•  

ವಿಶ್ವ ಕನ್ನಡ ಜಾತ್ರೆಯಲ್ಲಿ ವರ್ಣಮಯ ಮೆರವಣಿಗೆ

ಬುಧವಾರ, ಏಪ್ರಿಲ್ 5, 2006, 16:50 [IST]
ಸಮ್ಮೇಳನದ ಒಂದು ಪ್ರಮುಖ ಆಕರ್ಷಣೆಯಾಗಿ, ಕರ್ನಾಟಕದ ಎಲ್ಲ ಜಿಲ್ಲೆಗಳನ್ನು ಪ್ರತಿನಿಧಿಸುವ ಮೆರವಣಿಗೆ ಈ ವರ್ಷ ಸಮ್ಮೇಳನದ ಆಕರ್ಷಣೆ. ಈಗಾಗಲೇ, ರಂಗುರಂಗಿನ ಭವ್ಯ ಮೆರವಣಿಗೆಗೆ ಸಿದ್ಧತೆಗಳು ನಡೆದಿವೆ. ಉತ್ತರ ಅಮೆರಿಕದಾದ್ಯಂತದ ವಿವಿಧ ಕನ್ನಡ ಕೂಟಗಳು ವಿವಿಧ ಜಿಲ್ಲೆಗಳನ್ನು ಪ್ರತಿನಿಧಿಸಲು ಆಸಕ್ತಿ ತೋರಿದ್ದು ಇದೊಂದು ಅಭೂತಪೂರ್ವ ದೃಶ್ಯವೈಭವವಾಗಲಿದೆ.

ಮೆರವಣಿಗೆಯಲ್ಲಿ ನಿಮ್ಮ ಜಿಲ್ಲೆ ಹೆಚ್ಚು ‘ಮಿಂಚಿಂಗ್‌’ ಆಗಬೇಕು ಎಂಬುದು ಸಹಜವಾಗಿಯೇ ನಿಮ್ಮ ಅಪೇಕ್ಷೆಯಲ್ಲವೆ? ನಿಮ್ಮ ಜಿಲ್ಲೆಯನ್ನು ಪ್ರತಿನಿಧಿಸುವ ಕನ್ನಡಕೂಟವು ನಿಮ್ಮೂರಿನದಲ್ಲದಿದ್ದರೂ ನಿಮ್ಮ ಜಿಲ್ಲೆಯನ್ನು ಪ್ರಾಯೋಜಿಸುವ ಮೂಲಕ ಮೆರವಣಿಗೆಯಲ್ಲಿ ನಿಮ್ಮ ಅಭಿಮಾನದ ಪಾಲ್ಗೊಳ್ಳುವಿಕೆಗೆ ಅವಕಾಶವಿದೆ.

ಜಿಲ್ಲಾವಾರು ಪಟ್ಟಿಯಲ್ಲಿ ಎಲ್ಲ ಪ್ರಾಯೋಜಕರ ಹೆಸರು ಮತ್ತು ಸ್ವಂತಊರುಗಳ ಹೆಸರನ್ನು ಸಮ್ಮೇಳನದ ವೆಬ್‌ಸೈಟ್‌ನಲ್ಲಿ ಮತ್ತು ಸಭಾಂಗಣದ ಫಲಕದಲ್ಲಿ ಪ್ರಕಟಿಸಲಾಗುವುದು. ಇನ್ನೇಕೆ ತಡ, 100ಡಾಲರ್‌ ದೇಣಿಗೆಯ ಮೂಲಕ ನಿಮ್ಮ ಜಿಲ್ಲೆಯನ್ನು ಇಂದೇ ಪ್ರಾಯೋಜಿಸುವೆನೆನ್ನಿ, ಕನ್ನಡತೇರನೆಳೆಯೋಣ ಬನ್ನಿ!

ವಿವರಗಳಿಗೆ ಸಂಪರ್ಕಿಸಿ :

ಸವಿತಾ ರಾವ್‌: 301-502-8012; kurchi123@yahoo.com
ನಾಗರಾಜ ರೆಡ್ಡಿ: 443-745-3172; nmreddi@msn.com
ಹರಿದಾಸ್‌ಲಹರಿ: 703-362-5175; Laharidas@hotmail.com



ಮುಖಪುಟ
/ ಎನ್‌ಆರ್‌ಐ


User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
IPL, Feroz Shah Kotla, Delhi
Royal Challengers Bangalore: 67 / 1, 9.2 Overs
1st Test , Lord's Cricket Ground, St John's Wood
West Indies: 146 / 4, 58.1 Overs
IPL, Himachal Pradesh Cricket Association Stadium, Dharmasala
Kings XI Punjab won by 6 wickets
Follow Oneindia Kannada on Twitter
Oneindia Kannada Facebook fan page
Write Comments on this Article