ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಲಿಫೋರ್ನಿಯಾ ವಿವಿಯಲ್ಲಿ ಭಾರತೀಯರ ಗಣೇಶೋತ್ಸವ

By Prasad
|
Google Oneindia Kannada News

ಕ್ಯಾಲಿಫೋರ್ನಿಯಾ, ಸೆ. 11 : ಗಣೇಶ ಚತುರ್ಥಿ, ದಸರಾ, ದೀಪಾವಳಿಗಳು ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಒಂದುಗೂಡಿ ಸಂಭ್ರಮಿಸಲು ಒಂದು ನೆಪವಷ್ಟೆ. ಹಬ್ಬದ ಸಂಭ್ರಮಕ್ಕಿಂತ ಹೆಚ್ಚಾಗಿ ತಂದೆ-ತಾಯಿ, ಬಂಧು-ಬಳಗವನ್ನು ಬಿಟ್ಟು ಕಲಿಯಲೆಂದು ಬಂದ ವಿದ್ಯಾರ್ಥಿಗಳಿಗೆ ನಮ್ಮ ಜನರನ್ನು ಕೂಡಿ ನಲಿಯಬೇಕೆಂಬ ತವಕವಿರುತ್ತದೆ.

ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಭಾರತೀಯ ವಿದ್ಯಾರ್ಥಿಗಳ ಕೂಟ ಆಗಸ್ಟ್ 29ರಂದು ಆಯೋಜಿಸಿದ್ದ ಗಣೇಶ ಚತುರ್ಥಿ ಹಬ್ಬದ ಆಚರಣೆಯಲ್ಲಿ ಇಂಥದೇ ಸಂಭ್ರಮ ಮನೆಮಾಡಿತ್ತು. ಸುಮಾರು ಐನೂರು ಸದಸ್ಯರಿರುವ ಈ ಕೂಟದಲ್ಲಿ ಭಾರತದ ಎಲ್ಲ ಭಾಷೆಯ, ಎಲ್ಲ ಕುಲದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಒಬ್ಬರಿಗೊಬ್ಬರು ಹಸ್ತಲಾಘವ ಮಾಡಿಕೊಂಡರು, ಉಭಯ ಕುಶಲೋಪರಿ ವಿಚಾರಿಸಿದರು, ಕಡೆಗೆ ಭರ್ಜರಿ ಊಟ ಸವಿದು ಪಾಠಕ್ಕೆಂದು ತೆರಳಿದರು.

"ಭಾರತೀಯ ಹಬ್ಬಗಳ ಸಂದರ್ಭದಲ್ಲಿ ಭಾರತದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮಾತ್ರವಲ್ಲ, ವಿದೇಶಿಯರು ಕೂಡ ಪಾಲ್ಗೊಳ್ಳುತ್ತಾರೆ. ವಿದ್ಯಾರ್ಥಿಗಳು ಭಾರತವನ್ನು ಬಿಟ್ಟು ಬಂದಿದ್ದರೇನಂತೆ, ಅವರೆಲ್ಲ ಅಲ್ಲಿಯ ಸಂಸ್ಕೃತಿ, ಅಲ್ಲಿಯ ನೆನಪು, ಅಲ್ಲಿಯ ಮಾತುಗಳು, ಅಲ್ಲಿಯ ರೋಚಕ ಸಂಗತಿಗಳನ್ನು ಕಟ್ಟಿಕೊಂಡೇ ಬಂದಿರುತ್ತಾರೆ. ಹೀಗಾಗಿ, ನಾವು ಭಾರತದಿಂದ ದೂರವಿದ್ದೇವೆ ಎಂದು ಅನಿಸುವುದೇ ಇಲ್ಲ" ಎಂದು ಕೂಟದ ಅಧ್ಯಕ್ಷ ಮಿಥುನ ಲೋಗನಾಥನ್ ಒನ್ಇಂಡಿಯಾಕ್ಕೆ ತಿಳಿಸಿದ್ದಾರೆ.

ವಿನಾಯಕನ ಹಬ್ಬವನ್ನು ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಅಂಗಳದಲ್ಲಿ, ಕನ್ನಡಿಗರು ಸೇರಿದಂತೆ, ಸಾಂಪ್ರದಾಯಿಕ ಉಡುಗೆತೊಡುಗೆ ತೊಟ್ಟ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೇಗೆ ಆಚರಿಸಿದರು ಎಂಬುದನ್ನು ಮುಂದಿನ ಚಿತ್ರಮೆರವಣಿಗೆಯಲ್ಲಿ ನೋಡಿ ಆನಂದಿಸಿ.

ಮೊದಲ ಬಾರಿ ಆಚರಿಸುತ್ತಿರುವವರಿಗೆ ಏನೋ ಪುಳಕ

ಮೊದಲ ಬಾರಿ ಆಚರಿಸುತ್ತಿರುವವರಿಗೆ ಏನೋ ಪುಳಕ

ಬಂಧು-ಬಳಗವನ್ನೆಲ್ಲ ಬಿಟ್ಟು ಕಲಿಯಲೆಂದು ಅಮೆರಿಕಕ್ಕೆ ಮೊದಲ ಬಾರಿ ಬಂದ ವಿದ್ಯಾರ್ಥಿಗಳಿಗೆ ಗಣೇಶೋತ್ಸವದಲ್ಲಿ ಪಾಲ್ಗೊಳ್ಳುವುದೆಂದರೆ ಏನೋ ಪುಳಕ.

ಗಣೇಶನ ಜೊತೆ ಭಾರತಾಂಬೆಗೂ ಪೂಜೆ

ಗಣೇಶನ ಜೊತೆ ಭಾರತಾಂಬೆಗೂ ಪೂಜೆ

ಭಾರತ ಬಿಟ್ಟು ಬಂದಿದ್ದರೇನಂತೆ ಎಲ್ಲರ ಮನದಲ್ಲೂ ಭಾರತಾಂಬೆ ಮನೆಮಾಡಿರುತ್ತಾಳೆ. ಪ್ರತಿ ಸಂದರ್ಭದಲ್ಲಿಯೂ ಜನಗಣಮನ ಹೇಳಿಯೇ ಕಾರ್ಯಕ್ರಮವನ್ನು ಸಂಪೂರ್ಣಗೊಳಿಸಲಾಗುತ್ತದೆ.

ಐನೂರಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು

ಐನೂರಕ್ಕೂ ಹೆಚ್ಚು ವಿದ್ಯಾರ್ಥಿ ವಿದ್ಯಾರ್ಥಿನಿಯರು

ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸಮುದ್ರವೇ ಅಲ್ಲಿ ನೆರೆದಿತ್ತು. ಇದು ಅಮೆರಿಕ ಅಲ್ಲ, ಭಾರತ ಎಂಬಂತೆ ಭಾಸವಾಗುತ್ತಿತ್ತು.

ಆಹಾ, ಕಡುಬು, ಮೋದಕ, ಭರ್ಜರಿ ಮೃಷ್ಟಾನ್ನ

ಆಹಾ, ಕಡುಬು, ಮೋದಕ, ಭರ್ಜರಿ ಮೃಷ್ಟಾನ್ನ

ಗಣಪನ ಪೂಜೆಯಾದ ಮೇಲೆ ಹೊಟ್ಟೆಯ ಪೂಜೆಯೂ ಆಗಲೇಬೇಕಲ್ಲ. ಗಣೇಶನಿಗೆ ಇಷ್ಟವಾದ ಕಡುಬು, ಮೋದಕ ಸೇರಿದಂತೆ ಬಾಯಲ್ಲಿ ನೀರೂರಿಸುವ ತಿಂಡಿತಿನಿಸುಗಳನ್ನು ತಯಾರಿಸಲಾಗಿತ್ತು.

ಸಾಂಪ್ರದಾಯಿಕ ಉಡುಗೆ ತೊಡುಗೆಯಲ್ಲಿ

ಸಾಂಪ್ರದಾಯಿಕ ಉಡುಗೆ ತೊಡುಗೆಯಲ್ಲಿ

ಅಲ್ಲಿ ಎಲ್ಲ ಭಾಷೆಯ, ಎಲ್ಲ ವರ್ಗದ ವಿದ್ಯಾರ್ಥಿಗಳೂ ಇದ್ದರು. ಮಿನಿ ಭಾರತವೇ ಅಲ್ಲಿ ಸೃಷ್ಟಿಯಾಗಿತ್ತು.

ಗಣೇಶನಿಗೆ ಕಣಗಲೆ ಹೂವಿನ ಅರ್ಪಣೆ

ಗಣೇಶನಿಗೆ ಕಣಗಲೆ ಹೂವಿನ ಅರ್ಪಣೆ

ಗಣಪನಿಗೆ ಅತಿ ಪ್ರಿಯವಾದ ಕಣಗಲೆ ಹೂವು ಅಮೆರಿಕದಲ್ಲೂ ಸಿಕ್ಕಿದ್ದು, ಗಣೇಶನ ಅದೃಷ್ಟವೆಂದೇ ಹೇಳಬೇಕು.

ಪೂಜೆ ನೆರವೇರಿಸಲು ಅರ್ಚಕರೂ ಬಂದಿದ್ದರೂ

ಪೂಜೆ ನೆರವೇರಿಸಲು ಅರ್ಚಕರೂ ಬಂದಿದ್ದರೂ

ಅತ್ಯಂತ ಸಾಂಪ್ರದಾಯಿಕವಾಗಿ ಗಣೇಶನ ಪೂಜೆಯನ್ನು ಅರ್ಚಕರು ನೆರವೇರಿಸಿಕೊಟ್ಟರು.

ಗಣಪನ ಮುಂದೆ ಬೆಳಗಿದ ನಂದಾದೀಪ

ಗಣಪನ ಮುಂದೆ ಬೆಳಗಿದ ನಂದಾದೀಪ

ಭಾರತೀಯತೆಗೆ ಅಲ್ಲಿ ಯಾವುದೂ ಕಡಿಮೆಯಿರಲಿಲ್ಲ. ಭಾರತದಲ್ಲಿ ಆಚರಿಸುವಂತೆಯೇ ಅಮೆರಿಕದಲ್ಲಿಯೂ ಗಣೇಶನ ಹಬ್ಬ ಆಚರಿಸಲಾಯಿತು.

ಜಯದೇವ ಜಯದೇವ ಜಯಮಂಗಳ ಮೂರ್ತಿ

ಜಯದೇವ ಜಯದೇವ ಜಯಮಂಗಳ ಮೂರ್ತಿ

ಅರ್ಚಕರು ಮಾತ್ರವಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೂಡ 'ಜಯದೇವ ಜಯದೇವ ಜಯಮಂಗಳ ಮೂರ್ತಿ' ಅಂತ ಹಾಡು ಹೇಳಿ ಗಣೇಶನಿಗೆ ಆರತಿ ಬೆಳಗಿ ಆಶೀರ್ವಾದ ಪಡೆದುಕೊಂಡರು.

ಡಾಲರ್ ಲೆಕ್ಕದಲ್ಲಿ ಗಣಪನಿಗೆ ಸಂದಾಯ

ಡಾಲರ್ ಲೆಕ್ಕದಲ್ಲಿ ಗಣಪನಿಗೆ ಸಂದಾಯ

ಅಮೆರಿಕ ಅಂದ ಮೇಲೆ ಗಣಪನ ಮುಂದಿಟ್ಟ ಆರತಿ ತಟ್ಟೆಗೆ ಡಾಲರ್ ಬೀಳಲೇಬೇಕಲ್ಲ!

ಕಾದಿವೆ ಮತ್ತಷ್ಟು ಭರ್ಜರಿ ಆಚರಣೆಗಳು

ಕಾದಿವೆ ಮತ್ತಷ್ಟು ಭರ್ಜರಿ ಆಚರಣೆಗಳು

ಸೆಪ್ಟೆಂಬರ್ ತಿಂಗಳ 20ನೇ ತಾರೀಖು, ಶನಿವಾರದಂದು ವಿಶ್ವವಿದ್ಯಾಲಯದ ಆವರಣದಲ್ಲಿ ಭಾರತೀಯ ವಿದ್ಯಾರ್ಥಿಗಳು ಗರ್ಭಾ ನೃತ್ಯವನ್ನು ಹಮ್ಮಿಕೊಂಡಿದ್ದಾರೆ. ಹಾಗೆಯೆ, ಅಕ್ಟೋಬರ್ 26 ಭಾನುವಾರ ದೀಪಾವಳಿಯನ್ನೂ ಆಚರಿಸಲು ನಿರ್ಧರಿಸಿದ್ದಾರೆ.

English summary
Association of Indian Students at University of Southern California in Los Angeles celebrated Ganesha festival in a grand fashion. More than 500 students from all parts of the India participated in the event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X