ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಳ್ಳಾರಿ ಗೀತೆಗಳಲ್ಲಿ ಮೊದಲನೆಯದು ಲಂಬೋದರ

By Shami
|
Google Oneindia Kannada News

..ಲಕುಮಿಕರ. ರಾಗ ಮಲಹರಿ, ರೂಪಕತಾಳದಲ್ಲಿರುವ ಗೀತೆಯ ಸಾಹಿತ್ಯ ಸುಮಾರು ಪೂರ್ತಿ ಸಂಸ್ಕೃತವೇ ಎನ್ನಿಸುವ ಕನ್ನಡದಲ್ಲಿದೆ (ಲಕುಮಿ ಎಂಬ ತದ್ಭವವೊಂದನ್ನುಳಿದು). ಪಿಳ್ಳಾರಿ ಎಂದರೆ ಪುಟ್ಟದು ಎಂಬ ಅರ್ಥ, ಹಾಗೇ ಗಣಪತಿಗೂ ಅದೇ ಹೆಸರಿರುವುದರಿಂದ ಗಣಪತಿಯ ಸ್ತುತಿಯಾದ ಇದೇ ಮೊದಲ ಪಿಳ್ಳಾರಿಗೀತೆಯಾಗಿರುವುದು ಸೂಕ್ತವಾಗಿದೆ.

ಬಾಲಪಾಠಗಳಿಗೆ ಬಳಸುವ ಮಾಯಾಮಾಳವಗೌಳದ್ದೇ ಸ್ವರಗಳನ್ನು ಬಳಸುವ ಈ ರಾಗವನ್ನು ಹೊಸದೊಂದು ರಾಗವನ್ನು ಕಲಿಯುವ ಕೆಲಸವನ್ನೂ ಸುಲಭವಾಗಿಸುತ್ತೆ. ಸರಳ ಸಾಹಿತ್ಯ, ಒಂದು ಸ್ವರಕ್ಕೆ ಒಂದು ಅಕ್ಷರ ಸಾಹಿತ್ಯವಿದ್ದು, ಬಾಲ ಪಾಠಗಳಲ್ಲಿ ಸಾಹಿತ್ಯವಿರುವ ಮೊದಲ ಹಾಡಿದು. ಇದಕ್ಕೆ ಮುಂಚೆ ಬರೀ ಸ್ವರಗಳ ಪರಿಚಯ ಮಾಡಿಕೊಟ್ಟಿರಲಾಗುತ್ತೆ.

Learn Karnataka classic music online from Mysore Nagamani Srinath

ಶ್ರೀ ಗಣನಾಥ ಸಿಂಧೂರವರ್ಣ ಕರುಣಸಾಗರ ಕರಿವದನ
ಲಂಬೋದರ ಲಕುಮಿಕರಾ ಅಂಬಾಸುತ ಅಮರವಿನುತ ||

ಸಿದ್ಧಚಾರಣ ಗಣಸೇವಿತ ಸಿದ್ಧಿವಿನಾಯಕ ತೇ ನಮೋನಮೋ
ಲಂಬೋದರ ಲಕುಮಿಕರಾ ಅಂಬಾಸುತ ಅಮರವಿನುತ

ಸಕಲವಿದ್ಯಾ ಆದಿಪೂಜಿತ ಸರ್ವೋತ್ತಮ ತೇ ನಮೋನಮೋ
ಲಂಬೋದರ ಲಕುಮಿಕರಾ ಅಂಬಾಸುತ ಅಮರವಿನುತ ||

ಹೀಗೆ :

ಮಪ|ದಸಸರಿ || ರಿ ಸ | ದಪಮಪ|| ರಿಮ |ಪ ದ ಮ ಪ ||ದ ಪ| ಮ ಗ ರಿ ಸ ||
ಶ್ರೀ |ಗಣನಾಥ|| ಸಿಂಧೂ| ರವರ್ಣ || ಕರು |ಣ ಸಾ ಗ ರ ||ಕ ರಿ | ವ ದ ನ - ||

ಸರಿ | ಮಾಗರಿ || ಸ ರಿ | ಗರಿಸಾ || ರಿಮ | ಪ ದ ಮ ಪ || ದಪ | ಮ ಗ ರಿ ಸ ||
ಲಂ |ಬೋ ದರ ||ಲಕು | ಮಿಕರಾ || ಅಂ |ಬಾ - ಸುತ || ಅಮ |ರವಿನುತ ||

ಪ್ರೊ. ಮೈಸೂರು ನಾಗಮಣಿ ಶ್ರೀನಾಥ್ ಅವರು ಈ ಗೀತೆಯನ್ನು ಹಾಡಿ ಹೇಳಿಕೊಡುತ್ತಿರುವ ವಿಡಿಯೋ ಇಲ್ಲಿ ಕೇಳಿ.

English summary
Learn Karnataka classic music lessons online. Basics by Prof. Mysore Nagamani Srinath. Text by : Hamsanandi. Author- Purandaradasa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X