ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಾಲ್ ಫಾಲ್ ಕಲರ್ ಫಾಲ್!

By Staff
|
Google Oneindia Kannada News

Wonderful nature : Fall colors in America
ಮಗುವಿನ ಮನಸ್ಸಿನಂಥಾ ಸೊಗಸು ಪ್ರಕೃತಿಯ ಸೊಬಗು. ಅಮೆರಿಕದಲ್ಲಿ ಶರತ್ಕಾಲ ಬಂತೆಂದರೆ ಪ್ರಕೃತಿಯ ರಂಗಿನಾಟಕ್ಕೆ ಗಿಡಮರಗಳೆಲ್ಲ ಮಳೆಕಂಡ ನವಿಲಿನಂತೆ ನಲಿದಾಡಲು ಪ್ರಾರಂಭಿಸುತ್ತದೆ. ಬಣ್ಣದ ಚೆಲುವು ಕಂಡ ಅಮೆರಿಕಾ ಪ್ರವಾಸ ಮಾಡುತ್ತಿರುವ ಕುಂದಾಪುರದ ವಕೀಲ ಹೆಬ್ಬಾರ್ ಅವರ ಲೇಖನಿಯಿಂದ ಚೆಂದದ ಕವನವೊಂದು ತಾನಾಗೇ ಹರಿದುಬಂದಿದೆ.

* ಎ.ಎಸ್.ಎನ್.ಹೆಬ್ಬಾರ್, ಬ್ರಿಡ್ಜ್ ವಾಟರ್, ನ್ಯೂಜೆರ್ಸಿ

ಯಾರು ಎರಚಿದರು ಇಷ್ಟು
ಅರಸಿನವ, ಕುಂಕುಮವ
ಅಮೆರಿಕದ ಮರಗಳ ಮೇಲೆ?
ಹಸಿರುಡುಗೆ ಉಟ್ಟ ಈ ಇಳೆಯ ಮೇಲೆ?
ಹರಿದ್ರಾಕುಂಕುಮ ಶೋಭಿತೆ
ಈ ಅಮೇರಿಕಾದ ವನಿತೆ
ಈಗ ರಾಗರಂಜಿತೆ.

ಚಿಗುರೆಲೆಯ ತಾಂಬೂಲ ತಿಂದ
ತುಟಿಗಳ ಕೆಂಪು ಬಣ್ಣ
ಎಲೆಗಳ ಅಂಚಿನಲ್ಲೆಲ್ಲ
ತಾಮ್ರವರ್ಣ!
ಲಜ್ಜೆ ಬಂದಂತಾಗಿ
ಕೆಂಪಾಗಿಹುದು ಗಲ್ಲ-
ಫಾಲ್ ಕಲರುಗಳಲ್ಲೀಗ
ಇಲ್ಲಿ ರಂಗುರಂಗಿನ ರಸಗುಲ್ಲ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X