[an error occurred while processing this directive][an error occurred while processing this directive][an error occurred while processing this directive]
ರಾಜಕೀಯ ಮುತ್ಸದ್ಧಿಯೂ ಕವಿಯೂ ಆದ ಭಾರತದ ಪ್ರಧಾನಿ ವಾಜಪೇಯಿ ನ್ಯೂಯಾಕ್‌ನಲ್ಲಿನ ಭಾರತೀಯ ಸಾಹಿತ್ಯ ಸಮ್ಮೇಳನದ ಕೇಂದ್ರಬಿಂದು. ಸಾಹಿತ್ಯ ಸಮ್ಮೇಳನಕ್ಕೆ ಮುನ್ನವಷ್ಟೇ ಪಾಕಿಸ್ತಾನದ ಅಧ್ಯಕ್ಷ ಮುಷರ್ರಫ್ ಅವರೊಂದಿಗೆ ಮಾತಿನ ಕಿಡಿಗಳನ್ನು ವಿನಿಮಯ ಮಾಡಿಕೊಂಡಿದ್ದ ವಾಜಪೇಯಿ, ಸಾಹಿತ್ಯ ಸಮ್ಮೇಳನದಲ್ಲಿ ಮಾತ್ರ ಹದಿನಾರಾಣೆ ಕವಿ. ಎಲ್ಲ ವೇದಿಕೆಗಳಿಗೂ ಹೊಂದಿಕೊಳ್ಳಬಲ್ಲ ವಾಜಪೇಯಿ ಸಮ್ಮೇಳನದಲ್ಲಿ ಮಿಂಚಿದ ಸಂದರ್ಭದಲ್ಲಿ ವಾಜಪೇಯಿ ಅವರ ಸ್ಥಿತಿಗತಿ ಹಾಗೂ ವ್ಯಕ್ತಿತ್ವಗಳ ಚಿತ್ರಿಸುವ ಇಲ್ಲಿನ ‘ಭರತಖಂಡ ಪ್ರಧಾನ ’ ಕವಿತೆ ಎಷ್ಟೊಂದು ಮಾರ್ಮಿಕವಾಗಿದೆ, ನೀವೇ ಓದಿ.