•  

ಇಂಗ್ಲೆಂಡಿನ ಅಭಿಮಾನಿಗಳ ಸೆರೆಗೆ ಕನ್ನಡದ 'ಕಳ್ ಮಂಜ'!

ಶನಿವಾರ, ಜೂನ್ 18, 2011, 0:09 [IST]
Komal, Guruprasad and other in Kal Manja
ಕನ್ನಡದ ಖ್ಯಾತ ಹಾಸ್ಯ ನಾಯಕ ನಟ ಕೋಮಲ್ ಜೊತೆಗೆ ಅವರ ಅಭಿನಯದ ಸೂಪರ್ ಹಿಟ್ 'ಕಳ್ ಮಂಜ' ಚಿತ್ರವನ್ನು ಜುಲೈ ತಿಂಗಳ 2 ಮತ್ತು 3ರಂದು ನೋಡುವ ಸುಯೋಗ ಇಂಗ್ಲೆಂಡ್ ಕನ್ನಡಿಗರಿಗೆ ಲಭಿಸಿದೆ.

ಸದಭಿರುಚಿ ಮತ್ತು ಸರ್ವರುಚಿ ಹಾಸ್ಯ ಚಿತ್ರಗಳಿಂದ ಕರ್ನಾಟಕದಲ್ಲಿ ಮನೆಮಾತಾಗಿರುವ ಕೋಮಲ್, ಸಿನೆಮಾ ಮುಗಿದ ನಂತರ ಪ್ರೇಕ್ಷಕರೊಡನೆ ಅನೌಪಚಾರಿಕ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ (ಕಾಫೀ ವಿತ್ ಕೋಮಲ್!) ಎಂದು ಈ ಚಿತ್ರವನ್ನು ಇಂಗ್ಲೆಂಡಿಗೆ ತರುತ್ತಿರುವ ಕನ್ನಡಿಗರು-UK ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಚಿತ್ರದಲ್ಲಿ ಕಳ್ ಮಂಜ ಕೋಮಲ್ ಜೊತೆ ಉದಯತಾರಾ ಮತ್ತು ಐಶ್ವರ್ಯ ನಾಗ್ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದಾರೆ. 'ಕಳ್ ಮಂಜ' ಹಾಡನ್ನು ಕನ್ನಡಿಗರಿಗೆ ದಯಪಾಲಿಸಿದ 'ಎದ್ದೇಳು ಮಂಜುನಾಥ' ನಿರ್ದೇಶಕ ಗುರುಪ್ರಸಾದ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಕೋಮಲ್ ಪತ್ನಿ ಅನುಸೂಯ ಅವರು ಚಿತ್ರವನ್ನು ನಿರ್ಮಿಸಿದ್ದಾರೆ.

ಕಳ್ಳ ಮಂಜ ಚಿತ್ರದ ಪ್ರದರ್ಶನದ ಸ್ಥಳ ಮತ್ತು ಸಮಯ ಈ ಕೆಳಗಿನತಿದೆ. ಹೆಚ್ಚಿನ ವಿವರ ಹಾಗು ಆನ್-ಲೈನ್ ಟಿಕೆಟ್ ಕೊಳ್ಳಲು kannadigaruuk.com ತಾಣಕ್ಕೆ ಭೇಟಿ ಕೊಡಿ.

ಕಳ್ ಮಂಜ ಮೊದಲ ಪ್ರದರ್ಶನ: ವಿಂಡ್ಸರ್
ದಿನಾಂಕ: 2.7.2011, ಶನಿವಾರ, ಸಮಯ: ಸಂಜೆ 4ರಿಂದ 8ರವರೆಗೆ
ಸ್ಥಳ: The Firestation Centre for Arts & Culture
The Old Court, St Leonards Road, Windsor, SL4 3BL

ಕಳ್ ಮಂಜ ಎರಡನೇ ಪ್ರದರ್ಶನ: ಬರ್ಮಿಂಗ್ಹ್ಯಾಮ್
ದಿನಾಂಕ: 3.7.2011, ಭಾನುವಾರ. ಸಮಯ: ಮಧ್ಯಾಹ್ನ 12.30ರಿಂದ 3.30ರವರೆಗೆ.
ಸ್ಥಳ: Piccadily Cinema, 372 Stratford Road (A34), Sparkhill, Birmingham - B11 4AB
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.
IPL, Feroz Shah Kotla, Delhi
Royal Challengers Bangalore: 35 / 1, 4.4 Overs
1st Test , Lord's Cricket Ground, St John's Wood
West Indies: 144 / 4, 58 Overs
IPL, Himachal Pradesh Cricket Association Stadium, Dharmasala
Kings XI Punjab won by 6 wickets
Follow Oneindia Kannada on Twitter
Oneindia Kannada Facebook fan page
Write Comments on this Article