•  

ಶಾಸ್ತ್ರೀಯ ಸಂಗೀತದ ರಸದೌತಣ

ಬುಧವಾರ, ಏಪ್ರಿಲ್ 5, 2006, 16:50 [IST]
ವಿಶ್ವ ಕನ್ನಡ ಸಮ್ಮೇಳನವೆಂಬೊ ಕನ್ನಡ ನುಡಿಹಬ್ಬದಲ್ಲಿ ಈಬಾರಿ ಕರ್ನಾಟಕ ಶೈಲಿ (ದಕ್ಷಿಣಾದಿ) ಮತ್ತು ಹಿಂದುಸ್ತಾನಿ ಶೈಲಿಯ (ಉತ್ತರಾದಿ) ಶಾಸ್ತ್ರೀಯಸಂಗೀತ ರಸಿಕರಿಗೆ ಮಹದಾನಂದವಾಗುವಷ್ಟು ಕಾರ್ಯಕ್ರಮಗಳ ಸರಮಾಲೆಯೇ ಇದೆ. ವಾಷಿಂಗ್‌ಟನ್‌ ಪರಿಸರದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಗುರುವಾಗಿರುವ ಉಷಾ ಚಾರ್‌ ನೇತೃತ್ವದಲ್ಲಿ ಸಂಗೀತಸಮಿತಿಯು ಈ ರಸದೌತಣದ ಏರ್ಪಾಡುಗಳನ್ನು ನಡೆಸಿದೆ.

ಕೆಲವು ಮುಖ್ಯಾಂಶಗಳು :

Highlights of Classical Music in WKC-06ಶುಕ್ರವಾರ, ಸಪ್ಟೆಂಬರ್‌ 1ರಂದು ಸಂಜೆ ಸಮ್ಮೇಳನ ಉದ್ಘಾಟನೆಯ ವೇಳೆ ಸುಮಾರು ನೂರಕ್ಕೂ ಹೆಚ್ಚು ಕಲಾವಿದರ (ವಾಷಿಂಗ್ಟನ್‌ ಪ್ರದೇಶದವರಷ್ಟೇ ಅಲ್ಲದೆ ಸಮ್ಮೇಳನಾರ್ಥಿ ಅತಿಥಿಗಳೂ ಸೇರಿ) ಸಮೂಹಗಾಯನದಲ್ಲಿ ಮಹಾಪ್ರಾರ್ಥನೆ - Mega Invocation! (ಇದರ ರಿಹರ್ಸಲ್‌ಗಳು ಉಷಾ ಚಾರ್‌ ನಿರ್ದೇಶನದಲ್ಲಿ ಈಗ ನಡೆಯುತ್ತಿವೆ. ಭಾಗವಹಿಸಲಿಚ್ಛಿಸುವವರು ಅವರನ್ನು ಈಮೈಲ್‌ ushachar@verizon.net ಅಥವಾ ಫೋನ್‌ 301-570-3609 ಮೂಲಕ ಸಂಪರ್ಕಿಸಬಹುದು)

ಶನಿವಾರ ಸೆಪ್ಟೆಂಬರ್‌ 2 ಮತ್ತು ಭಾನುವಾರ ಸೆಪ್ಟೆಂಬರ್‌ 3ರಂದು ಮುಖ್ಯವೇದಿಕೆಯ ಮೇಲೆ ಕೆಲವು ಮತ್ತು ಸಮಾಂತರ ವೇದಿಕೆಗಳಲ್ಲಿ ಕೆಲವು ಹೀಗೆ ವಿವಿಧ ಸಂಗೀತಕಾರ್ಯಕ್ರಮಗಳ ಆಯೋಜನೆಯಾಗಿದೆ.
Vidyabhushan
  • ವಿದ್ಯಾಭೂಷಣ ಅವರಿಂದ ಕರ್ನಾಟಕ ಶಾಸ್ತ್ರೀಯ ಹಾಡುಗಾರಿಕೆ
  • ನಾಗವಲ್ಲಿ ನಾಗರಾಜ್‌ ಅವರಿಂದ ಕರ್ನಾಟಕ ಶಾಸ್ತ್ರೀಯ ಗಾಯನ
  • ಕರ್ನಾಟಕ ಶಾಸ್ತ್ರೀಯ ವೀಣಾ ವಾದನ : ಡಿ. ಬಾಲಕೃಷ್ಣ ಅವರಿಂದ (ಇವರು ಖ್ಯಾತ ವೈಣಿಕ ದೊರೆಸ್ವಾಮಿ ಐಯಂಗಾರ್‌ ಅವರ ಪುತ್ರ)
  • ಪ್ರವೀಣ್‌ ಗೋಡ್‌ಖಿಂಡಿ ಅವರಿಂದ ಹಿಂದುಸ್ಥಾನಿ ಶೈಲಿಯಲ್ಲಿ ವೇಣುಗಾನ ಕಛೇರಿ
  • ನಾಗರಾಜ್‌ ಹವಾಲ್ದಾರ್‌ ಮತ್ತು ಓಂಕಾರ್‌ ಹವಾಲ್ದಾರ್‌ ಅವರಿಂದ ಹಿಂದುಸ್ತಾನಿ ಶಾಸ್ತ್ರೀಯ ಗಾಯನ
  • ಎಂಡಿ.ಪಲ್ಲವಿ ಅವರಿಂದ ಲಘುಶಾಸ್ತ್ರೀಯ ಗಾಯನ
  • ಬದರಿಪ್ರಸಾದ್‌ ಅವರ ಲಘುಶಾಸ್ತ್ರೀಯ ಸಂಗೀತ ಕಾರ್ಯಕ್ರಮ
  • ಚಂದ್ರಿಕಾ ಗುರುರಾಜ್‌ ಅವರಿಂದ ಲಘುಶಾಸ್ತ್ರೀಯ ಸಂಗೀತ
  • ಶೇಷಗಿರಿ ದಾಸ್‌ ಅವರಿಂದ ಲಘುಶಾಸ್ತ್ರೀಯ ಸಂಗೀತ
ಅಷ್ಟೇ ಅಲ್ಲದೆ ‘ಪುರಂದರ ಮಂಟಪ’ ಎಂಬ ಪ್ರತ್ಯೇಕ ಸಭಾಗೃಹದಲ್ಲಿ ಆ ಎರಡು ದಿನಗಳಲ್ಲೂ ಶಾಸ್ತ್ರೀಯ ಮತ್ತು ಲಘುಶಾಸ್ತ್ರೀಯ ಸಂಗೀತಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳೇ (ಸಂಗೀತ ಕಛೇರಿಗಳು, ಕಾರ್ಯಾಗಾರಗಳು, ತರಬೇತಿ ತರಗತಿಗಳು, ಸ್ಪರ್ಧೆಗಳು ಇತ್ಯಾದಿ) ಇರುತ್ತವೆ. ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವವರು ಸಮ್ಮೇಳನಕ್ಕೆ ನೋಂದಣಿ ಮಾಡಿಕೊಂಡಿರಬೇಕು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಆಕರ್ಷಕ ಬಹುಮಾನಗಳಿವೆ.

User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
IPL, Feroz Shah Kotla, Delhi
Royal Challengers Bangalore: 79 / 1, 10 Overs
1st Test , Lord's Cricket Ground, St John's Wood
West Indies: 142 / 4, 57.3 Overs
IPL, Himachal Pradesh Cricket Association Stadium, Dharmasala
Kings XI Punjab won by 6 wickets
Follow Oneindia Kannada on Twitter
Oneindia Kannada Facebook fan page
Write Comments on this Article