•  

ತೇನವಿನಾ

ಬುಧವಾರ, ಏಪ್ರಿಲ್ 5, 2006, 16:50 [IST]
ಅಂತರಂಗದ ಅಭಿಸಾರಿಕೆಯ ಸಾಂಗತ್ಯದಲಿ
ಅನುರಕ್ತನಾಗಿ ಬಂದ ಗೆಳೆಯನನ್ನು
ನೀ ಯಾರೆಂದು ಪ್ರಶ್ನಿಸುವಾಗ
ಕಣ್ಣ ಕನ್ನಡಿಯಲ್ಲಿ ಪ್ರತಿಬಿಂಬಿಸದೆ
ಅನುರಾಗದ ಕುರುಹು?

ನಸುಕಿನಲಿ ನಿನ್ನ ನಸುನಗುವಿನ
ಮೊಗದ ನೆನಪೇ ಆತ್ಮಸ್ನಾನ;
ದಿನದ ಕ್ಷಣಕ್ಷಣವು
ವಿರಹರವಿಯ ತಾಪದಿ ಬೆಂದು
ಮುಸ್ಸಂಜೆ ನಿನ್ನ ಮುಗುಳ್ನಗೆಗಾಗಿ ಅರಸುತ್ತ
ನಿಶೆಯಲ್ಲಿ ನನ್ನ ಅಪೂರ್ಣ ಅಸ್ತಿತ್ವ
ಕರಗಿ ಶೂನ್ಯವಾಗುವ ಮುನ್ನ
ನನ್ನಲ್ಲಿಳಿಯದ ಪ್ರೀತಿಯ ಸೆಲೆಗೆ
ನೆಲೆಯಾಗಿ ಬರಲಾರೆಯಾ?
ಸಂಭ್ರಮ ಸಮಾಗಮ ಸಂಕ್ರಮಣದ
ಕನಸು-ನನಸುಗಳ ನಡುವಿನಂತರವಾಗಿ
ಹೀಗೆ ಉಳಿಯುವೆಯಾ?

ಪ್ರೇಮಸ್ಪರ್ಶದ ಯಾಚನೆಯಲಿ
ಇನಿಯಳ ಸನಿಹವನು ಕೋರುವ,
ಆಲಿಂಗನದ ಅಮೃತಧಾರೆಯಲಿ
ಕರಗಿ ಹೋಗಲು ತವಕಿಸುವ
ಈ ತಪ್ತ ಹೃದಯದ
ಸುಪ್ತ ಭಾವನೆಗಳ ತಿಳಿಸುವುದೆಂತು?
ಈಗೇಕೆ, ಹೀಗೇಕೆ ಎಂಬೆಲ್ಲ
ಸಂದಿಗ್ಧ ಪ್ರಶ್ನೆಗಳ ಮೀರಿ ಬರುತಿರುವ
ಭಾವಪ್ರವಾಹದ ಅಲೆಗಳಿಗೆ ಸಿಕ್ಕಿ
ಅರೆಘಳಿಗೆ ನಿನ್ನಿರಿವ ಕಾಣದೆ ಮರುಗುವ ಎನಗೆ
ರಮಣ-ಮರಣಗಳ ನಡುವಿನಂತರ
ನೀನೆಂದು ಅರಿಯೆಯಾ?

ಅರ್ಥವಾಗದ ತುಡಿತ-ತುಮುಲ ತಾಳಲಾರದೆ
ಎದೆಯಿಂದುಕ್ಕಿ ಬಂದ ಕಣ್ಣಂಚಿನ
ಹನಿಯೊಂದು ಉಸುರುತಿದೆ -
ಕಾಲದಲಿ ಕರಗಿ ಹೊಗುವ ನಾನು-ನೀನುಗಳ ನಡುವೆ
ಭಾವವೊಂದೇ ನಿತ್ಯ, ಪ್ರೇಮವೊಂದೇ ಸತ್ಯ!

User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
IPL, Feroz Shah Kotla, Delhi
Royal Challengers Bangalore: 51 / 1, 6.6 Overs
1st Test , Lord's Cricket Ground, St John's Wood
West Indies: 146 / 4, 58.1 Overs
IPL, Himachal Pradesh Cricket Association Stadium, Dharmasala
Kings XI Punjab won by 6 wickets
Follow Oneindia Kannada on Twitter
Oneindia Kannada Facebook fan page
Write Comments on this Article