•  

ಫೆ.17ರಂದು ಕುವೈತ್‌ನಲ್ಲಿ ದಾಸೋತ್ಸವ 2012

ಗುರುವಾರ, ಫೆಬ್ರವರಿ 16, 2012, 15:21 [IST]
Hindustani singer Shankar Shanbhag
ಕುವೈತ್, ಫೆ. 16 : ಕುವೈತ್ ಕನ್ನಡ ಕೂಟ 'ದಾಸೋತ್ಸವ 2012' ದಾಸ ಜಯಂತಿಯನ್ನು ಫೆ.17ರಂದು ಸಾಲ್ಮಿಯ ಇಂಡಿಯನ್ ಮಾಡೆಲ್ ಶಾಲೆಯ ಸಭಾಂಗಣದಲ್ಲಿ ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿ ಕೂಟದ ಸದಸ್ಯರು ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.

ಬೆಂಗಳೂರಿನಿಂದ ಖ್ಯಾತ ಹಿಂದೂಸ್ತಾನಿ ಗಾಯಕ ಶಂಕರ್ ಶಾನುಭಾಗ್ ಅವರು ದಾಸ ಸಂಕೀರ್ತನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇವರಿಗೆ ನರೇಂದ್ರ ನಾಯಕ್ ಹಾರ್ಮೋನಿಯಂ ಮತ್ತು ತೋನ್ಸೆ ರಂಗ ಪೈ ಅವರು ತಬಲಾ ಸಾಥ್ ನೀಡಲಿದ್ದಾರೆ.

ಫೆ.18ರಂದು ನರೇಂದ್ರ ನಾಯಕ್ ಅವರು ಇಲ್ಲಿನ ಭಾರತೀಯ ಪ್ರೌಢ ಶಾಲೆಯ ಮಕ್ಕಳಿಗೆ ಭವಿಷ್ಯ ನಿರೂಪಣೆಯ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ಕನ್ನಡ ಕೂಟದ ಅಧ್ಯಕ್ಷ ಡಾ. ಸುರೇಂದ್ರ ನಾಯಕ್ ಕಾಪಾಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ.

User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
1st Test , Lord's Cricket Ground, St John's Wood
England won by 5 wickets
Follow Oneindia Kannada on Twitter
Oneindia Kannada Facebook fan page
Write Comments on this Article