ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಸವಾಣಿ 'ತರಂಗ'ದಲ್ಲಿ ತೇಲಾಡಿದ ಮೆಂಫಿಸ್!

By Staff
|
Google Oneindia Kannada News

Pushpa Sanjay
ಹರಿ ಹರಿ ಎಂದು ಕರೆಯುವುದೇ ತಡ ಹರಿ ಕರೆದಲ್ಲಿಗೆ ಬರುವ, ಪುರಂದರ ವಿಠಲನು ಕರೆಯುವುದೇ ತಡ ಹರಿ ಕರೆದಲ್ಲಿಗೆ ಬರುವ ಎನ್ನುವ ದಾಸವಾಣಿಯನ್ನು ಸಾಕಾರಗೊಳಿಸಲು ದಾಸ ಆರಾಧನೆಯನ್ನು ಮೆಂಫಿಸ್ ನಗರದ 'ತರಂಗ ಕನ್ನಡ ಸಂಘ' ಮಾರ್ಚ್ ಇಪ್ಪತ್ತೊಂದರಂದು ಶನಿವಾರ ಮೆಂಫಿಸ್ ದೇವಸ್ಥಾನದಲ್ಲಿ ಆಯೋಜಿಸಿತ್ತು.

ಮೊತ್ತ ಮೊದಲಿಗೆ ತರಂಗದ ಅಧ್ಯಕ್ಷರಾದ ಪುಷ್ಪ ಸಂಜಯ್ ಅವರು ಸ್ವಾಗತ ಭಾಷಣ ಮಾಡಿ ಎಲ್ಲರನ್ನೂ ಆಹ್ವಾನಿಸಿದರು. ದಾಸರ ಬಗ್ಗೆ, ದಾಸ ಸಾಹಿತ್ಯದ ಬಗ್ಗೆ ಮಾತನಾಡಿದರು. ದಾಸ ಪರಂಪರೆ, ದಾಸರ ಇತಿಹಾಸ ಹಾಗು ನಾವು ದಾಸರ ಸಂಸ್ಕೃತಿಯನ್ನು ಎಷ್ಟರ ಮಟ್ಟಿಗೆ ಮುಂದುವರಿಸಿಕೊಂಡು ಹೋಗುತ್ತಾ ಇದ್ದೇವೆ ಅನ್ನುವುದರ ಬಗ್ಗೆ ಮಾತನಾಡಿ, ಹಾಗೆಯೆ ಮಕ್ಕಳಿಗಾಗಿ ಆಯೋಜಿಸಿದ ದಾಸರ ಬಗ್ಗೆ ರಸ ಪ್ರಶ್ನೆ ಕಾರ್ಯಕ್ರಮದ ಬಗ್ಗೆ ತಿಳಿಸಿದರು. ಇದರಿಂದ ಮಕ್ಕಳ ಉತ್ಸಾಹ ಇಮ್ಮಡಿಯಾಯಿತು. ಮೊದಲನೆಯದಾಗಿ ಕಾರ್ಯಕ್ರಮವನ್ನು ತರಂಗ ತಂಡದವರಿಂದ ಪ್ರಾರಂಭ ಮಾಡಲಾಯಿತು. ದೀಪಿಕಾ ಅವರು ಈ ತಂಡದ ಜವಾಬ್ದಾರಿಯನ್ನು ಕಳೆದ ಎರಡು ವರುಷಗಳಿಂದಲೂ ಹೊತ್ತಿದ್ದಾರೆ ಹಾಗು ಇವರಿಗೆ ಸಹಾಯ ಮಾಡುತ್ತಿರುವವರಲ್ಲಿ ಉಮಾ, ಸುಬ್ಬರಾವ್ ಹಾಗು ಪ್ರಕಾಶ್ ರವರು ಸೇರಿದ್ದಾರೆ. ತರಂಗ ತಂಡವು ಪ್ರತಿ ವರುಷದಂತೆ ಈ ವರುಷವು ದಾಸರ ಹೊಸ ಹಾಗು ಬಹು ಸುಂದರವಾದ ಹಾಡುಗಳನ್ನು ಕಲಿತು ಎಲ್ಲರಿಗು ದಿವ್ಯ ಅನುಭವವನ್ನು ಒದಗಿಸಿದರು. ಅವರಿಗೆ ಜೊತೆಯಾಗಿ ಲಕ್ಷ್ಮಣ್ ಅವರು ಮೃದಂಗದಲ್ಲಿ ಜೊತೆ ನೀಡಿದರು.

ನಂತರ ಪ್ರಸಿದ್ಧ ಗಾಯಕರಾದ ಶ್ರೀರಾಮ್ ಅವರು ಇಪ್ಪತ್ತು ನಿಮಿಷಗಳ ಕಾಲ ಕಾರ್ಯಕ್ರಮವನ್ನು ನೀಡಿದರು. ಅವರ ಅದ್ಭುತವಾದ ಗಾಯನ ಎಲ್ಲರ ಮನಸೂರೆಗೊಂಡಿತು. ಶ್ರೀರಾಮ್ ಅವರಿಗೆ ಹೂಗುಚ್ಚ ನೀಡಿ ಗೌರವಿಸಲಾಯಿತು. ನ್ಯಾಶ್-ವಿಲ್ ನಿಂದ ಆಗಮಿಸಿದ್ದ ಉಪಾಸನ ತಂಡದ ಕಾರ್ಯಕ್ರಮ ನಂದಿನಿ ಕಂಬಿ ಅವರ ನೇತೃತ್ವದಲ್ಲಿ ಬಹು ಸುಂದರವಾಗಿ ಮೂಡಿ ಬಂದಿತು. ಅವರ ಗಾಯನವನ್ನು ಎಲ್ಲರೂ ಮನಸಾರೆ ಹೊಗಳಿದರು. ನಂದಿನಿ ಕಂಬಿ ಅವರು 'ಮಧುರಧ್ವನಿ' ಎನ್ನುವ ಹೆಸರಿನಲ್ಲಿ ಸಂಗೀತ ಶಾಲೆಯನ್ನು ನಡೆಸುತ್ತಿದ್ದಾರೆ.

ಲಕ್ಷ್ಮಣ್ ಮತ್ತು ನಂದಿನಿ ಕಂಬಿ ಅವರಿಗೆ ಪ್ರಶಸ್ತಿ ಪತ್ರ ಹಾಗು ಫಲಕಗಳನ್ನು ನೀಡಿ ಗೌರವಿಸಲಾಯಿತು. ಹಾಗೆಯೆ ತರಂಗ ಹಾಗು ದಾಸ ಆರಾಧನೆಗೆ ಸದಾ ಸಹಕಾರ ಕೊಡುತ್ತಾ ಬಂದಿರುವ ಸರಸ್ವತಿ ಕಣ್ಣನ್, ಮೀನಾಕ್ಷಿ ಮಾಮಿ ಹಾಗು ಸುಬ್ಬರಾವ್ ಅವರಿಗೂ ಹೂಗುಚ್ಚ ನೀಡಿ ಗೌರವಿಸಲಾಯಿತು.

ಪುಷ್ಪ ಸಂಜಯ್ ಅವರು ಕಾರ್ಯಕ್ರಮದ ನಿರೂಪಣೆಯ ಜೊತೆಗೆ ದಾಸರ ಬಗ್ಗೆ ರಸ ಪ್ರಶ್ನೆಗಳನ್ನೂ ಕೇಳಿದರು. ನಂತರ ಮಕ್ಕಳ ಕಾರ್ಯಕ್ರಮ ಆರಂಭವಾಯಿತು. ಪುಟ್ಟ ಮಕ್ಕಳ ಸುಶ್ರಾವ್ಯ ಗಾಯನ ಕೇಳಿ ನೆರೆದಿದ್ದವರೆಲ್ಲ ತಲೆ ದೂಗಿದರು. ಕಾರ್ಯಕ್ರಮದ ಅಂತ್ಯದಲ್ಲಿ ರಸ ಪ್ರಶ್ನೆಯ ವಿಜೇತರ ಹೆಸರುಗಳನ್ನು ಉಪಾಧ್ಯಕ್ಷರಾದ ದಿನೇಶ್ ಉಡುಪಿಯವರು ಘೋಷಿಸಿದರು. ಪುಷ್ಪ ಸಂಜಯ್ ಅವರು ಬಹುಮಾನಗಳನ್ನು ವಿತರಿಸಿದರು. ಕೊನೆಯದಾಗಿ ವಿನಯ್ ನಾಗರಾಜ್ ಅವರು ವಂದನಾರ್ಪಣೆ ಮಾಡಿದರು.

ಒಟ್ಟಿನಲ್ಲಿ ಇದೊಂದು ಮರೆಯಲಾಗದ ಅನುಭವವಾಗಿ ಮೂಡಿ ಬಂತು. ಕಾರ್ಯಕ್ರಮದ ಯಶಸ್ಸು ಎಲ್ಲ ಪದಾಧಿಕಾರಿಗಳ ಮುಖದಲ್ಲೂ ಮೂಡಿದ ಸಾರ್ಥಕತೆಯಲ್ಲಿ ಗುರುತಿಸಬಹುದಾಗಿತ್ತು. ಇದಕ್ಕೆಲ್ಲ ಕಾರಣರಾದವರನ್ನು ನೆನೆಯದಿದ್ದರೆ ಕೃತಘ್ನರಾಗುತ್ತೇವೆ. ನಿಸ್ಪೃಹತೆಯಿಂದ ಕೆಲಸ ಮಾಡಿದ ಎಲ್ಲ ಪದಾಧಿಕಾರಿಗಳಿಗೂ ಹಾಗು ಲಘು ಉಪಾಹಾರದ ವ್ಯವಸ್ಥೆಗೆ ಸಹಾಯ ಮಾಡಿದ ಎಲ್ಲ ಸ್ವಯಂಸೇವಕರಿಗೂ ತರಂಗದ ಪರವಾಗಿ ನನ್ನ ಹೃತ್ಪೂರ್ವಕವಾದ ವಂದನೆಗಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X