ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಮಾನ್ ಜನಪ್ರಿಯ ಪ್ರವಾಸಿ ತಾಣ ಬಿಮ್ಮ ಸಿಂಕ್ ಹೋಲ್

By ಪಿಎಸ್ ರಂಗನಾಥ್, ಒಮನ್
|
Google Oneindia Kannada News

ಒಮಾನ್ ನಲ್ಲಿ ನಿಸರ್ಗ ನಿರ್ಮಿತ ಪ್ರವಾಸಿ ತಾಣಗಳಿಗೆ ಕೊರತೆ ಏನು ಇಲ್ಲ. ಪಕ್ಕದ ದುಬೈನಲ್ಲಿ ಮಾನವ ನಿರ್ಮಿತ ಪ್ರವಾಸಿ ತಾಣಗಳಿದ್ದರೆ, ಒಮಾನ್ ನಲ್ಲಿ ನೋಡೋದಿಕ್ಕೆ ನೈಸರ್ಗಿಕ ಪ್ರದೇಶಗಳು ಹಲವಾರು ಇವೆ. ಇವುಗಳಲ್ಲಿ ಬಹು ಪ್ರಸಿದ್ದವಾದ ಒಂದು ತಾಣ "ಬಿಮ್ಮ ಸಿಂಕ್ ಹೋಲ್". ಮಸ್ಕತ್ ನಿಂದ ಸೂರ್ ರಸ್ತೆಯಲ್ಲಿ ಕುರಿಯತ್ ಮಾರ್ಗವಾಗಿ ಸುಮಾರು 130 ಕಿ.ಮೀ. ದೂರ ಪ್ರಯಾಣಿಸಿದರೆ, "ಬಿಮ್ಮ ಸಿಂಕ್ ಹೋಲ್" ಸೂಚನಾ ಫಲಕ ಕಾಣಿಸುತ್ತೆ, ಆ ಮಾರ್ಗವಾಗಿ ಸಂಚರಿಸಿದರೆ ದಿಬಾಬ್ ಮತ್ತು ಹವಿಯತ್ ನಜ್ಮ್ ಪಾರ್ಕ್ ಸೂಚನಾ ಫಲಕ ಕಾಣಿಸುತ್ತೆ.

ಪಾರ್ಕ್ ಒಳಗೆ ಸ್ವಲ್ಪ ನಡೆದು ಹೋದರೆ ಸುತ್ತಲೂ ಸಮತಟ್ಟವಾದ ಭೂಮಿ ಅದರ ಮಧ್ಯದಲ್ಲಿ ದೊಡ್ಡ ಬಾವಿಯ ಹಾಗೆ ಕಾಣಿಸುವ ಸುಮಾರು 40 ಮೀಟರ್ ಅಗಲ ಮತ್ತು 20 ಮೀಟರ್ ಆಳವಿರುವ ಅತಿ ಸುಂದರ ನೀರಿನ ಹೊಂಡ ಕಾಣಿಸುತ್ತೆ. ನೀಲಿ ಬಣ್ಣದ ನೀರು, ಸ್ವಲ್ಪ ಹಸಿರು ಮಿಶ್ರಿತ ಹಾಗೂ ಕಡು ನೀಲಿ ಪದರದಂತೆ ಕಾಣುವ ನೀರು ಬಹಳ ಆಕರ್ಷಕ ವಾಗಿದೆ. ಗಲ್ಫ್ ಕಡಲ ತೀರದಿಂದ ಸುಮೂರು 500 ಮೀಟರ್ ದೂರದಲ್ಲಿ ಇರುವುದರಿಂದ, ಸಮುದ್ರದ ಉಪ್ಪು ನೀರು ಹಾಗು ಅಂತರ್ಜಲ ಎರಡು ಮಿಶ್ರಿತ ಆಗಿರುವುದರಿಂದ ನೀರು ತುಂಬಾ ಆಕರ್ಷಕ ಬಣ್ಣ ದಲ್ಲಿ ಕಾಣುತ್ತೆ.

ದುಡ್ಡು ಕೊಡದೆ ಫಿಶ್ ತೆರಪಿ ಮಾಡಿಸಿಕೊಳ್ಳಿ

ದುಡ್ಡು ಕೊಡದೆ ಫಿಶ್ ತೆರಪಿ ಮಾಡಿಸಿಕೊಳ್ಳಿ

ಜನ ಈ ನೀರಿನಲ್ಲಿ ಈಜಿ ಆಟವಾಡುತ್ತಾರೆ, ಕೆಲವರು ನೀರಿನಲ್ಲಿ ಕಾಲಿಟ್ಟು ಸಣ್ಣ ಸಣ್ಣ ಮೀನಿನಿಂದ ಕಾಲ್ಬೆರಳುಗಳನ್ನು ಕಚ್ಚಿಸಿಕೊಳ್ಳುತ್ತಾರೆ, ಇದು ಒಂಥರಾ ದುಡ್ಡು ಕೊಡದೆ ಫಿಶ್ ತೆರಪಿ ಮಾಡಿಸಿ ಕೊಂಡ ಹಾಗಿರುತ್ತೆ.

ಸುಂದರ ಸಂಜೆ ಕಳೆಯಲು ಹೇಳಿ ಮಾಡಿಸಿದ ತಾಣ

ಸುಂದರ ಸಂಜೆ ಕಳೆಯಲು ಹೇಳಿ ಮಾಡಿಸಿದ ತಾಣ

ಸಿಂಕ್ ಹೋಲ್ ನ ಒಳಗೆ ಇಳಿಯಲು ಮೆಟ್ಟಿಲುಗಳನ್ನು ಮಾಡಲಾಗಿದೆ. ಮೇಲೆ ಸುರಕ್ಷತೆಗಾಗಿ 4 ಅಡಿಯ ರಕ್ಷಣಾ ಗೋಡೆ ಇದೆ. ಸುಸಜ್ಜಿತ ಶೌಚಾಲಯ ಸಹಿತ ಉದ್ಯಾನವನ, ಹತ್ತಿರದಲ್ಲಿ ಸುಂದರ ಸಮುದ್ರ ತೀರ, ಒಟ್ಟಿನಲ್ಲಿ ಸುಂದರ ಸಂಜೆ ಕಳೆಯಲು ಹೇಳಿ ಮಾಡಿಸಿದ ಜಾಗವಿದು.

ಯುರೋಪಿಯನ್ನರ ನೆಚ್ಚಿನ ಪ್ರವಾಸಿ ತಾಣ

ಯುರೋಪಿಯನ್ನರ ನೆಚ್ಚಿನ ಪ್ರವಾಸಿ ತಾಣ

ಬಹುತೇಕ ವಿದೇಶಿ ಪ್ರವಾಸಿಗರು ಅದರಲ್ಲೂ ಯುರೋಪಿಯನ್ನರು ಇಲ್ಲಿಗೆ ಅತಿ ಹೆಚ್ಚು ಭೇಟಿ ಕೊಡುತ್ತಾರೆ, ಇಲ್ಲಿನ ನಗರ ಪಾಲಿಕೆಯವರು ಒಂದು ವಿಹಾರಕ್ಕಾಗಿ ಉದ್ಯಾನ ಮಾಡಿದ್ದಾರೆ. ಒಮಾನಿಗಳು ಇಲ್ಲಿ ಬಾರ್ಬೆಕ್ಯೂ ಮಾಡಿ ಸಮಯ ಕಳೆಯುತ್ತಾರೆ.

ಕೆಲಸದ ದಣಿವಾರಿಸಿಕೊಳ್ಳಲು ಪ್ರಶಸ್ತ ಸ್ಥಳ

ಕೆಲಸದ ದಣಿವಾರಿಸಿಕೊಳ್ಳಲು ಪ್ರಶಸ್ತ ಸ್ಥಳ

ವಾರ ಪೂರ್ತಿ ಕೆಲಸದ ದಣಿವನ್ನು ನಿವಾರಿಸುಕೊಳ್ಳುವುದಕ್ಕೆ ಒಂದು ದಿನದ ಹೊರ ಸಂಚಾರವನ್ನು ಯೋಜಿಸಿದಲ್ಲಿ, ಹತ್ತಿರದಲ್ಲಿ ವಾದಿ ಶಾಬ್, ವಾದಿ ತಿವಿ ಸ್ಥಳಗಳಿದ್ದು, ಮಾರ್ಗ ಮಧ್ಯದಲ್ಲಿ ಸಿಂಕ್ ಹೋಲ್ ಗೆ ಭೇಟಿ ನೀಡುವ ಯೋಜನೆ ಹಾಕಿ ಕೊಂಡರೆ ಒಂದು ದಿನದ ಪ್ರವಾಸ ಮನಕ್ಕೆ ಮುದ ನೀಡುವುದರಲ್ಲಿ ಸಂಶಯವಿಲ್ಲ.

ಗೂಗಲ್ ಮ್ಯಾಪ್ ನಿಂದ ಕಾಣುವ ಚಿತ್ರಣ

ಗೂಗಲ್ ಮ್ಯಾಪ್ ನಿಂದ ಕಾಣುವ ಚಿತ್ರಣ

ಸ್ಥಳೀಯರ ಪ್ರಕಾರ ಉಲ್ಕೆಯೊಂದು ಬಿದ್ದು ಇಂತಹ ದೊಡ್ಡ ಹೊಂಡ ನಿರ್ಮಾಣವಾಗಿದೆ ಎಂದುಹೇಳುತ್ತಾರೆ. ಕೆಲವರು ಚಂದ್ರನ ಒಂದು ತುಂಡು ಬಿದ್ದು ಹೀಗೆ ಆಗಿದೆ ಎನ್ನುತ್ತಾರೆ. ಆದರೆ ಭೂಗರ್ಭ ಶಾಸ್ತ್ರಜ್ಞರ ಪ್ರಕಾರ ಇಲ್ಲಿರುವ ಅತಿ ಹೆಚ್ಚು ಸುಣ್ಣದಕಲ್ಲುಗಳು ಸವೆದು ಸವೆದು ನೆಲದ ಪದರ ಜರುಗಿ ಭೂಮಿ ಕುಸಿದಿರಬಹುದೆಂದು ಅಂದಾಜಿಸಿದ್ದಾರೆ.

ಒಮಾನ್ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸೇರ್ಪಡೆ

ಒಮಾನ್ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸೇರ್ಪಡೆ

ಪ್ರಪಂಚದ ಕೆಲವೇ ಕೆಲವು ಇಂತಹ ಸಿಂಕ್ ಹೋಲ್ ಗಳಲ್ಲಿ ಒಮಾನ್ ಬಿಮ್ಮ ಸಿಂಕ್ ಹೋಲ್ ಸಹ ಇದರಲ್ಲಿ ಒಂದು ಎನ್ನುವುದು ಒಮಾನಿಗಳಿಗೆ ಹೆಮ್ಮೆಯಿದೆ. ಇದು ಅತಿ ಪುರಾತನವಾದದ್ದರಿಂದ, ಇಲ್ಲಿನ ಸರ್ಕಾರ ಇದನ್ನು ಸಂರಕ್ಷಿಸಿ, ಒಮಾನ್ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಇದನ್ನು ಸೇರಿಸಲಾಗಿದೆ.

English summary
A sinkhole, also known as a sink-hole, sink, swallow hole, shakehole, swallet or doline, is a depression or hole in the ground caused by some form of collapse of the surface layer. Bimmah Sinkhole in Oman is of of the spectacular sinkhole naturally created.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X