ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಮಣಾಂಜಲಿ ಪುರಸ್ಕಾರ : ಸ್ಪರ್ಧಿಸಿ, ಬಹುಮಾನ ಗೆಲ್ಲಿ

By ಸುರೇಶ ಎಚ್.ಸಿ., ಸಿಂಗಪುರ
|
Google Oneindia Kannada News

ರಮಣ ಮಹರ್ಷಿ ಸೆಂಟರ್ ಫಾರ್ ಲರ್ನಿಂಗ್‌ ಎಂಬ ಲಾಭರಹಿತ ವಿದ್ಯಾ ಮತ್ತು ಸಂಸ್ಕೃತಿ ಸಂಸ್ಥೆ ಭಾರತೀಯ ಸಂಸ್ಕೃತಿಗೆ ಕಳೆದ ಮೂರು ದಶಕಗಳಿಂದ ತನ್ನದೇ ಆದ ಸೇವೆ ಸಲ್ಲಿಸುತ್ತಾ ಬಂದಿದೆ. ಭಗವಾನ್ ರಮಣರ ಹಾಗೂ ಅವರ ಮೇಲಿನ ಗೀತೆಗಳನ್ನು ಹಾಡಲೆಂದೇ ಪ್ರಾರಂಭವಾದ "ರಮಣಾಂಜಲಿ" ಎಂಬ ಆರ್ಕೆಸ್ಟ್ರಾ ತಂಡ ಇದುವರೆಗೆ 2,000 ಹಾಡುಗಳ ಧ್ವನಿಮುದ್ರಣ ಮಾಡಿದೆ.

ಈ ವರ್ಷ "ಅರುಣಾಚಲ - ಒಂದು ಅದ್ಭುತ ಪರ್ವತ" ಎಂಬ ವಿಷಯಾಧಾರಿತ "ರಮಣಾಂಜಲಿ ಪುರಸ್ಕಾರಗಳು-2014" ಜಾಗತಿಕ ಮಟ್ಟದ ಸ್ಪರ್ಧೆಯನ್ನು ಆಯೋಜಿಸಿದೆ. ನೂರಕ್ಕೂ ಹೆಚ್ಚು ಪ್ರತಿಷ್ಠಿತ ಪುರಸ್ಕಾರಗಳು ಹಾಗೂ ಒಟ್ಟು ಐದು ಲಕ್ಷ ರೂಪಾಯಿಗಳ ಮೊತ್ತದ 500ಕ್ಕೂ ಹೆಚ್ಚು ಬಹುಮಾನಗಳು ನಿಮಗಾಗಿ ಕಾಯುತ್ತಿವೆ! ಎಲ್ಲಾ ಪರಿಗಣಿತ ಸ್ಪರ್ಧಿಗಳಿಗೆ ಪ್ರಶಸ್ತಿಪತ್ರ ನೀಡಲಾಗುವುದು.

ಈ ಮೊದಲು ರಮಣ ಮಹರ್ಷಿ ಸೆಂಟರ್ ಫಾರ್ ಲರ್ನಿಂಗ್‌‌ನವರು ಈ ತರಹದ ಸ್ಪರ್ಧೆಗಳನ್ನು ಸ್ಥಳೀಯ ಮಟ್ಟದಲ್ಲಿ ಏರ್ಪಡಿಸುತ್ತಿದ್ದರು. ಭಗವಾನ್ ಶ್ರೀ ರಮಣ ಮಹರ್ಷಿ ರಿಸರ್ಚ್ ಸೆಂಟರ್‌ನ ಜೊತೆಗೂಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಸ್ಪರ್ಧೆಗಳನ್ನು ನಡೆಸುತ್ತಿರುವುದು ಇದೇ ಮೊದಲು. Online ಮೂಲಕ ಸಲ್ಲಿಸಲಾದ ಎಲ್ಲಾ ಕಲಾಪ್ರತಿಭೆಗಳ ತುಣುಕುಗಳನ್ನೂ ಒಂದು ತಿಂಗಳ ಕಾಲ ರಮಣ ಮಹರ್ಷಿ ಸೆಂಟರ್ ಅವರ ಅಂತರ್ಜಾಲತಾಣದಲ್ಲಿ ಪ್ರಸಾರ (webcast) ಮಾಡಲಾಗುತ್ತದೆ.

Ramananjali Awards 2014, a global online contest

ಈ ಸ್ಪರ್ಧೆಗೆ ದಾಖಲಿಸಿ, ನೋಂದಾಯಿಸಿದ ಎಲ್ಲಾ ಕಲಾ ತುಣುಕುಗಳನ್ನೂ ಸಾರ್ವಜನಿಕರಿಂದ ಜನವರಿ 1, 2014ರಿಂದ ಜನಪ್ರಿಯ ಮತದಾನಕ್ಕೆ ಒಳಪಡಿಸಲಾಗುತ್ತದೆ. ಇಷ್ಟೇ ಅಲ್ಲ, ವಿಜೇತ ಮತ್ತಿತರ ಉತ್ತಮ ಗುಣಮಟ್ಟದ ನೋಂದಣಿಗಳನ್ನು "ಶ್ರೀ ಶಂಕರ" ದೂರದರ್ಶನದ ಧಾರಾವಾಹಿ ಕಾರ್ಯಕ್ರಮವೊಂದರಲ್ಲಿ ಬಳಸಿಕೊಳ್ಳಲಾಗುವುದು. ನಿಮ್ಮ ಪ್ರತಿಭೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾದರ ಪಡಿಸಲು ಇದಕ್ಕಿಂತ ದೊಡ್ಡ ಅವಕಾಶ ಬೇಕೆ?

ಈ ಸಾಂಸ್ಕೃತಿಕ ಹಬ್ಬದಲ್ಲಿ ಕರ್ನಾಟಕ ಸಂಗೀತ, ಸಂಗೀತವಾದ್ಯಗಳು ಮತ್ತು ವಿವಿಧ ಪ್ರಾಕಾರದ ನೃತ್ಯಗಳು, ಚಿತ್ರಕಲೆ, ಛಾಯಾಚಿತ್ರ, ಕಿರು ಚಿತ್ರ, ನಾಟಕ, ರಚನಾತ್ಮಕ ಬರವಣಿಗೆ, ಕಥೆ ಮತ್ತು ರಮಣ ಭಜನೆಗಳ ವಾಚನ ಹೀಗೆ ತಮ್ಮಲ್ಲಿರುವ ಯಾವುದೇ ರೀತಿಯ ಪ್ರತಿಭೆಯನ್ನು ಹೊರತರಲು ಎಲ್ಲಾ ವಯಸ್ಸಿನ ಪ್ರತಿಯೊಬ್ಬರಿಗೂ ಅವಕಾಶವಿದೆ. ಇದಲ್ಲದೇ ಪ್ರತಿಭಾ ಪ್ರದರ್ಶನವನ್ನು ಕನ್ನಡ, ಸಂಸ್ಕೃತ, ತಮಿಳು, ತೆಲುಗು, ಮಲಯಾಳಂ, ಹಿಂದಿ ಗುಜರಾತಿ ಮತ್ತು ಆಂಗ್ಲ ಒಟ್ಟು ಎಂಟು ಭಾಷೆಗಳಲ್ಲಿ ಮಾಡಲು ಸಾಧ್ಯ.

"ನಿಮ್ಮ ಪ್ರತಿಭೆ-ನಮ್ಮ ಹಾಡು-ನಮ್ಮ ವಿಷಯ (Theme)" ಈ ಸ್ಪರ್ಧೆಯಲ್ಲಿ ಭಾಗವಹಿಸಲು ಮತ್ತು ನಿಮ್ಮ ಕಲಾ ಕೌಶಲ್ಯದ ಧ್ವನಿ/ಕಿರುಚಿತ್ರದ ಸುರುಳಿಯನ್ನು ಸಲ್ಲಿಸಲು ಕೊನೆಯ ದಿನಾಂಕ 18ನೇ ಜನವರಿ 2014. ಸ್ಪರ್ಧೆ, ನಿಯಮ ಮತ್ತು ಬಹುಮಾನಗಳ ಬಗ್ಗೆ ಹೆಚ್ಚಿನ ವಿವರಗಳಿಗೆ events.ramanacentre.com ಅಂತರ್ಜಾಲ ತಾಣಕ್ಕೆ ಭೇಟಿ ಕೊಡಿ ಮತ್ತು ನಿಮ್ಮ ಅನುಮಾನ-ಪ್ರಶ್ನೆಗಳನ್ನು ದೂರವಾಣಿ (91-962 045 1311, ಬೆಳಿಗ್ಗೆ 11ರಿಂದ ಸಂಜೆ 8ರವರೆಗೆ) ಅಥವಾ ಇ-ಅಂಚೆಯ (ra-info.ramanacentre.com) ಮೂಲಕ ಕೇಳಿ ಬಗೆಹರಿಸಿಕೊಳ್ಳಿ.

English summary
Ramana Maharshi centre for Learning is presenting Ramananjali Awards 2014, a global online contest and festival on 'Arunachala - A Magic Mountain'. More than 500 valuable prizes will be distributed for talented people in music, dance, threatre, creative writing, arts and crafts. Last date : 18th January, 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X