[an error occurred while processing this directive][an error occurred while processing this directive][an error occurred while processing this directive]
 ಮುಖಪುಟ  »  ಎನ್ಆರ್ಐ »  ಕವನ ಸಿಂಚನ

ಕಾಣಿಸಲಿಲ್ಲ ಥಾರ್‌ ರಾಣಿ ಈ ಬಾರಿ
ಗುರುವಾರ, ಜನವರಿ 1, 1970 Hrs (IST)      ನಮ್ಮ "ಸುದ್ದಿಸಾರಂಗಿಗೆ" ಚಂದಾದಾರರಾಗಿ     ಸಿಟಿಜನ್ ಜರ್ನಲಿಸಂ   



ಕಾಣಿಸಲಿಲ್ಲ ಥಾರ್‌ ರಾಣಿ ಈ ಬಾರಿ
Ravi Krishnareddyಸಾಗರಖಂಡದಂಚಿನ ಆ ಮರಳುಗಾಡಿನಲ್ಲೆಲ್ಲೊ
ಅರ್ಥಮೂಲದ ಒಮ್ಮುಖ ಸಮರ ದಾಳಿ,
ಬಾಲನೊಬ್ಬನ ಊರುಭಂಗ, ಊರೂ ಬಲಿ!
ಅದ ಕೇಳಿ ಇತ್ತ ಮೇಕಪ್ಪಿನ ಕಣ್ಣೀರಿಟ್ಟಳೊ
ಟಿ.ವಿ.ಯಲ್ಲಿ ಥಾರ್‌ ಮರುಭೂಮಿಯ ರಾಣಿ.

ನರಳಿದವರಿಲ್ಲೆಷ್ಟೊ? ಬರದ ಮರುಭೂಮಿಯಲ್ಲಿ ಬೆಂದು
ತಮ್ಮವರಿಗಾಗಿಯೇ ನಿಜವಾಗಲೂ ಅತ್ತ ರುಡಾಲಿಗಳೆಷ್ಟೊ ?
ಇನ್ನೂ ಇವಳ ಮಾವನ ತೊತ್ತಾಗಿರುವವರಿನ್ನೆಷ್ಟೊ ?
ತನ್ನವರಿಗಾಗಿ ಅಳದ, ಪರಕರುಣೆಯ ಠೀವಿ ಎಲ್ಲೆಲ್ಲಾ !
ಕೃತಕ ಕಾಲು ಕಳಿಸುವಳಂತೆ, ಕಲಿಯುಗ ಕರ್ಣೆ !

ಮೊನ್ನೆ ಅವಳದೇ ನಾಡಿನ ಆಗ್ನೇಯದ ಕುಂಭಕೋಣಂನಲ್ಲಿ
ಲಾಭಾತುರದ ಅಯೋಗ್ಯ ವಂಚಕರ ಪ್ರಮಾದ.
ಹುಲ್ಲು ತೆಂಗಿನಗರಿಗಳ ಖಾಸಗಿ ಶಾಲೆಯಂತೆ !
ಕೈಪಿಡಿಯಬೇಕಾದ ಗುರು ಕೈಬಿಡಲ್‌ ಹರ ಕಾಯ್ವನೇ?
ಕರ್ತವ್ಯದಹನದ ಅಗ್ನಿಗೆ ಶತಬಾಲರ ಮೇಧ,; : .

ಸದ್ಯದ ಅಗತ್ಯ- ಬೆಂದೋದದೇಹಕ್ಕೆ ಮೊಲೆಹಾಲುಣಿಸಿದ
ಒಡಲಿಗೆ ನಿಟ್ಟುಸಿರ ಸಾಂತ್ವನ, ಹನಿ ಕಣ್ಣೀರು;
ಬದುಕುಳಿದ ಬೆಂದಚರ್ಮಕ್ಕೆ ಪ್ಲಾಸ್ಟಿಕ್‌ಸರ್ಜರಿ.
ಕಾಣಿಸಲಿಲ್ಲ ಥಾರ್‌ ರಾಣಿ ಈ ಬಾರಿ, ಕಾಣಿಸುವುದೂ
ಇಲ್ಲ ಎದೆಯಲ್ಲಿ ದ್ರವಸ್ರವಿಸದ ಡಂಬಕನರಿ.
ಅವಳ ಠೀ(ಟೀ)ವಿ ಮೆರೆಸುವವರೂ ಡಂಬಕರೇ ಸರಿ.




ಮುಖಪುಟ / ಎನ್‌ಆರ್‌ಐ



User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
Oneindia  Oneindia Login


 [an error occurred while processing this directive]
[an error occurred while processing this directive]