ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ರೆಂಚರನ್ನು ಬೆಚ್ಚಗಾಗಿಸಿದ ಲಂಡನ್ ಕನ್ನಡಿಗರ ಯಕ್ಷಗಾನ

By Staff
|
Google Oneindia Kannada News

Yakshanaga parade in France by London Kannadigas
ಕಳೆದ ವರ್ಷ ಜನವರಿ 1ರಂದು ಲಂಡನ್ನಿನ ರಾಜಬೀದಿಗಳಲ್ಲಿ ಕನ್ನಡ ಸಂಸ್ಕೃತಿಯ ಪ್ರತೀಕವಾಗಿರುವ ಯಕ್ಷಗಾನವನ್ನು ಪ್ರದರ್ಶಿಸಿ ಆಂಗ್ಲರ ಮೈಮನ ಬೆಚ್ಚಗಾಗಿಸಿದ್ದ ಇಂಗ್ಲೆಂಡಿನಲ್ಲಿ ನೆಲೆಸಿರುವ ಕನ್ನಡಿಗರು (www.yakshaland.com ಸದಸ್ಯರು) ಡಿಸೆಂಬರ್ 31ರಂದು ಫ್ರಾನ್ಸಿಗೆ ಪಯಣಿಸಿ ಫ್ರೆಂಚರಿಗೆ ಯಕ್ಷಗಾನದ ಸವಿರುಚಿಯನ್ನು ಉಣಬಡಿಸಿದರು.

ತಾಪಮಾನ 3 ಡಿಗ್ರಿ ಇದ್ದರೂ ಚಳಿಯನ್ನು ಲೆಕ್ಕಿಸದೆ ಲಂಡನ್ನಿನಿಂದ ನಾಲ್ಕು ಗಂಟೆ ಪ್ರಯಾಣ ಮಾಡಿ, ಇಂಗ್ಲಿಷ್ ಕಾಲುವೆಯನ್ನು ಹಡಗಿನಲ್ಲಿ ದಾಟಿ ಚಾಂಟಲಿ, ಫ್ರಾನ್ಸ್ ಪ್ರಜೆಗಳ ಪ್ರಶಂಸೆಗೆ ಕನ್ನಡ ಕಲಾವಿದರು ಪಾತ್ರರಾದರು. ಫ್ರಾನ್ಸ್ ನ ಬೀದಿಬೀದಿಗಳಲ್ಲಿ ಯಕ್ಷಗಾನದ ಹೆಜ್ಜೆಯ ತಾಳಕ್ಕೆ, ಚಂಡೆಯ ಮೇಳಕ್ಕೆ ಫ್ರೆಂಚರು ತಾವೂ ಕುಣಿದು ನಲಿದಾಡಿದರು. ಇಪ್ಪತ್ತು ಸಾವಿರಕ್ಕೂ ಹೆಚ್ಚು ಫ್ರೆಂಚರಿಂದ ಚಪ್ಪಾಳೆಯ ಸುರಿಮಳೆ. ಯಕ್ಷಗಾನ ಕಲಾವಿದರ ಬಣ್ಣದ ಬೆಡಗನ್ನು ಕ್ಯಾಮೆರಾದಲ್ಲಿ ಸೆರೆಹಿಡಿದರು. ಪತ್ರಿಕೆ, ಟಿವಿಯವರು ಚಿತ್ರಗಳನ್ನು ತೆಗೆದು ಸಂದರ್ಶನವನ್ನು ಮಾಡಿದರು. ಚಾಂಟಲಿ ಮೇಯರ್ ಯಕ್ಷರ ವೇಷಭೂಷಣ, ಹಾವಭಾವ, ಹೆಜ್ಜೆಯ ತಾಳಕ್ಕೆ ಮನಸೋತು ಪಾರಿತೋಷಕವನ್ನು ಇತ್ತು ಗೌರವಿಸಿದರು.

ಕುಂಟಿಕಾನಮಠ ಕುಮಾರ್, ದೀಪಿಕಾ ಕುಂಟಿಕಾನಮಠ, ಅರುಣ್ ರಾಘವೇಂದ್ರ, ಸರಿತಾ ಅರುಣ್, ಶರತ್ ರಾಮಚಂದ್ರ ಐಯರ್, ಚೇತನಾ ಶರತ್ ಮುಂತಾದವರು ಕರ್ನಾಟಕದ ಸಂಸ್ಕೃತಿಯನ್ನು ಮೆರೆದಾಡಿಸಿದರು. ಕುಮಾರ್ ಕುಂಟಿಕಾನಮಠ ಮತ್ತು ಅರುಣ್ ರಾಘವೆಂದ್ರರವರು ರಾಜವೇಷವನ್ನು ಹಾಕಿ ಗಾಂಭಿರ್ಯದಿಂದ ಯಕ್ಷಗಾನದ ನಡೆಯನ್ನು, ದೀಂಗಿಣವನ್ನು ಪ್ರದರ್ಶಿಸಿದರು. ಸರಿತಾ ಅರುಣ್ ರವರು ಯಕ್ಷಗಾನದ ಪುಂಡುವೇಷವನ್ನು ಹಾಕಿ ಫ್ರೆಂಚರ ಮನ ಮುದಗೊಳಿಸಿದರು. ದೀಂಗಿಣ ಹಾಕಿ ಚಪ್ಪಾಳೆ ಗಿಟ್ಟಿಸಿಕೊಂಡರು.

ದೀಪಿಕಾ ಕುಂಟಿಕಾನಮಠ ಮತ್ತು ಚೇತನಾ ಶರತ್ ರವರು ಸಿಂಹ ಮತ್ತು ಹುಲಿಯ ವೇಷವನ್ನು ಹಾಕಿಕೊಂಡು ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರನ್ನು ಆಕರ್ಷಿಸಿದರು. ವೇಷ ಭೂಷಣ ತಯಾರಿಸಿದವರು ದೇವಕನಾ ಕೃಷ್ಣಭಟ್. ಮಂಗಳೂರಿನ ಲಲಿತ ಕಲಾ ಆರ್ಟ್ಸ್ ನ ಮುದ್ರಾಡಿ ಹಾಗು ವೇಷಗಳನ್ನು ಸಮಯಕ್ಕೆ ಸರಿಯಾಗಿ ಲಂಡನ್ ಗೆ ಕಳುಹಿಸಿಕೊಟ್ಟು ಡೆಂಬಾಳೆ ಮೋಹನ್ ದಾಸ್ ಶೆಟ್ಟಿ ಕನ್ನಡಿಗರ ಶ್ಲಾಘನೆಗೆ ಪಾತ್ರರಾದರು. ಫ್ರಾನ್ಸ್ ಪರೇಡಿನ ಚಿತ್ರಗಳನ್ನು ತೆಗೆದು ಕಾರ್ಯಕ್ರಮವನ್ನು ಚಿತ್ರೀಕರಿಸಿದವರು ಶರತ್ ರಾಮಚಂದ್ರ ಐಯರ್.

ಲಂಡನ್ ಕನ್ನಡಿಗರ ಫ್ರೆಂಚ್ ಯಕ್ಷಗಾನ ಪರೇಡ್ ನ ಚಿತ್ರಗಳು

2008ರಲ್ಲಿ ಲಂಡನ್ ರಾಜಬೀದಿಗಳಲ್ಲಿ ಮಿಂಚಿದ ಕರ್ನಾಟಕದ ಯಕ್ಷಗಾನ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X