ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದ ಕಾವೇರಿಗೆ ಮೀನಾರಾವ್ ಅಧ್ಯಕ್ಷೆ

By ವರದಿ : ಹರಿದಾಸ್ ಲಹರಿ
|
Google Oneindia Kannada News

ಕನ್ನಡ ಸಂಸ್ಕೃತಿ ಮತ್ತು ಕಲೆಯನ್ನು ರಚನಾತ್ಮಕವಾಗಿ ದುಡಿಸಿಕೊಳ್ಳುವ ಅಮೆರಿಕ ಸಂಯುಕ್ತ ಸಂಸ್ಥಾನಗಳ ರಾಜಧಾನಿ ವಾಷಿಂಗ್ಟನ್ ಡಿ.ಸಿಯಲ್ಲಿನ ಕಾವೇರಿ ಕನ್ನಡ ಸಂಘಕ್ಕೆ ಈ ಬಾರಿ ಮಹಿಳೆಯೊಬ್ಬರು ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಮೀನಾ ರಾವ್ ಮತ್ತು ಅವರ ತಂಡವು 2009ನೇ ಸಾಲಿನಲ್ಲಿ ಕಾವೇರಿಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಮೀನಾ ಅವರು 2003ನೇ ಸಾಲಿನ ಕಾವೇರಿಯ ಅಧ್ಯಕ್ಷ ಸಂಜಯ್ ರಾವ್ ಅವರ ಪತ್ನಿ. ಕಾವೇರಿಯಲ್ಲಿ ಅಧ್ಯಕ್ಷ ಪದವಿಯನ್ನು ಅಲಂಕರಿಸುತ್ತಿರುವ ಪ್ರಥಮ ದಂಪತಿಗಳು ಎನ್ನುವ ವಿಶೇಷವೂ ಈ ಜೋಡಿಗೆ ಸಲ್ಲುತ್ತದೆ.

ನಮಗೆಲ್ಲ ತಿಳಿದಿರುವಂತೆ ಕನ್ನಡ ನಾಟಕ, ಕಲೆ ಮತ್ತು ಸಂಸ್ಕೃತಿಯ ಬೆಳೆವಣಿಗೆಗೆ ಈ ದಂಪತಿಗಳು ಬಹಳಷ್ಟು ಕೊಡುಗೆಯನ್ನು ಕಳೆದ ಹತ್ತು ವರ್ಷಗಳಿಂದ ನೀಡುತ್ತಿದ್ದಾರೆ. ಈ ವರ್ಷದ ಕಾರ್ಯಕಾರಿ ಸಮಿತಿಯಲ್ಲಿ ಮಹಿಳಾಮಣಿಗಳೇ ಹೆಚ್ಚಿನ ಸ್ಥಾನವನ್ನು ಅಲಂಕರಿಸಿರುವುದು ಇನ್ನೊಂದು ವಿಶೇಷ. ಕಾರ್ಯಕಾರಿ ಸಮಿತಿಯ ಇತರ ಸದಸ್ಯರ ಹೆಸರುಗಳು ಕೆಳಕಂಡಂತಿವೆ :

ಉಪಾಧ್ಯಕ್ಷರು : ಜಯಶ್ರೀ ಜಗದೀಶ್
ಕಾರ್ಯದರ್ಶಿ : ನರ್ಮದ ರವಿಂದ್ರ
ಸಹ ಕಾರ್ಯದರ್ಶಿ : ಕೀರ್ತಿ ಸ್ವಾಮಿ
ಕೋಶಾಧಿಕಾರಿ : ಗುರು ನಾಗರಾಜ್
ಸಹ ಕೋಶಾಧಿಕಾರಿ : ಶಾಲಿನಿ ಶ್ರೀನಾಗೇಶ್

ಕಾರ್ಯಕಾರಿ ಮಂಡಲಿಯ ಇನ್ನಿತರ ಸದಸ್ಯರು:

ಗಿರೀಶ್ ವಾಸುದೇವ
ಹರ್ಷ ಗೋಪಾಲ್
ಪ್ರಭು ಗೌಡ
ರಮೇಶ್ ವೆಂಕಟ್ ರೆಡ್ಡಿ
ಶರ್ಮಿಳ ಮೂರ್ತಿ
ಶೈಲನ್ ಮಂಡ್ಯಮ್
ಲೆಕ್ಕಾಧಿಕಾರಿಗಳು: ಶಶಿ ಮೂರ್ತಿ

ರಾಜಧಾನಿಯ ಕನ್ನಡಿಗರೆಲ್ಲರೂ ಹೊಸ ಹುರುಪಿನಿಂದ ಕನ್ನಡಕ್ಕಾಗಿ ಸೇವೆಸಲ್ಲಿಸಲು ಸಿದ್ಧರಾಗಿರುವ ಈ ಎಲ್ಲ ಪಧಾಧಿಕಾರಿಗಳಿಗೆ ಶುಭ ಹಾರೈಸುತ್ತಿದ್ದಾರೆ. ಮೀನಾರಾವ್ ಮತ್ತು ಇತರ ಪದಾಧಿಕಾರಿಗಳು ಈ ಮೂಲಕ ಅಮೇರಿಕದ ಇತರ ಎಲ್ಲ ಕನ್ನಡಸಂಘಗಳ ಹೊಸ ಪದಾಧಿಕಾರಿಗಳಿಗೆ ಸಂಕ್ರಾಂತಿ ಹಾರ್ದಿಕ ಶುಭಾಶಯಗಳನ್ನು ಕೋರುತ್ತಿದ್ದಾರೆ. 2009ರ ಸಾಲಿನ ಮೊದಲ ಕಾರ್ಯಕ್ರಮ, ಜನವರಿ 24ರಂದು ನಡೆಯಲಿರುವ ಸಂಭ್ರಮದ ಸಂಕ್ರಾಂತಿ ಹಬ್ಬಕ್ಕೆ ಎಲ್ಲರನ್ನೂ ಪ್ರೀತಿಯಿಂದ ಆಹ್ವಾನಿಸುತ್ತಿದ್ದಾರೆ.

ಹೆಚ್ಚಿನ ವಿವರಗಳಿಗೆ ಭೇಟಿಕೊಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X