ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದಲ್ಲಿ ಕನ್ನಡ ನಾಟಕ 'ಸಂಸಾರದಲ್ಲಿ ಸನಿದಪ'

By Prasad
|
Google Oneindia Kannada News

Kannada play Samsaradalli Sanidapa in California
ನೋಬೆಲ್ ಪ್ರಶಸ್ತಿ ವಿಜೇತ ಇಟಲಿಯ ಖ್ಯಾತ ನಾಟಕಕಾರ 'ದಾರಿಯೊ ಫೊ' ಅವರ ನಾಟಕದ ಕನ್ನಡ ರೂಪಾಂತರ 'ಸಂಸಾರದಲ್ಲಿ ಸನಿದಪ' ಎಂಬ ಸಾಂಸಾರಿಕ ಹಾಸ್ಯ ನಾಟಕ ಶನಿವಾರ, ಆಗಸ್ಟ್ 24ರಂದು ಅಮೆರಿಕಾದ ಕ್ಯಾಲಿಫೋರ್ನಿಯಾದ ಸನ್ನಿವೇಲ್ ನಲ್ಲಿ ಪ್ರದರ್ಶನ ಕಾಣುತ್ತಿದೆ.

ಈ ನಾಟಕವನ್ನು ಕನ್ನಡ ಕೂಟ ಉತ್ತರ ಕ್ಯಾಲಿಫೋರ್ನಿಯಾ(ಕೆಕೆಎನ್‌ಸಿ)ಯ ಮಾಜಿ ಅಧ್ಯಕ್ಷೆ ಪದ್ಮಾ ರಾವ್ ಅವರು ನಿರ್ದೇಶಿಸಿದ್ದಾರೆ. ಈ ಪ್ರಸಿದ್ಧ ಇಟಾಲಿಯನ್ ನಾಟಕವನ್ನು ಕನ್ನಡದ ರಂಗಕರ್ಮಿ ಕೆ.ವಿ. ಅಕ್ಷರ ಅವರು ರೂಪಾಂತರಿಸಿದ್ದಾರೆ. ಆ.24ರ ಸಂಜೆ 5.30ಕ್ಕೆ ಈ ನಾಟಕವನ್ನು ಪ್ರದರ್ಶಿಸಲಾಗುತ್ತಿದೆ.

ನಾಟಕದ ತಿರುಳು : ಈ ನಾಟಕವು ಮೇಲ್ನೋಟಕ್ಕೆ ಒಂದು ಸರಳ ಸಾಂಸಾರಿಕ ಹಾಸ್ಯ ನಾಟಕದಂತೆ, ಗುರುತುಗಳು ಬದಲಾದ ಗಡಿಬಿಡಿಯಿಂದ ಉದ್ಭವಿಸುವ ಒಂದು ಸಿದ್ಧ ಪ್ರಹಸನವೆಂಬಂತೆ ಕಾಣುತ್ತದೆ. ಆದರೆ, ತುಸು ಪರಿಶೀಲಿಸಿ ನೋಡಿದರೆ, ಇದು ಮೇಲ್ನೋಟಕ್ಕೆ ಕಾಣುವಂತೆ, ಕೇವಲ ನಗಿಸುವುದನ್ನೇ ಮೂಲಬಂಡವಾಳ ಮಾಡಿಕೊಂಡು 'ಅ-ರಾಜಕೀಯ' ಕೃತಿಯೂ ಅಲ್ಲವೆಂಬುದನ್ನು ನಮ್ಮ ಗಮನಕ್ಕೆ ಬರುತ್ತದೆ.

ನಿಜವಾಗಿ ಈ ನಾಟಕವು, ಸಾದಾ ರಾಜಕೀಯ ನಾಟಕಗಳಿಹಿಂತ ಭಿನ್ನವಾದ ಇನ್ನೊಂದು ರೀತಿಯ ರಾಜಕಾರಣವನ್ನು ಕೇಂದ್ರೀಕರಿಸಿಕೊಂಡಿದೆ- ಅದು ಸಾಮಾಜಿಕ ವ್ಯಾಪ್ತಿಯ ವಿಶಾಲ ರಾಜಕಾರಣವಲ್ಲ; ಕೌಟುಂಬಿಕ ವ್ಯಾಪ್ತಿಯ ವೈಯಕ್ತಿಕ ರಾಜಕಾರಣ. ಈ ರಾಜಕಾರಣವು ಸಮಾಜ, ದೇಶ, ಅಧಿಕಾರ ಮೊದಲಾದ ವಿಷಯಗಳ ಬಗ್ಗೆ ಸೂಕ್ಷ್ಮದರ್ಶಕದಲ್ಲಿಟ್ಟುಕೊಂಡು ಆ ಮೂಲಕವೇ ವಿಶಾಲವಾದ ಎಲ್ಲ ಸಂಗತಿಗಳ ಪ್ರತಿಫಲವನ್ನು ಗ್ರಹಿಸಲು ಹೊರಡುತ್ತದೆ.

ನಾಟಕ : ಸಂಸಾರದಲ್ಲಿ ಸನಿದಪ
ಕರ್ತೃ : ದಾರಿಯೊ ಫೋ (ಇಟಲಿ), ಕನ್ನಡಕ್ಕೆ ಕೆ.ವಿ. ಅಕ್ಷರ
ಸ್ಥಳ : ಸನ್ನಿವೇಲ್, ಕ್ಯಾಲಿಫೋರ್ನಿಯಾ
ನಿರ್ದೇಶನ : ಪದ್ಮಾ ರಾವ್
ದಿನಾಂಕ : ಆಗಸ್ಟ್ 24, ಶನಿವಾರ
ಸಮಯ : ಸಂಜೆ 5.30ಕ್ಕೆ

ಪದ್ಮಾ ರಾವ್ ಬಗ್ಗೆ : ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ 2011-12 ವರ್ಷದ ಅಧ್ಯಕ್ಷೆ ಪದ್ಮಾ ರಾವ್ ಅವರು 1999ರಿಂದ ಕೂಟದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಸಂಗೀತ-ನೃತ್ಯ-ನಾಟಕಗಳ ನಿರ್ದೇಶನ ಮತ್ತು ಮುಖ್ಯ ಪಾತ್ರಗಳನ್ನು ಮಾಡಿದ್ದೇ ಅಲ್ಲದೆ ಮೆರವಣಿಗೆ, ಸೃಷ್ಟಿ ಶೀಲ, ಮನೋರಂಜನ ಸಮಿತಿಗಳ ನೇತೃತ್ವ ವಹಿಸಿದ್ದಾರೆ. ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಅವರು ನಿರ್ದೇಶಿಸಿದ "ಚೈತ್ರದ ಚಿಗುರು" ಸಭಿಕರ ಅಪಾರ ಮೆಚ್ಚುಗೆಯನ್ನು ಗಳಿಸಿತ್ತು.

ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಅಲ್ಲದೆ ಅವರು "ಮೈಸೂರು ಮಲ್ಲಿಗೆ" ಸಂಗೀತ-ನೃತ್ಯ-ನಾಟಕವನ್ನು ಸೆಕ್ರಮೆಂಟೋ ಕನ್ನಡ ಕೂಟದಲ್ಲಿಯೂ ಮತ್ತು ದಕ್ಷಿಣ ಕ್ಯಾಲಿಫೋರ್ನಿಯದಲ್ಲಿ 2010ರಲ್ಲಿ ನಡೆದ ನಾವಿಕ ಸಮ್ಮೇಳನಗಳಲ್ಲಿ ಕೂಡ ನಿರ್ದೇಶಿಸಿ, ಮುಖ್ಯ ಪಾತ್ರವೊಂದನ್ನು ಕೂಡ ಅಭಿನಯಿಸಿ ರಸಿಕರ ಮೆಚ್ಚುಕೆಗೆ ಪಾತ್ರರಾದವರು. ಅಮೆರಿಕದಲ್ಲೇ ಮೊದಲನೇ ಬಾರಿಗೆ ಕನ್ನಡದಲ್ಲಿ ಬೀದಿ ನಾಟಕವನ್ನು ನಿರ್ದೇಶಿಸಿ, ನಟಿಸಿದ ಹೆಮ್ಮೆ ಕೂಡಾ ಪದ್ಮಾ ಅವರದು.

English summary
Comedy Kannada play Samsaradalli Sanidapa will be played in California on August 24, Saturday. The play is directed by Padma Rao, former president of KKNC. Italian play written by Nobel laureate Dario Fo is translated by KV Akshara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X