಟ
/ ಎನ್‌ಆರ್‌ಐ


User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
IPL, Himachal Pradesh Cricket Association Stadium, Dharmasala
Chennai Super Kings: 120 / 7, 20 Overs
Play stopped for innings.
1st Test , Lord's Cricket Ground, St John's Wood
West Indies: 83 / 2, 29 Overs
IPL, Feroz Shah Kotla, Delhi
Match starts at 08:00 pm IST  
Follow Oneindia Kannada on Twitter
Oneindia Kannada Facebook fan page
Write Comments on this Article