•  

ಜೆಎಸ್‌ಎಸ್‌/ ಜೆಸಿಇ ಹಳೆ ವಿದ್ಯಾರ್ಥಿಗಳ ಸಮ್ಮಿಲನ

ಬುಧವಾರ, ಏಪ್ರಿಲ್ 5, 2006, 16:50 [IST]
ಭಾರತದಾದ್ಯಂತ ಸುಮಾರು 270ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿರುವ ಮೈಸೂರಿನ ಜೆಎಸ್‌ಎಸ್‌ ಮಹಾವಿದ್ಯಾಪೀಠವು, ಆ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದು ಈಗ ದೇಶವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ನಾಲ್ಕನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸುವಂತೆ ವಿಶೇಷವಾಗಿ ಆಮಂತ್ರಿಸಿದೆ.

ಈಬಾರಿಯ ಸಮ್ಮೇಳನದಲ್ಲಿ ಜೆಎಸ್‌ಎಸ್‌/ ಜೆಸಿಇ ಹಳೆವಿದ್ಯಾರ್ಥಿಗಳದೇ ಒಂದು ವಿಶೇಷ ಅಧಿವೇಶನ ನಡೆಯಲಿದ್ದು, ಹಳೆಯ ಸ್ನೇಹಿತರು ಮತ್ತು ಸಹಪಾಠಿಗಳನ್ನು ಭೇಟಿಯಾಗಲು, ವಿದ್ಯಾರ್ಥಿದಿನಗಳ ನೆನಪುಗಳನ್ನು ತಾಜಾಗೊಳಿಸಲು, ಜೆಎಸ್‌ಎಸ್‌ ವಿದ್ಯಾಪೀಠವು ಶೈಕ್ಷಣಿಕ/ಸಾಮಾಜಿಕ ರಂಗಗಳಲ್ಲಿ ಸಾಧಿಸಿರುವ ಪ್ರಗತಿಪರ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ಇದೊಂದು ಸುವರ್ಣಾವಕಾಶ.

JSS Education Institutionsಇಷ್ಟೇ ಅಲ್ಲದೆ ಮೇರಿಲ್ಯಾಂಡ್‌ ಸಂಸ್ಥಾನದ ಗೈಥರ್ಸ್‌ಬರ್ಗ್‌ನಲ್ಲಿ Spritiual Mission ಸ್ಥಾಪನೆಯಾಗಿದ್ದು ಉತ್ತರ ಅಮೆರಿಕದಲ್ಲಿರುವ ಜೆಎಸ್‌ಎಸ್‌ ಹಳೆವಿದ್ಯಾರ್ಥಿಗಳಿಗೆ ಆಧ್ಯಾತ್ಮಿಕ, ಯೋಗ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಸ್ನೇಹಸಂಪರ್ಕದ ಕೇಂದ್ರವಾಗಿ ಇದು ಹೊರಹೊಮ್ಮಲಿದೆಯೆಂದು ಮಹಾವಿದ್ಯಾಪೀಠದ ಪ್ರಕಟಣೆ ತಿಳಿಸಿದೆ.

* ವಿವರಗಳಿಗೆ ಸಂಪರ್ಕಿಸಿ:

ಕುಮಾರ್‌ ರಾಜಶೇಖರ್‌ :
kumar@jssmission.org or jss@jssmission.org
* www.jssmission.org



ಮುಖಪುಟ
/ ಎನ್‌ಆರ್‌ಐ


User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
IPL, Feroz Shah Kotla, Delhi
Royal Challengers Bangalore: 66 / 1, 9 Overs
1st Test , Lord's Cricket Ground, St John's Wood
West Indies: 149 / 4, 59.5 Overs
IPL, Himachal Pradesh Cricket Association Stadium, Dharmasala
Kings XI Punjab won by 6 wickets
Follow Oneindia Kannada on Twitter
Oneindia Kannada Facebook fan page
Write Comments on this Article