ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್ 22ರಂದು 'ಕನ್ನಡ ಕಲಿ' ದಿನಾಚರಣೆ

By Staff
|
Google Oneindia Kannada News

Kannada Kali Day celebration in USA
ದಕ್ಷಿಣ ಕ್ಯಾಲಿಫೋರ್ನಿಯಾದ ಎಲ್ಲ ಅಧ್ಯಾಯಗಳ ಕನ್ನಡಕಲಿಗಳು ಪ್ರತಿ ವರ್ಷದಂತೆ ಒಂದೆಡೆ ಸೇರಿ ಮತ್ತೆ ಸಂಭ್ರಮಿಸಲಿದ್ದಾರೆ. 'ಕನ್ನಡ ಕಲಿ' ದಿನಾಚರಣೆ ಮಾರ್ಚ್ 22ರಂದು ಸರಿಟೊ ಅಧ್ಯಾಯದ ಮುಂದಾಳುತ್ವದಲ್ಲಿ ಲಿಬರ್ಟಿ ಪಾರ್ಕಿನ ಸಮುದಾಯ ಭವನದಲ್ಲಿ ನಡೆಯಲಿದೆ.

ಪರಸ್ಪರ ವಿಚಾರ ವಿನಿಮಯ, ಕನ್ನಡ ಕಲಿಗಳಿಗೆ ಪರೀಕ್ಷೆ, ವಿನೋದಭರಿತ ಕ್ವಿಝ್, ಮಕ್ಕಳಿಂದ ಮನರಂಜನೆ, ಪ್ರಶಸ್ತಿ ಪ್ರದಾನ, ನಿಸ್ಪೃಹ ಸೇವೆ ಗೈಯುತ್ತಿರುವ ಶಿಕ್ಷಕರಿಗೆ ಸನ್ಮಾನ ಇತ್ಯಾದಿ ಕಾರ್ಯಕ್ರಮಗಳು ಇವೆ. ಕನ್ನಡ ಕಲಿತು ಹೆಮ್ಮೆಯಿಂದ ತೋರಿಸಿಕೊಳ್ಳುತ್ತಿರುವ ಮಕ್ಕಳನ್ನು ಪ್ರೋತ್ಸಾಹಿಸ ಬನ್ನಿ. ಇದರಲ್ಲಿ ಭಾಗವಹಿಸುತ್ತಿರುವ 60ಕ್ಕೂ ಹೆಚ್ಚು ಮಕ್ಕಳಿಗೆ ಶುಭ ಕೋರಿ ಹಾರೈಸೋಣ. ತಪ್ಪದೆ ಬನ್ನಿ. ಬರಲಾಗದಿದ್ದರೆ ಸಂದೇಶ ಕಳುಹಿಸಿ : ಶಾಂತಾರಾಮ ಕೇಶವ (562)787-3258 ಅಥವಾ [email protected], [email protected]ಗೆ ಈಮೇಲ್ ಮಾಡಿರಿ.

ಕನ್ನಡ ಕಲಿಯ ಮೊದಲ ಅಧ್ಯಾಯ ಸೆಪ್ಟೆಂಬರ್ 2000ರಲ್ಲಿ ಅರ್ವೈನ್ ನಗರದಲ್ಲಿ ಪ್ರಾರಂಭವಾಯಿತು. ದಕ್ಷಿಣ ಕ್ಯಾಲಿಫೋರ್ನಿಯಾದ ಕನ್ನಡಿಗರಲ್ಲಿ ಹುದುಗಿದ ಆಸೆಗೆ ಅದು ಜೀವ ತುಂಬಿತು. ಕೆಲವೇ ತಿಂಗಳಲ್ಲಿ ಇನ್ನೂ ನಾಲ್ಕು ಅಧ್ಯಾಯಗಳು ಈ ತೆಂಕಣ ಪ್ರದೇಶದ ವಿಸ್ತಾರದಲ್ಲಿ ಹುಟ್ಟಿಕೊಂಡವು. ವಾರಾಂತ್ಯದಲ್ಲಿ ನಿಯತವಾಗಿ ಸೇರುತ್ತ ಸಾಮಾನ್ಯ ಪಠ್ಯಕ್ರಮವನ್ನು ರೂಪಿಸಿಕೊಂಡವು. ಮಕ್ಕಳು ಕನ್ನಡ ಕಲಿಯುವುದರ ಜೊತೆ, ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಇಲ್ಲಿನ ಜನರಿಗೆ ಕನ್ನಡ ಸಂಸ್ಕೃತಿಯನ್ನು ಪರಿಚಯಿಸುವಲ್ಲಿ ಕೂಡ ಸಮರ್ಥರಾಗಿದ್ದಾರೆ.

ನಿಮ್ಮ ಮಕ್ಕಳು ಕನ್ನಡ ಮಾತನಾಡಬೇಕೆ? ನೀವು ಕನ್ನಡ ಕಲಿಸಬಯಸುತ್ತಿರಾ? ಹೊರದೇಶದಲ್ಲಿ ಕನ್ನಡ ಕಲಿಸಲು ನಿಮ್ಮಲ್ಲಿ ಉತ್ತಮ ಯೋಜನೆಗಳು ಇವೆಯೆ? ಕೂಡಲೆ ಒಂದು ಈ-ಮೇಲ್ ರವಾನಿಸಿ: [email protected]

ಪೂರಕ ಓದಿಗೆ

ಆಕಾಶ್‌ಗೆ ಕರ್ನಾಟಕ ಸಾಂಸ್ಕೃತಿಕ ಪ್ರಜ್ಞೆ ಪ್ರಶಸ್ತಿ</a><br><a href='ಕನ್ನಡ ಕಲಿ' ಮತ್ತು 'ಸಂಗಮ'ಕ್ಕೆ ಲೇಖನಗಳ ಆಹ್ವಾನ" title="ಆಕಾಶ್‌ಗೆ ಕರ್ನಾಟಕ ಸಾಂಸ್ಕೃತಿಕ ಪ್ರಜ್ಞೆ ಪ್ರಶಸ್ತಿ
'ಕನ್ನಡ ಕಲಿ' ಮತ್ತು 'ಸಂಗಮ'ಕ್ಕೆ ಲೇಖನಗಳ ಆಹ್ವಾನ" />ಆಕಾಶ್‌ಗೆ ಕರ್ನಾಟಕ ಸಾಂಸ್ಕೃತಿಕ ಪ್ರಜ್ಞೆ ಪ್ರಶಸ್ತಿ
'ಕನ್ನಡ ಕಲಿ' ಮತ್ತು 'ಸಂಗಮ'ಕ್ಕೆ ಲೇಖನಗಳ ಆಹ್ವಾನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X