ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆರೆಮನೆ ಶಿವಾನಂದ ಹೆಗಡೆ ಅವರ ಸಂದರ್ಶನ

By ಸಂದರ್ಶನ : ಸುರೇಶ ಎಚ್.ಸಿ., ಸಿಂಗಪುರ
|
Google Oneindia Kannada News

ಸಿಂಗಪುರದ ಎಸ್‌ಪ್ಲನೇಡ್‌ನ ತೆರೆದ ಸಭಾಂಗಣದಲ್ಲಿ "ಕಲಾ-ಉತ್ಸವ 2012"ದ ಪ್ರಯುಕ್ತ ಒಟ್ಟು 8 ಯಕ್ಷಗಾನ ಕಿರುಪ್ರಸಂಗದ ಪ್ರದರ್ಶನಗಳನ್ನು ನೀಡಿದ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆಯ ನಿರ್ದೇಶಕರಾದ ಕೆರೆಮನೆ ಶಿವಾನಂದ ಹೆಗಡೆ ಅವರ ಜೊತೆ ಒಂದು ಕಿರು-ಸಂದರ್ಶನ ನಡೆಸುವ ಭಾಗ್ಯ ನನಗೆ ದೊರೆತಿತ್ತು. ಈ ಸಂದರ್ಶನದ ತುಣುಕುಗಳು.

ಪ್ರಶ್ನೆ: ನಮಸ್ಕಾರ. ನೀವು ಸಿಂಗಪುರಕ್ಕೆ ಬಂದದ್ದು ಹೇಗೆ? ನಿಮ್ಮನ್ನು ಕಲಾ ಉತ್ಸವಕ್ಕೆ ಕರೆಸಿದ್ದು ಯಾರು?

ಹೆಗಡೆ: ಎಸ್‌ಪ್ಲನೇಡ್‌ನ ಅರವಿಂದ್ ಕುಮಾರಸ್ವಾಮಿ ಅವರು ನಮ್ಮ ತಂಡ 2011 ಡಿಸೆಂಬರ್‌ನಲ್ಲಿ ಚೆನ್ನೈನಲ್ಲಿ ನಡೆಸಿಕೊಟ್ಟ ಯಕ್ಷಗಾನವನ್ನು ನೋಡಿ ಮೆಚ್ಚಿದ್ದರು. ಅವರೇ ನಮ್ಮನ್ನು ಸಂಪರ್ಕಿಸಿ, ಕಲಾ-ಉತ್ಸವ 2012ರಲ್ಲಿ ನಮ್ಮ ಕಾರ್ಯಕ್ರಮವನ್ನು ನೀಡಬೇಕೆಂದು ಕೋರಿಕೊಂಡರು.

Keremane Shivanand Hegde interview in Singapore

ಪ್ರಶ್ನೆ: ಕಳೆದ ಮೂರು ದಿನಗಳಿಂದ ನೀವು ಇಲ್ಲಿ ಯಕ್ಷಗಾನವನ್ನು ಮಾಡಿದ್ದೀರಿ. ಕನ್ನಡಿಗರಿಗೆ ಹಾಗೂ ಬಹುತೇಕ ಭಾರತೀಯರಿಗೆ ಯಕ್ಷಗಾನ ಕಲೆ ಗೊತ್ತಿದೆ. ಈ ಕಲೆ ಗೊತ್ತಿಲ್ಲದವರ ಪ್ರತಿಕ್ರಿಯೆ ಹೇಗಿತ್ತು?

ಹೆಗಡೆ: ಹೌದು, ಸಾಕಷ್ಟು ಪ್ರತಿಕ್ರಿಯೆ ಬಂದಿದೆ. ಜಪಾನ್ ಮತ್ತು ಚೈನಾದಿಂದ ಬಂದ ಕೆಲವು ಪ್ರವಾಸಿಗಳು ಯಕ್ಷಗಾನವನ್ನು ಇಷ್ಟಪಟ್ಟಿದ್ದಾರೆ. ಇವತ್ತು ಒಬ್ಬರು ಬಂದು "ಈ ಕಾರ್ಯಕ್ರಮ ಕನಿಷ್ಟ ಒಂದೂವರೆಯಿಂದ ಎರಡು ಘಂಟೆಗಳ ಕಾಲ ಅವಕಾಶ ಕೊಡಬೇಕು" ಎಂದರು. ಚೈನಾದಲ್ಲಿ ಬೀಜಿಂಗ್ ಒಪೆರಾ ನೋಡಿ, ಈ ಕಲಾ ಸಂಪ್ರದಾಯದ ಬಗ್ಗೆ ತಿಳಿದಿರುವ ಇಲ್ಲಿನ ಧ್ವನಿ ಮತ್ತು ಬೆಳಕು ತಾಂತ್ರಿಕರು "ಯಕ್ಷಗಾನ ಜನರಿಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಲು ಬಹಳ ಪ್ರಬಲವಾದ ಮಾಧ್ಯಮ" ಎಂದು ಹೇಳಿದರು.

English summary
Keremane Shivananda Hegde interview by Suresha H.C., Singapore. Shivananda Hegde and his 12 member Idagunji Mahaganapati Yakshagana Mandali team was in Singapore to give performance and train aspirants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X