ಬಣ್ಣ ಎಲ್ಲರನ್ನು ಮರುಳು ಮಾಡುತ್ತದೆ. ಬಣ್ಣಕ್ಕೆ ಯಾವುದೇ ಜಾತಿ, ಮತ, ದೇಶ, ವಯಸ್ಸು, ಹೆಣ್ಣು ಗಂಡು, ಮಕ್ಕಳು ಅಂತ ಇಲ್ಲ. ಪ್ರತಿಯೊಬ್ಬರಿಗೂ ಒಂದೊಂದು ಬಣ್ಣ ಇಷ್ಟ. ನನಗೆ ಯಕ್ಷಗಾನದಲ್ಲಿ ಬರುವ ಬಹುವಿಧ ವೇಷಗಳ ಬಣ್ಣ ಆಪ್ಯಾಯಮಾನ. ನಮ್ಮ ಕರ್ನಾಟಕದ ಮಹೋನ್ನತ ನೃತ್ಯ ಕಲೆ ಯಕ್ಷಗಾನದ ವೇಷವೆ ಹಾಗೆ. ಒಂದು ಕ್ಷಣ ಯಾರೇ ಆದರೂ ನಿಂತು ನೋಡುವಂಥದ್ದು. ಯಕ್ಷಗಾನ ಆಟ ನಡೆಯುತ್ತಿದ್ದರೆ ರಾತ್ರಿಪೂರ ಕಂಬಳಿ ಹೊದ್ದು ಕುಳಿತು ನೋಡುವಂಥದ್ದು.
ಲಂಡನ್ ನಗರದ ನಿವಾಸಿಯಾದ ನಾನು ಸತತ ಮೂರನೇ ವರುಷ ಯಕ್ಷವೇಷಧಾರಿಯಾಗಿ 2010ರ ಲಂಡನ್ ಪೆರೇಡ್ ನಲ್ಲಿ ಭಾಗವಹಿಸಿದೆ. ಈ ವರ್ಷ ಕೂಡ ಯಕ್ಷಗಾನದ ವೇಷದಲ್ಲಿ ಯಕ್ಷ ರಾಜನಾಗಿ ಲಂಡನ್ನಿನ ರಾಜಬೀದಿಗಳಲ್ಲಿ ಹೆಜ್ಜೆ ಹಾಕಿ ಹೊಸ ವರುಷದ ಸಂಭ್ರಮ ಆಚರಿಸಿದೆ. ಹಲವಾರು ವರುಷಗಳಿಂದ ಯಕ್ಷಗಾನಕ್ಕೆ ಜಾಗತಿಕ ಮನ್ನಣೆ ದೊರೆಯಬೇಕೆಂಬ ಉದ್ದೇಶದಿಂದ ಯುರೋಪಿನಾದ್ಯಂತ ನಾನು ಮತ್ತು ನನ್ನ ಸ್ನೇಹಿತರು ಯಕ್ಷಗಾನವನ್ನು ಪ್ರಚಾರ ಮಾಡುತ್ತಿದ್ದೇವೆ.
ಪ್ರತಿವರ್ಷ ಜನವರಿ ಒಂದನೇ ತಾರೀಕು ಲಂಡನ್ ರಾಜಬೀದಿಗಳಲ್ಲಿ ಸಾಗುವ ಲಂಡನ್ ಪರೇಡ್ ನಲ್ಲಿ ಪ್ರಪಂಚದ ಹಲವಾರು ಸಾಂಸ್ಕೃತಿಕ ತಂಡಗಳು ಭಾಗವಹಿಸುತ್ತವೆ. ಯಕ್ಷರಾಜನಿಗೆ ಪ್ರತಿ ವರುಷವು ವಿಶೇಷವಾದ ಅಹ್ವಾನ. ಕಾರ್ಯಕ್ರಮದ ಆರಂಭದಲ್ಲೇ ವಿಶೇಷವಾದ ಸ್ಥಾನ. ಕಾರಣ, ಯಕ್ಷಗಾನದ ವೇಷವನ್ನು ಮೆಚ್ಚದವರೇ ಇಲ್ಲ.
ಈ ವರುಷ ಕೂಡ ಪೆರೇಡ್ ನಲ್ಲಿ ಪಾಲ್ಗೊಂಡು ನಮ್ಮ ರಾಜ್ಯದ, ದೇಶದ ಸಾಂಸ್ಕೃತಿಕ ಹೆಮ್ಮೆಯನ್ನು ಎತ್ತಿಹಿಡಿದ ಸಂತಸ ನನ್ನದಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ವೆಸ್ಟ್ ಮಿನಿಸ್ಟರ್ ನ ಮೇಯರ್ ಪಾರಿತೋಷಕವನ್ನಿತ್ತು ಗೌರವಿಸಿದರು. ವೇಷವನ್ನು ಕಟ್ಟಲು, ಛಾಯಾಚಿತ್ರ ತೆಗೆಯಲು ಶರತ್ ಕೋಲಾರ್ ರಾಮಚಂದ್ರ ಅಯ್ಯರ್ ರವರು ಸಹಕರಿಸಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು ಸಲ್ಲುತ್ತವೆ. ಯಕ್ಷಗಾನ ಕಲೆಯಲ್ಲಿ ಆಸಕ್ತಿಯಿರುವ ದಟ್ಸ್ ಕನ್ನಡದ ಸಮಸ್ತ ಓದುಗರಿಗೂ ಹೊಸ ವರ್ಷದ ಯಕ್ಷ ಶುಭಾಶಯಗಳು.