ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

40ರ ಸಂಭ್ರಮದ ಕೆಕೆಎನ್‌ಸಿಯಲ್ಲಿ 'ಕನ್ನಡೋತ್ಸವ'

By Prasad
|
Google Oneindia Kannada News

ನಲವತ್ತು ವರ್ಷ ಪೂರೈಸಿರುವ ಕನ್ನಡ ಕೂಟ ಉತ್ತರ ಕ್ಯಾಲಿಫೋರ್ನಿಯಾ(ಕೆಕೆಎನ್ ಸಿ)ದಲ್ಲಿ ಶನಿವಾರ, ಸೆಪ್ಟೆಂಬರ್ 21ರಂದು 'ಕನ್ನಡೋತ್ಸವ'ದ ಸಂಭ್ರಮ. ಈ ಸುಸಂದರ್ಭದಲ್ಲಿ ಸುಮಾರು ನೆರೆಯ 40 ರಾಜ್ಯಗಳಲ್ಲಿರುವ ಸಂಸ್ಥೆಗಳು ಕೂಡ ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು, ಹಲವಾರು ಕಲಾವಿದರು ಪ್ರತಿಭಾ ಪ್ರದರ್ಶನ ನೀಡಲಿದ್ದಾರೆ.

ಪಾಲೋ ಆಲ್ಟೋದಲ್ಲಿರುವ ಗನ್ ಹೈಸ್ಕೂಲ್ ನಲ್ಲಿ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿರುವ ಕನ್ನಡೋತ್ಸವ ಸಮಾರಂಭದಲ್ಲಿ ಭಾರತದಿಂದ ಆಗಮಿಸಿರುವ 6 ಯಕ್ಷಗಾನ ಕಲಾವಿದರು ಪ್ರಾಚೀನ ನೃತ್ಯಕಲೆಯ ರಸದೌತಣವನ್ನು ಕಲಾಪ್ರೇಮಿಗಳಿಗೆ ಬಡಿಸಲಿದ್ದಾರೆ. ನಟ, ನಿರ್ದೇಶಕ ಶ್ರೀನಾಥ್ ವಸಿಷ್ಠ ಅವರು ಅಣಕು ಗೀತೆಗಳನ್ನು ಹಾಡಿ ಅಮೆರಿಕನ್ನಡಿಗರನ್ನು ರಂಜಿಸಲಿದ್ದಾರೆ.

Kannadotsava by KKNC in America

ಇದೆಲ್ಲದರ ಜೊತೆಗೆ, ಹಲವಾರು ಸ್ಥಳೀಯ ಕಲಾವಿದರು ಹಾಡು, ನರ್ತನ, ನಾಟಕ ಮುಂತಾದ ಸಾಂಸ್ಕೃತಿ ಕಾರ್ಯಕ್ರಮ ನೀಡಲಿದ್ದಾರೆ. ಪರಿವಾರದೊಂದಿಗೆ ಬಂದು ಈ ಸಡಗರದಲ್ಲಿ ಪಾಲ್ಗೊಳ್ಳಬೇಕು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಸ್ವಾದಿಸಿ, ಸ್ವಾದಿಷ್ಟಕರ ಭೋಜನ ಸ್ವೀಕರಿಸಿ, ಎಲ್ಲರೊಂದಿಗೆ ಹರಟೆ ಹೊಡೆದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕೆಕೆಎನ್ ಸಿ ಕೋರಿದೆ.

ಪ್ರಮುಖ ಕಾರ್ಯಕ್ರಮಗಳು

3:00PM - ಸಂಧ್ಯಾ ಸುಬ್ಬರಾಮೂ ಮತ್ತು ತಂಡದಿಂದ ಪ್ರಾರ್ಥನೆ

3:15PM - ವೀಣಾ ಗಿರೀಶ ಮತ್ತು ತಂಡದಿಂದ ಜನಪದ ನೃತ್ಯ

3:25PM - ಮಮತಾ ಮಿತ್ರ ಮತ್ತು ತಂಡದಿಂದ ಸ್ಯಾಂಡಲ್ವುಡ್ ಮೆಡ್ಲೆ

3:40PM - ರಾಮಪ್ರಸಾದ್ ಕೆವಿ ಮತ್ತು ತಂಡದಿಂದ ಕನ್ನಡ ನಾಟಕ ಗಬ್ಬರ್ ಸಿಂಗ್ V2.0

4:15PM - ಶ್ರೀನಾಥ ವಸಿಷ್ಠ (ಭಾರತ) ಅವರಿಂದ ಅಣಕು ಗೀತೆಗಳು (ಹಾಸ್ಯ)

5:15PM - ಪೂರ್ಣಚಂದ್ರ ಯಕ್ಷಗಾನ ಪ್ರತಿಷ್ಠಾನ(ಭಾರತ)ದಿಂದ ಸುಧನ್ವಾರ್ಜುನ ಯಕ್ಷಗಾನ ಪ್ರಸಂಗ

6:15PM - ಊಟದ ಸಮಯ

6:50PM - ಯಕ್ಷಗಾನ ಮುಂದುವರಿಕೆ...

8:00PM - 'ಭಾಷಾ ತರಂಗ' ನೆರೆಯ ರಾಜ್ಯಗಳ ನೃತ್ಯ ಪ್ರದರ್ಶನ

English summary
Kannada Koota Northern California (KKNC) is celebrating 40th anniversary on 21st September, 2013, Saturday. As part of the celebration Kannadotsava is organized and organizations from 40 sister states have been invited to participate in the mega event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X